ಮೈಸೂರು

ಚಾಮುಂಡೇಶ್ವರಿ ರಥೋತ್ಸವ ಇಂದು

Published On :

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿಯ ರಥೋತ್ಸವವು ಅ.17ರ ಬೆಳಗ್ಗೆ 7.30ರಿಂದ 8.15ರೊಳಗೆ ಜರುಗಲಿದೆ. ರಥೋತ್ಸವದಲ್ಲಿ ಮೈಸೂರು ರಾಜವಂಶಸ್ಥರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಪ್ರಮೋದಾದೇವಿ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಭಾಗವಹಿಸಲಿದ್ದಾರೆ. ಅ.19ರ ಸಂಜೆ 7ಕ್ಕೆ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ.
ಎಸಿಪಿ ಕವಿತಾ ಅಧಿಕಾರ ಸ್ವೀಕಾರ
ಮೈಸೂರು: ನಗರದ ಕೃಷ್ಣರಾಜ ಉಪ ವಿಭಾಗದ  ಎಸಿಪಿಯಾಗಿ ಬಿ.ಟಿ. ಕವಿತಾ ಅವರು ಬುಧವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದರು. ನಿಗರ್ಮಿತ ಎಸಿಪಿ ಎ.ಎನ್. ಪ್ರಕಾಶ್‌ಗೌಡ ಅವರು ಕವಿತಾ ಅವರಿಗೆ ಅಧಿಕಾರ ವಹಿಸಿಕೊಟ್ಟರು. ಪ್ರಕಾಶ್‌ಗೌಡ ಅವರಿಗೂ ಇನ್ನೂ ಸ್ಥಳ ತೋರಿಸಿಲ್ಲ. ಕವಿತಾ ಅವರು ಆರಂಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಕ್ಲರಿಕಲ್ ಹುದ್ದೆಯಲ್ಲಿದ್ದರು. 2010ರಲ್ಲಿ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾಗಿ, ತರಬೇತಿ ಮುಗಿದ ಬಳಿಕ 2012ರಲ್ಲಿ ಮಂಗಳೂರು ಕೇಂದ್ರ ಉಪ ವಿಭಾಗದಲ್ಲಿ ಎಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮಂಗಳೂರಿನಿಂದ ಮೈಸೂರಿನ ಕೆ.ಆರ್. ಉಪ ವಿಭಾಗ ಎಸಿಪಿಯಾಗಿ ಬಂದಿದ್ದಾರೆ.
ಬಿಜೆಪಿ ಹಿಂದುಳಿದ ಮೋರ್ಚಾಗೆ ನೇಮಕ
ಮೈಸೂರು: ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರು- ಜಗಪಾಲ್(ಪಿರಿಯಾಪಟ್ಟಣ), ಚಂದ್ರೇಗೌಡ(ಹುಣಸೂರು), ನಾಗರಾಜ್(ಟಿ. ನರಸೀಪುರ), ಶಿವಕುಮಾರ್(ಚಾಮುಂಡೇಶ್ವರಿ), ಕಾಳಿಂಗರಾಜ್(ಕೆ.ಆರ್. ನಗರ), ಪ್ರಧಾನ ಕಾರ್ಯದರ್ಶಿ- ಹಿನಕಲ್ ಪಾಪಣ್ಣ(ಚಾಮುಂಡೇಶ್ವರಿ), ಎಂ. ನಾಗೇಂದ್ರ(ನಂಜನಗೂಡು), ಕಾರ್ಯದರ್ಶಿ- ಶಂಕರ್(ಹುಣಸೂರು), ರಾಜಶೇಖರ್(ವರುಣ), ನಾಗರಾಜು(ಎಚ್.ಡಿ. ಕೋಟೆ), ಶಿವಣ್ಣ(ವರುಣ ಕ್ಷೇತ್ರ), ಗಿರಿ ಮಲ್ಲೇಶ್(ಟಿ. ನರಸೀಪುರ), ಕಾರ್ಯಕಾರಿಣಿ ಸದಸ್ಯರು- ವಾದಿರಾಜ್, ರಾಮೇಗೌಡ(ಹುಣಸೂರು), ಕಾಂತರಾಜ ಅರಸು, ಜಿ. ಸ್ವಾಮಿ(ಪಿರಿಯಾಪಟ್ಟಣ), ಫಣಿಕುಮಾರ್, ಸತ್ಯ(ಎಚ್.ಡಿ. ಕೋಟೆ), ಶಾಂತಕುಮಾರ್, ರಾಚಯ್ಯ(ನಂಜನಗೂಡು), ಸಿದ್ದಪ್ಪ, ಬಸವಶೆಟ್ಟಿ(ವರುಣ), ರಾಮಸ್ವಾಮಿ(ಟಿ. ನರಸೀಪುರ), ರಾಚಪ್ಪ, ಕುಮಾರ(ಕೆ.ಆರ್. ನಗರ), ಲಕ್ಷ್ಮೀನಾರಾಯಣಚಾರ್(ಚಾಮುಂಡೇಶ್ವರಿ ಕ್ಷೇತ್ರ).
