ನಗರ ಪೊಲೀಸ್ ನೂತನ ವೆಬ್ಸೈಟ್, ಫೇಸ್ಬುಕ್ ಉದ್ಘಾಟನೆ
ಕ.ಪ್ರ.ವಾರ್ತೆ ಮೈಸೂರು ಅ. 21
ಮೈಸೂರು ನಗರ ಪೊಲೀಸ್ನ ನೂತನ ವೆಬ್ಸೈಟ್ ಟಣಡ್ಟ್ಠಜ್ಛ್ಝಡಿಣಠ್ಟಟ್ಝ್ಛಜ.್ಜ್ಟಢ.್ಝಟಿ ಹಾಗೂ ಅಧಿಕೃತ ಫೇಸ್ಬುಕ್ ಸೇವೆಯನ್ನು ನಿವೃತ್ತ ಎಡಿಜಿಪಿ ಕೆಂಪಯ್ಯ ಸೋಮವಾರ ಬೆಳಗ್ಗೆ ಉದ್ಘಾಟಿಸಿದರು.
ಹೊಸ ವೆಬ್ಸೈಟ್ ಮೂಲಕ ಸಾರ್ವಜನಿಕರು ನೇರವಾಗಿ ಪೊಲೀಸ್ ಆಯುಕ್ತರು ಸಂದೇಶಗಳನ್ನು ತಿಳಿಸಲಿದ್ದಾರೆ. ಆನ್ಲೈನ್ ಮೂಲಕ ದೂರುಗಳ ಸ್ವೀಕರಿಸಿ, ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೆ, ದೂರಿನ ಒಂದು ಪ್ರತಿ ಪೊಲೀಸ್ ಆಯುಕ್ತರ ಕಚೇರಿಗೂ ತಲುಪುವ ವ್ಯವಸ್ಥೆ ಮಾಡಲಾಗಿದೆ.
ಆರ್ಟಿಐ, ಸಕಾಲ ಕಾಯ್ದೆ ಕಾನೂನಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ. ಅಲ್ಲದೆ, ಸಾರ್ವಜನಿಕರು ಕೋರುವ ಮಾಹಿತಿಯನ್ನು ನೇರವಾಗಿ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು. ಪಾಸ್ಪೋರ್ಟ್ ಅರ್ಜಿ, ಪೊಲೀಸ್ ಪರಿಶೀಲನಾ ಅರ್ಜಿ, ಶಸ್ತ್ರಾಸ್ತ್ರ ಪರವಾನಗಿ ಅರ್ಜಿಗಳ ಮಾಹಿತಿ, ಸ್ಥಿತಿಗತಿಗಳ ಬಗ್ಗೆ ತಿಳಿಸುವ ವ್ಯವಸ್ಥೆ ಇದೆ. ಅಪರಾಧ ಮತ್ತು ಸಂಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಭಾವಚಿತ್ರ, ವಿಡಿಯೋ ಅಳವಡಿಕೆ ಕಾರ್ಯವು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ತಿಳಿಸಿದರು.
ಕಾರ್ಯಕ್ರಮಗಳ ಮಾಹಿತಿ: ಸಂಚಾರ ನಿರ್ವಹಣೆ ಕಾರ್ಯವೈಖರಿ, ಸಂಚಾರ ನಿಯಮಗಳು, ಏಕಮುಖ ಸಂಚಾರ ಮಾಹಿತಿ, ಸಂಚಾರ ನಿಯಮ ಉಲ್ಲಂಘನೆಯಡಿಯಲ್ಲಿ ವಿಧಿಸುವ ದಂಡಗಳ ವಿವರ ಇರುತ್ತದೆ. ಇಲಾಖೆಯ ಪ್ರತಿದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ಇರುತ್ತದೆ ಎಂದರು.
ಫೇಸ್ಬುಕ್ನಲ್ಲಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಅಪರಾಧ ಮತ್ತು ಸಂಚಾರಕ್ಕೆ ಸಂಬಂಧಪಟ್ಟ ಅರಿವು ಮೂಡಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪಬ್ಲಿಕ್ ಐ ಫೇಸ್ಬುಕ್ನಲ್ಲಿ ಆರಂಭಿಸಿ, ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಂದ ದೂರು, ಫೋಟೋ ಆಹ್ವಾನಿಸಲಾಗುವುದು. ಅದರನ್ವಯ ಸಂಬಂಧಪಟ್ಟ ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಕೂಡಲೇ ಸ್ಪಂದಿಸಿ...: ನಿವೃತ್ತ ಎಡಿಜಿಪಿ ಕೆಂಪಯ್ಯ ಮಾತನಾಡಿ, ಪೊಲೀಸರು ಪರಿಣಾಮಕಾರಿ ಕೆಲಸ ಮಾಡುವುದರ ಮೂಲಕ ಸಾರ್ವಜನಿಕರ ನಂಬಿಕೆಗೆ ಪಾತ್ರರಾಗಬೇಕು. ಸಾರ್ವಜನಿಕರ ದುಃಖ, ದೂರುಗಳಿಗೆ ಸ್ಪಂದಿಸಬೇಕು. ಈಗ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಘೋಷಣೆಯಾಗಿ ಉಳಿಯದೇ ಎಲ್ಲವು ಕಾರ್ಯಗತ ಆಗಬೇಕು ಎಂದು ಅವರು ಸಲಹೆ ನೀಡಿದರು.
ಇದೇ ವೇಳೆ ವೆಬ್ಸೈಟ್ ವಿನ್ಯಾಸಕ ವಿನಯ್ಕುಮಾರ್ ಅವರನ್ನು ಗೌರವಿಸಲಾಯಿತು. ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ಪ್ರಭಾಶಂಕರ, ಅಶ್ವಾರೋಹಿದಳ ಕಮಾಂಡೆಂಟ್ ಆರ್. ಜನಾರ್ದನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

