ಮೈಸೂರು

ತಪಾಸಣಾ ಶಿಬಿರ

Published On :

ಮೈಸೂರು: ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವಾಜಪೇಯಿ ಆರೋಗ್ಯಶ್ರೀ ಯೋಜನೆ ಸಹಯೋಗದೊಂದಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರವು ಅ.21ರ ಬೆಳಗ್ಗೆ 9ರಿಂದ 4ರವರೆಗೆ ಕೆ.ಆರ್. ಆಸ್ಪತ್ರೆಯಲ್ಲಿ ಆಯೋಜಿಸಿದೆ. ವಿವರಕ್ಕೆ ಮೊ. 9620625258 ಸಂಪರ್ಕಿಸಬಹುದು.

ಕಂಪ್ಯೂಟರ್ ಸರ್ವಿಸಿಂಗ್
ಕುವೆಂಪುನಗರದ ಐಐಎಚ್‌ಟಿ ಶಾಖೆಯ ವತಿಯಿಂದ ಅ.21ರಿಂದ 26ರವರೆಗೆ ಉಚಿತವಾಗಿ ಕಂಪ್ಯೂಟರ್ ಲ್ಯಾಪ್‌ಪಾಟ್ ಹಾಗೂ ಡೆಸ್ಕ್‌ಟಾಪ್‌ಗಳ ಸರ್ವಿಸಿಂಗ್ ಮೇಳ ಹಮ್ಮಿಕೊಂಡಿದೆ. ವಿವರಕ್ಕೆ ದೂ. 2560268, ಮೊ. 91417 68494 ಸಂಪರ್ಕಿಸಬಹುದು.

ತರಬೇತಿ
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್‌ಡಿಎಂ ಐಎಂಡಿ ಸಂಸ್ಥೆಯ ವೆಲ್‌ನೆಸ್ ಕೇಂದ್ರದಲ್ಲಿ ಅ.21ರಿಂದ 26ರವರೆಗೆ ಕಾರ್ಯನಿರ್ವಾಹಕ, ವಾಣಿಜ್ಯೋದ್ಯಮಿ ಹಾಗೂ ಉದ್ಯಮಿಗಳಿಗೆ ತರಬೇತಿ ನೀಡಲಿದೆ. ವಿವರಕ್ಕೆ ಮೊ. 9880364121 ಸಂಪರ್ಕಿಸಬಹುದು.

ಸಂಕಷ್ಟಹರ ಚತುರ್ಥಿ
ಆಲನಹಳ್ಳಿ ಬಡಾವಣೆಯ ಶ್ರೀ ವಾಸವಿ ಶಾಂತಿಧಾಮ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಅ.22ರ ಸಂಜೆ 6ಕ್ಕೆ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ ಅಂಗವಾಗಿ ವಿಘ್ಮೇಶ್ವರ ಸ್ವಾಮಿಯ ವಿಶೇಷ ಸಾಮೂಹಿಕ ಪೂಜೆ ಹಮ್ಮಿಕೊಳ್ಳಲಾಗಿದೆ.

ವಿಚಾರ ಸಂಕಿರಣ
ಭಾರತೀಯ ಕೈಗಾರಿಕೆಗಳ ಒಕ್ಕೂಟದ ವತಿಯಿಂದ ಅ.23ರ ಬೆಳಗ್ಗೆ 9.30ಕ್ಕೆ ಹೊಟೇಲ್ ಸಂದೇಶ್ ದಿ ಪ್ರಿನ್ಸ್‌ನಲ್ಲಿ ಆಪರೇಷನ್ ಎಕ್ಸೆಲೆನ್ಸ್‌ನ ವಿಚಾರ ಸಂಕಿರಣ ನಡೆಯಲಿದೆ.

ತರಬೇತಿ

ಕುವೆಂಪುನಗರದ ಅಕ್ಷರ ಇನ್ಫೋಟೆಕ್ ಸಂಸ್ಥೆಯು ಸ್ಯಾಪ್ ತರಬೇತಿಯನ್ನು ನೀಡಲಿದೆ. ಆಸಕ್ತರು ಮೊ. 98453 98590 ಸಂಪರ್ಕಿಸಬಹುದು. ನೇತಾಜಿ ಎಜುಕೇಷನ್ ಫೌಂಡೇಶನ್ ವತಿಯಿಂದ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಎರಡು ತಿಂಗಳ ತರಬೇತಿ ನೀಡಲಿದೆ. ಆಸಕ್ತರು ಮೊ. 99806 39953 ಸಂಪರ್ಕಿಸಬಹುದು.