ಬಿಜೆಪಿಗೆ ನೇಮಕ
ಮೈಸೂರು: ಜಿಲ್ಲಾ ಬಿಜೆಪಿ ರೈತ ಮೋರ್ಚಾಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅಧ್ಯಕ್ಷ ಮಿರ್ಲೆ ಶ್ರೀನಿವಾಸೇಗೌಡ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರು, ಮಹದೇವು, ಶಿವಕುಮಾರ್, ಯೋಗೀಶ್, ಪ್ರಧಾನ ಕಾರ್ಯದರ್ಶಿಗಳಾಗಿ ದೇವರಾಜು, ಎಸ್. ಗುರಪಾದಪ್ಪ, ಕಾರ್ಯದರ್ಶಿಗಳಾಗಿ ಸೋಮರಾವ್, ಸೋಮಶೇಖರ್, ಶೇಖರ್, ಕಲ್ಪನಾ, ಮಹೇಶ್, ಖಜಾಂಚಿಯಾಗಿ ಕುಮಾರಸ್ವಾಮಿ, ಕಾರ್ಯಕಾರಿಣಿ ಸದಸ್ಯರಾಗಿ ಗುರುಪಾದಪ್ಪ, ಕೆ.ಎಂ. ಮಹದೇವಯ್ಯ, ಶಿವಮೂರ್ತಿ, ಸುಬ್ಬಣ್ಣಾಚಾರ್, ಮಹೇಶ್, ನಾರಾಯಣ, ಗೋಪಾಲ್, ಎಚ್.ಪಿ. ಸೋಮಶೇಖರ್, ರೇವಣ್ಣ, ಮಂಜು, ಮಹೇಶ್, ನಾಗರಾಜು, ಧರ್ಮಪ್ಪ, ಮಹದೇವ, ನಂದೀಶ್, ಪರಶಿವಮೂರ್ತಿ ನೇಮಕವಾಗಿದ್ದಾರೆ.
ತುಟ್ಟಿ ಭತ್ಯೆಗೆ ಕೃತಜ್ಞತೆ
ಮೈಸೂರು: ರಾಜ್ಯ ಸರ್ಕಾರಿ ನೌಕರರಿಗೆ ಜು.1ರಿಂದ ಜಾರಿಗೆ ಬರುವಂತೆ ಶೇ.6ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿರುವುದರಿಂದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ರಾಜ್ಯಾಧ್ಯಕ್ಷ ಎಲ್. ಭೈರಪ್ಪ ಅವರನ್ನು ಅಭಿನಂದಿಸಿದ್ದಾರೆ.
ಕಾವೇರಿಗೆ ಅಭಿಷೇಕ
ಮೈಸೂರು: ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದ ವತಿಯಿಂದ ಅ.18ರ ಬೆಳಗ್ಗೆ 10ಕ್ಕೆ ತಲಕಾವೇರಿಯಲ್ಲಿ ಉದ್ಭವವಾದ ತೀರ್ಥವನ್ನು ತಂದು ಕಾವೇರಿ ಮಾತೆಗೆ ಅಭಿಷೇಕ ಮಾಡಲಾಗುತ್ತದೆ.
