ಅಂಗವಿಲಕರಿಗೆ ಸ್ಥಳಾವಕಾಶ ಕಲ್ಪಿಸಿ
ಮೈಸೂರು: ಜಂಬೂಸವಾರಿ ವೀಕ್ಷಿಸಲು ಅಂಗವಿಕಲರಿಗೆ ಸ್ಥಳಾವಕಾಶ ಕಲ್ಪಿಸಿಕೊಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಲಕರ ವೇದಿಕೆ ಹಾಗೂ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು. ದಸರಾ ಮೆರವಣಿಗೆ ವೀಕ್ಷಿಸಲು ಈ ಬಾರಿಯೂ ಅಂಗವಿಕಲರಿಗೆ ಪ್ರತ್ಯೇಕ ಸ್ಥಳ ಮೀಸಲಿಡಬೇಕು. ಅಲ್ಲಿ ಆಸನ, ರ್ಯಾಂಪ್, ವೀಲ್ಚೇರ್ ವ್ಯವಸ್ಥೆ ಮಾಡಿಸಬೇಕು. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಿಸಲು ಸೂಕ್ತ ಸ್ಥಳಾವಕಾಶ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ದಸರಾ ವಸ್ತುಪ್ರದರ್ಶನದಲ್ಲಿ ಅಂಗವಿಕಲರ ಬಗ್ಗೆ ಮಾಹಿತಿ, ಅರಿವು, ಸಾಧನ ಸಲಕರಣಾ ವಿವರ, ಸೌಲಭ್ಯ ಕುರಿತು ಪ್ರತ್ಯೇಕ ಮಳಿಗೆ ಸ್ಥಾಪಿಸಬೇಕು. ವಸ್ತುಪ್ರದರ್ಶನ, ಮೃಗಾಲಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಅಂಗವಿಕಲರಿಗೆ ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು. ವೇದಿಕೆಯ ಸಂಚಾಲಕ ಎಂ. ಪ್ರಭುಸ್ವಾಮಿ, ಮುಖಂಡರಾದ ದಿಲೀಪ್ಕುಮಾರ್, ಜಗದೀಶ್, ಆರ್.ಎಂ. ಸ್ವಾಮಿ, ಡಿ. ಚೌಡಯ್ಯ, ಕೆ.ಎಸ್. ಮಹದೇವಸ್ವಾಮಿ, ಎನ್. ಶ್ರೀಧರ್ ದೀಕ್ಷಿತ್, ಕನ್ನಡ ಸೇನೆಯ ನಗರಾಧ್ಯಕ್ಷ ಕೆ. ಶಶಿಕುಮಾರ್ ಇದ್ದರು.
ವಿಚಿತ್ರ ಸೊಳ್ಳೆಗಳ ಹಾವಳಿ...
ಮೈಸೂರು: ಮೈಸೂರಿನ ವಿವೇಕಾನಂದ ನಗರ, ರಾಮಕೃಷ್ಣ ನಗರ, ಕುವೆಂಪುನಗರ ಪ್ರದೇಶಗಳಲ್ಲಿ ವಿಚಿತ್ರ ರೀತಿಯ ಸೊಳ್ಳೆಗಳು ಗುಂಪು ಗುಂಪಾಗಿ ಕಾಣಿಸಿಕೊಂಡಿವೆ. ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಇವು ಮಾಮೂಲಿ ಸೊಳ್ಳೆಗಳಿಗಿಂತ ಗಾತ್ರದಲ್ಲಿ ದೊಡ್ಡವು. ಈ ಸೊಳ್ಳೆಗಳ ಹಾವಳಿ ತಪ್ಪಿಸಲು ನಗರ ಪಾಲಿಕೆ ತಕ್ಷಣ ಧೂಮೀಕರಣ ಮಾಡಬೇಕು ಎಂದು ವಕೀಲ ಪಿ.ಜೆ. ರಾಘವೇಂದ್ರ ಆಗ್ರಹಿಸಿದ್ದಾರೆ. ಪಾಲಿಕೆ ಕಚೇರಿಗೆ ದೂರವಾಣಿ ಕರೆ ಮಾಡಿದರೆ ಅಧಿಕಾರಿಗಳು ದಸರೆಯಲ್ಲಿ ಬ್ಯುಸಿ ಎಂಬ ಉತ್ತರ ನೀಡುತ್ತಿದ್ದಾರೆ. ದಸರೆಯಷ್ಟೇ ನಗರದ ನಾಗರಿಕರ ಆರೋಗ್ಯ ಕೂಡ ಮುಖ್ಯ. ಒಂದು ವೇಳೆ ಸೊಳ್ಳೆಗಳಿಂದ ಸಾಂಕ್ರಮಿಕ ರೋಗ ಹರಡಿದರೆ ಪಶ್ಚಾತಾಪ ಪಡಬೇಕಾಗುತ್ತದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರು ತಕ್ಷಣ ಗಮನಹರಿಸಬೇಕಿದೆ.
ಪಿಎಚ್.ಡಿ ಪದವಿ
ಮೈಸೂರು: ಡಾ. ಎಸ್.ಎಂ. ಭಾಗ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಎಂ. ಸರಿತಾ ಅವರು ಪ್ರಾಣಿಶಾಸ್ತ್ರ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್.ಡಿ ಪದವಿ ನೀಡಿದೆ. ಡಾ. ಎ.ಪಿ. ಜ್ಞಾನಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಕೆ.ಸಿ. ಪ್ರವೀಣ್ ಅವರು ಭೌತಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್.ಡಿ ಪದವಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