ಎನ್‌ಎಸ್‌ಎಸ್ ಶಿಬಿರ
ಹುಣಸೂರು:
ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಅ.20ರಿಂದ 25ರವರೆಗೆ ತಾಲೂಕಿನ ಬೀಜಗನಹಳ್ಳಿ ಗ್ರಾಪಂ ವ್ಯಾಪ್ತಿಯ ಉಯಿಗೌಡನಹಳ್ಳಿಯಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಏರ್ಪಡಿಸಲಾಗಿದೆ ಶಿಬಿರಾಧಿಕಾರಿ ಎಸ್.ಎಸ್. ಸುದರ್ಶನ ಬಾಬು ತಿಳಿಸಿದ್ದಾರೆ.

ಬೇಸಿಕ್ ಕಂಪ್ಯೂಟರ್ ತರಬೇತಿಗೆ ಅರ್ಜಿ
ನಂಜನಗೂಡು:
ಲೋಕ ಶಿಕ್ಷಣ ನಿರ್ದೇಶನಾಲಯದಿಂದ ಪಟ್ಟಣದ ಮಹಿಳಾ ವಿದ್ಯಾಪೀಠದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಆರ್ಥಿಕವಾಗಿ ಹಿಂದುಳಿದ ಯುವತಿಯರಿಗಾಗಿ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ನ.5ರಿಂದ ಹಮ್ಮಿಕೊಳ್ಳಲಾಗಿದೆ. ಬೇಸಿಕ್ ಕಂಪ್ಯೂಟರ್ ತರಬೇತಿ ಅವಧಿಯು 5 ತಿಂಗಳಿನದ್ದಾಗಿದ್ದು, 18ರಿಂದ 35 ವರ್ಷ ವಯೋವುತಿಯುಳ್ಳ ಎಸ್ಸೆಸ್ಸೆಲ್ಸಿ ಪಾಸಾದ 40 ಮಂದಿ ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಆಸಕ್ತರು ಅ.30ರೊಳಗೆ ಅರ್ಜಿ ಸಲ್ಲಿಸಿ, ಅ.31ರ ಬೆಳಗ್ಗೆ 11ಕ್ಕೆ ಮಹಿಳಾ ವಿದ್ಯಾಪೀಠದಲ್ಲಿ ನಡೆಯುವ ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.

ಪಿಯು ವಿದ್ಯಾರ್ಥಿಗಳಿಂದ ವೇತನಕ್ಕೆ ಅರ್ಜಿ
ಮೈಸೂರು:
ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲಾಖೆ ವತಿಯಿಂದ ನಿಗದಿಪಡಿಸಿದ ಅಂಕಗಳಿಗಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡಿದ ಪಿಯು ಕಾಲೇಜಿನ ಪ್ರಾಂಶುಪಾಲರಿಂದ ಅರ್ಜಿ ಪಡೆದು ಅ.21ರೊಳಗೆ ಪ್ರಾಂಶುಪಾಲರ ಬಳಿ ಸಲ್ಲಿಸುವಂತೆ ತಿಳಿಸಲಾಗಿದೆ. ಆಸಕ್ತರು ಅರ್ಜಿ ನಮೂನೆಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ http///www.pue.kar.nic.in/scholorship//MHRD scholorship 2013 batch- notification ನಿಂದ ಡೌನ್‌ಲೌಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬಹುದು. ದೂ. 0821- 2440371 ಸಂಪರ್ಕಿಸಬಹುದು.

ಇಂದಿನಿಂದ ಖಾದಿ ಉತ್ಸವ ಆರಂಭ
ಮೈಸೂರು:
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅ.20ರಿಂದ ನ.3ರವರೆಗೆ ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಖಾದಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಅ.20ರ ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದು, ಶಾಸಕ ವಾಸು ಅಧ್ಯಕ್ಷತೆ ವಹಿಸುವರು.

ಇಂದು ಪಾದಯಾತ್ರೆ
ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಅ.20ರಂದು ಬೆಳಗ್ಗೆ 7.30ಕ್ಕೆ ಚಿಕ್ಕಹರದನಹಳ್ಳಿಯಲ್ಲಿ ಪಾದಯಾತ್ರೆ ನಡೆಸುವರು.

ಮೈಸೂರಿಗೆ ಜಾರಕಿಹೊಳಿ
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅ.21ರಂದು ಬೆಳಗ್ಗೆ 10.30ಕ್ಕೆ ಮೈಸೂರಿಗೆ ಆಗಮಿಸುವರು. ಸರ್ಕಾರಿ ಅತಿಥಿ ಗೃಹದಿಂದ ಅವರು ಕಾಂಗ್ರೆಸ್ ಪಕ್ಷದ ಕಚೇರಿಗೆ ತೆರಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.