ಮಸ್ತಕಾಭಿಷೇಕ
ಹುಣಸೂರು: ಗೊಮ್ಮಟಗಿರಿಯ ಗೋಮ್ಮಟೇಶ್ವರ ಸ್ವಾಮಿಗೆ ಈ ಬಾರಿ ನಡೆಯುವ ಮಸ್ತಕಾಭಿಷೇಕವನ್ನು ಅ.20ರಂದು 64ನೇ ವರ್ಷದ ಮಸ್ತಕಾಭಿಷೇಕ ಪೂಜಾ ಮಹೋತ್ಸವ ಹಮ್ಮಿಕೊಳ್ಳಲು ಶ್ರೀ ಗೋಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಡಾ. ಡಿ. ಪ್ರಭಾಮಂಡಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದೆ. ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಹಾಗೂ ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವರು. ಜೊತೆಗೆ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಹಬ್ಬದ ಸಡಗರ, ಪ್ರಸಿದ್ಧ ಜಾತ್ರೆಯಾಗಿದೆ ಎಂದು ಕಾರ್ಯದರ್ಶಿ ಡಾ. ಎಂ.ವಿ. ಶಾಂತಕುಮಾರ್ ತಿಳಿಸಿದ್ದಾರೆ. ಸರ್ಕಾರ ಗೊಮ್ಮಟಗಿರಿಯತ್ತ ಗಮನಿಸಿ ಶ್ರೀಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರ ಸ್ಥಾಪಿಸಿ, ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರೋಟರಿ ವಿಜ್ಞಾನ ಸ್ಪರ್ಧೆಗೆ ಅರ್ಜಿ
ಮೈಸೂರು: ರೋಟರಿ ಕ್ಲಬ್ ಆಫ್ ಮೈಸೂರು ಬೃಂದಾವನವು ಮೈಸೂರು, ಚಾಮರಾಜನಗರ, ಮಡಿಕೇರಿ ಹಾಗೂ ಹಾಸನ ಜಿಲ್ಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಿದೆ. ಆಸಕ್ತರು ತಮ್ಮ ಶಾಲೆಯ ಮೂಲಕ ಅರ್ಜಿ ಸಲ್ಲಿಸಬಹುದು. ಸ್ಪರ್ಧೆಯ ಪ್ರಯೋಗದ ವಿವರ 2 ಅಥವಾ 4 ಹಾಳೆ ಮೀರಬಾರದು. 30 ಉತ್ತಮ ಪ್ರಯೋಗಗಳನ್ನು ಆಯ್ಕೆ ಮಾಡಿ ನ.30 ಮತ್ತು ಡಿ.1ರಂದು ವಿಜ್ಞಾನ ರೋಟರಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಈ ಪೈಕಿ ಅತ್ಯುತ್ತಮ ನಾಲ್ಕು ಪ್ರದರ್ಶನಗಳಿಗೆ ಬಹುಮಾನ ನೀಡಲಾಗುತ್ತದೆ. ಅರ್ಜಿಗಾಗಿ ನಂ.366, ರೋಟರಿ ಬೃಂದಾವನ ಶಾಲೆ, ಬೃಂದಾವನ ಬಡಾವಣೆ, ಮೈಸೂರು- 20 ಅಥವಾ ವಿವರಕ್ಕೆ ದೂ. 98867 64542 ಸಂಪರ್ಕಿಸಬಹುದು.
ಅನ್ನಭಾಗ್ಯ ಅಧ್ವಾನಕ್ಕೆ ಅಧಿಕಾರಿಗಳೇ ಕಾರಣ
ಮೈಸೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ದಿಕ್ಕು ತಪ್ಪಲು ಅಧಿಕಾರಿಗಳೇ ಮುಖ್ಯ ಕಾರಣರು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮುಖ್ಯಸ್ಥ ಜೆ.ಎಂ. ಉರೂಜ್ ಅಹಮ್ಮದ್ ಆರೋಪಿಸಿದ್ದಾರೆ. ಸುಮಾರು ನ್ಯಾಯಬೆಲೆ ಅಂಗಡಿಗಳಲ್ಲಿ 50-60 ಬಿಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡುತ್ತಿಲ್ಲ. ಎಸ್‌ಎಂಎಸ್ ಕಳುಹಿಸಿ ಎಂದು ಹೇಳುತ್ತಾರೆ. ಆದರೆ ಸಂದೇಶ ಕಳುಹಿಸಿದರೂ ಸೂಕ್ತ ಉತ್ತರ ಬರುವುದಿಲ್ಲ. ಒಂದು ವೇಳೆ ಆಹಾರ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುವುದಿಲ್ಲ. ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೊಂದು ಪಡೆಯಿರಿ ಎಂದು ಅಲೆಸುತ್ತಾರೆ. ಆದ್ದರಿಂದ ಈಗಿರುವ ಬಿಪಿಎಲ್ ಕಾರ್ಡಿಗೆ ಅನ್ನಭಾಗ್ಯ ಸೌಲಭ್ಯ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಮುಕ್ತ ವಿವಿ ಸಂಪರ್ಕ ಕಾರ್ಯಕ್ರಮ
ಮೈಸೂರು: ರಾಜ್ಯ ಮುಕ್ತ ವಿವಿಯ ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ 4ನೇ ಸೆಮಿಸ್ಟರ್ ಎಂಬಿಎ ವಿದ್ಯಾರ್ಥಿಗಳಿಗೆ 9 ದಿನಗಳ ಸಂಪರ್ಕ ಕಾರ್ಯಕ್ರಮವು ಅ.19ರಿಂದ 27ರವರೆಗೆ ನಗರದ ರಾಜ್ಯ ಮುಕ್ತ ವಿವಿ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿ. ಮಹದೇವಮೂರ್ತಿ ಹೇಳಿದ್ದಾರೆ.
