ಅರಮನೆ ಆವರಣ ಈಗ ಕಸಮಯ...
ಕ.ಪ್ರ.ವಾರ್ತೆ ಮೈಸೂರು ಅ. 15
ಮತ್ತೊಂದು ದಸರಾ ಮಹೋತ್ಸವ ಜಂಬೂಸವಾರಿಗೆ ಸಾಕ್ಷಿಯಾದ ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಈಗ ಕಸದ ರಾಶಿ ತುಂಬಿದೆ.
ಸೋಮವಾರ ನಡೆದ ಜಂಬೂಸವಾರಿಯನ್ನು ಅರಮನೆ ಆವರಣದಲ್ಲಿ ಕುಳಿತು ವೀಕ್ಷಿಸಿದ ಸಾವಿರಾರು ಮಂದಿ ಕಸ ಹಾಕಿ ಹೋಗಿದ್ದಾರೆ. ಆದರೆ, ಈ ಕಸ ತೆಗೆಯುವ ಕೆಲಸ ಮಾತ್ರ ಸರಿಯಾಗಿ ಆಗುತ್ತಿಲ್ಲ. ಅರಮನೆ ವೀಕ್ಷಿಸಲು ಮಂಗಳವಾರ ಸಹ ಸಾವಿರಾರು ಮಂದಿ ದೇಶ ಮತ್ತು ವಿದೇಶಗಳ ಪ್ರವಾಸಿಗರು ಆಗಮಿಸಿದ್ದರು. ಅರಮನೆ ಮುಂಭಾಗದಲ್ಲಿ ಬಿದ್ದಿದ್ದ ಕುರ್ಚಿ, ಪೆಂಡಾಲ್, ಟೇಬಲ್‌ಗಳು ಜೊತೆಗೆ ಕಸದ ರಾಶಿಗಳನ್ನು ಕಂಡು ಕಿರಿಕಿರಿ ಅನುಭವಿಸಿದರು. ಆದರೂ ಸಹ ಇರಲಿ ಎಂದು ಕಸದ ಮಧ್ಯೆಯೂ ಫೋಟೋ ಕ್ಲಿಕ್ಕಿಸಿಕೊಂಡು ಹೋದರು. ಬೆಳಗ್ಗೆ 11 ನಂತರ ಅಷ್ಟೇ ಕೆಲವು ಸ್ವಚ್ಛತಾ ಸಿಬ್ಬಂದಿ ಅರಮನೆ ಆವರಣದಲ್ಲಿ ಕಸ ಗೂಡಿಸುತ್ತಿದ್ದ ಕಾಣುತ್ತಿತ್ತು.
ಪೆಂಡಾಲ್, ಕುರ್ಚಿ ತೆಗೆದ ಮೇಲೆ ಕಸ ಗುಡಿಸದರೇ ಎಲ್ಲವು ಸ್ವಚ್ಛವಾಗಿ ಕಾಣುತ್ತದೆ. ಪೆಂಡಾಲ್, ಕುರ್ಚಿ ತೆಗೆಯುವ ಮುನ್ನ ಗೂಡಿಸಿದರೇ ಮತ್ತೆ ಕಸ ಬೀಳುತ್ತದೆ. ಈ ಉದ್ದೇಶದಿಂದಲೇ ತಡವಾಗಿ ಸ್ವಚ್ಛತಾ ಕಾರ್ಯ ಆರಂಭಿಸಿರುವುದಾಗಿ ಸಿಬ್ಬಂದಿಯೊಬ್ಬರು ಹೇಳಿದರು. ಆದರೆ, ನಮಗೆ ಕಸ ದರ್ಶನ ಮಾಡಿಸುವುದು ಸರಿಯಲ್ಲ ಎಂದು ಪ್ರವಾಸಿಯೊಬ್ಬರು ಸಿಡಿಮಿಡಿಗೊಂಡರು.
ಉಪ್ಪಾರರಿಗೆ ಮನೆ ನಿರ್ಮಿಸಿಕೊಡುವಂತೆ ಮನವಿ
ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜದವರು ಅಧಿಕ ಸಂಖ್ಯೆಯಲ್ಲಿದ್ದು, ಅವರಲ್ಲಿ ಕೆಲವರು ತೀರಾ ಬಡತನದಿಂದ ಬಳಲುತ್ತಿದ್ದಾರೆ. ಇನ್ನೂ ಗುಡಿಸಲಿನಲ್ಲಿ ವಾಸಿಸುತ್ತಿರುವ ಉಪ್ಪಾರರಿಗೆ ಮನೆ ನಿರ್ಮಿಸಿಕೊಡುವಂತೆ ಉಪ್ಪಾರ ಸಮಾಜ ಪರಿವರ್ತನಾ ಸಮಿತಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಮಂಗಳವಾರ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ವರುಣ ಕ್ಷೇತ್ರದ ಮತದಾರರ ಕೃತಜ್ಞತೆ ಸಮಾವೇಶದಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಲಾಯಿತು. ಗುಡಿಸಲು ಮುಕ್ತ ಸಮಾಜ ನಿರ್ಮಾಣದ ಭರವಸೆ ನೀಡುವ ತಾವು ಮನೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಅನೇಕ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅವರಿಗೆ ಮನೆ ನಿರ್ಮಿಸಿಕೊಡುವಂತೆ ಸಮಿತಿಯ ಕೆ.ಎನ್. ಲಿಂಗಪ್ಪ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

