'ಅಭಿಮಾನಿಗಳಿಗೆ ಮಾತ್ರ ತಲೆಬಾಗುವೆ'
ಕ.ಪ್ರ.ವಾರ್ತೆ ಬೈಲುಕುಪ್ಪೆ ಅ. 17
ನಾನು ತಲೆಬಾಗುವುದು ಪ್ರೀತಿಯ ಅಭಿಮಾನಿಗಳಿಗೆ ಮಾತ್ರ ಎಂದು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹೇಳಿದರು.
ಸಮೀಪದ ಗಡಿಭಾಗವಾದ ಕೊಪ್ಪ ಗ್ರಾಮದ ಕಾವೇರಿ ನದಿ ದಡದಲ್ಲಿ ಗುರುವಾರ ಕಾವೇರಿ ಮಾತೆಯ ಪ್ರತಿಮೆ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿಮಾನಿಗಳು ನೀಡುವ ಪ್ರೀತಿ, ವಿಶ್ವಾಸ, ಕಲಾವಿದರನ್ನು ಪ್ರೋತ್ಸಾಹಿಸುತ್ತದೆ, ಇದೇ ನಮಗೆ ಸ್ಪೂರ್ತಿ. ನಾನು ಯಾವತ್ತು ಕಷ್ಟಪಟ್ಟವನಲ್ಲ, ಕಷ್ಟ ನನಗೆ ಗೊತ್ತಿಲ್ಲ, ನಾನು ಯಾವುದೇ ಕೆಲಸ, ಕಾರ್ಯ ಮಾಡಬೇಕಾದರೆ ಇಷ್ಟಪಟ್ಟೆ ಮಾಡುವುದು, ಕಳೆದ 25ರಿಂದ 30 ವರ್ಷಗಳ ಚಿತ್ರರಂಗದ ಇತಿಹಾಸ ನನ್ನ ಬದುಕಿನಲ್ಲಿ ಹಲವಾರು ಅನುಭವವಾಗಿದೆ.
ಅದರಲ್ಲಿ ನನ್ನ ಅಭಿಮಾನಿ ದೇವರುಗಳು ತೋರುತ್ತಿರುವ ಪ್ರೀತಿ, ವಿಶ್ವಾಸ, ನಾನೆಂದೂ ಮರೆಯುವುದಿಲ್ಲ, ಕಾವೇರಿ ಮಾತೆ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಮಾತನಾಡಿ, ಕಾವೇರಿ ತಾಯಿಯ ಅನುಗ್ರಹವಿಲ್ಲದೆ, ಈ ನಾಡಿನಲ್ಲಿ ಏನು ನಡೆಯುವುದಿಲ್ಲ, ಕಾವೇರಿ ತಾಯಿ ಮೈದುಂಬಿ ಹರಿದರೆ ನಾಡು ಸಮೃದ್ಧಿಯಾಗುತ್ತದೆ ಎಂದು ಹೇಳಿದರು.
ಭಾರವಿ ರವಿಚಂದ್ರನ್, ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ಪದಾಧಿಕಾರಿಗಳಾದ ವಿಜೇಂದ್ರಪ್ರಸಾದ್, ರವೀಂದ್ರಪ್ರಸಾದ್, ಎಸ್ಎಲ್ವಿ ಕಾಫಿ ವರ್ಕ್ಸ್ನ ಸಾತಪ್ಪನ್, ನಾರಾಯಣನ್, ವಿಶ್ವನಾಥನ್, ಮಾಜಿ ಶಾಸಕ ಎಸ್. ಬಾಲರಾಜು, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಎಂ. ರಾಜೇಗೌಡ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಬಾರ್ಸೆ ಪುಟ್ಟಸ್ವಾಮಿ, ಕಾರ್ಯದರ್ಶಿ ಬೆಮ್ಮತ್ತಿ ಚಂದ್ರು, ತಾ. ಬಿಜೆಪಿ ಅಧ್ಯಕ್ಷ ಆರ್.ಟಿ. ಸತೀಶ್, ಉಪಾಧ್ಯಕ್ಷ ಕೆ.ಎಂ. ನಾಗರಾಜ್, ಅಭಿಮಾನಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