ಕೆಪಿಸಿಸಿಗೆ ನೇಮಕ
ಮೈಸೂರು: ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಗೆ ಬರುವ ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿಗೆ ಕೆಪಿಸಿಸಿ ಸದಸ್ಯರಾಗಿ ಆರ್.ಡಿ. ಕೊಪ್ಪಲಿನ ಟಿ.ಡಿ. ಸ್ವಾಮಿ ಹಾಗೂ ಜಿಪಂ ಮಾಜಿ ಸದಸ್ಯ ಎನ್. ಮಂಜುನಾಥ್ ನೇಮಕವಾಗಿದ್ದಾರೆ.
ರಾಜು ನೇಮಕ
ಮೈಸೂರು: ನಗರ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷರಾಗಿ ಗಾಯತ್ರಿಪುರಂನ ಎನ್. ರಾಜು ನೇಮಕವಾಗಿದ್ದಾರೆ.
ಅಶೋಕ್ ಪ್ರಭುಗೆ ಪಿಎಚ್.ಡಿ ಪದವಿ
ಮೈಸೂರು: ಡಾ. ಕೆ. ರಾಮಚಂದ್ರ ಕಿಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಸ್. ಅಶೋಕ್ ಪ್ರಭು ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ದಸರಾ ಟ್ರೋಫಿ ಡ್ಯಾನ್ಸ್ ಸ್ಪರ್ಧೆ
ಮೈಸೂರು: ಮೈಸೂರು ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ಅ.27ರಂದು ದಸರಾ ಟ್ರೋಫಿ ಡ್ಯಾನ್ಸ್ ಸ್ಪರ್ಧೆಯನ್ನು ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ. ಆಸಕ್ತರು ಅ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರಕ್ಕೆ ಮೊ. 92420 49921, 95919 33889 ಸಂಪರ್ಕಿಸಬಹುದು ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ಎಚ್. ಲೀಲಾವತಿ ತಿಳಿಸಿದ್ದಾರೆ.
ನಾಳೆ ಕವನ ಸಂಕಲನ ಬಿಡುಗಡೆ
ಮೈಸೂರು: ಶಿಕ್ಷಕಿ ಎಂ.ಎಲ್. ಶಶಿಕಲಾ ಮರೀಗೌಡ ಅವರ ಕರುನಾಡ ನೇಸರ ಕವನ ಸಂಕಲನದ ಬಿಡುಗಡೆ ಸಮಾರಂಭವು ಅ.18ರ ಬೆಳಗ್ಗೆ 10ಕ್ಕೆ ಎಂಜಿನಿಯರುಗಳ ಸಂಸ್ಥೆಯಲ್ಲಿ ನಡೆಯಲಿದೆ. ಡಾ. ಸಿ.ಪಿ. ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸುವರು. ಡಾ. ದೇಜಗೌಡ ಕೃತಿ ಬಿಡುಗಡೆ ಮಾಡುವರು. ಡಾ. ಟಿ.ಕೆ. ಕೆಂಪೇಗೌಡ ಮಾತನಾಡುವರು.
ಸುಗಮ ಸಂಗೀತ
ಮೈಸೂರು: ಬೋಗಾದಿಯ ಮೇರು ಕಲಾ ಸಮೂಹದ ವತಿಯಿಂದ ಅ.18ರಿಂದ 20ರವರೆಗೆ ಯುವಕರು ಹಾಗೂ ಪುರುಷರಿಗಾಗಿ ಮೂರು ದಿನಗಳ ಸುಗಮ ಸಂಗೀತ ಶಿಬಿರ ಏರ್ಪಡಿಸಿದೆ. ಆಸಕ್ತರು ಮೊ. 91411 19651, ದೂ. 2598328 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.