ವೀರೇಂದ್ರ ಹೆಗ್ಗಡೆ ವಿರುದ್ಧ ಆರೋಪ ಖಂಡಿಸಿ ಪ್ರತಿಭಟನೆ
ಸಾಲಿಗ್ರಾಮ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಹಾಗೂ ಶ್ರೀ ಕ್ಷೇತ್ರಕ್ಕೆ ಮಸಿ ಬಳಿಯುವಂತಹ ಕೆಲಸ ಯಾರೂ ಮಾಡಬಾರದು ಎಂದು ಜೈನ ಸಮುದಾಯ ಆಗ್ರಹಿಸಿದೆ. ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ಸೌಜನ್ಯಾಳ ಪ್ರಕರಣವನ್ನು ಮುಂದಿಟ್ಟುಕೊಂಡು ಹೆಗ್ಗಡೆ ಅವರ ತೇಜೋವಧೆಗೆ ವಿನಾಕಾರಣ ಆರೋಪ ಮಾಡಿಕೊಂಡು, ಸುದ್ದಿಯಲ್ಲಿರುವ ವ್ಯಕ್ತಿಗಳ ಚಾರಿತ್ರ್ಯದ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಯಾವುದೆ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಅನ್ನದಾಸೋಹ ಮಾಡುತ್ತಿರುವ ಶ್ರೀ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಆರೋಪ ಮಾಡುವ ಮೂಲಕ ಸಮಾಜದಲ್ಲಿ ಮಠಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುವವರು ಸೌಜನ್ಯಾಳ ಪ್ರಕರಣದ ಸತ್ಯ ಅರಿಯಬೇಕೆಂದು ಹೇಳಿದರು. ಮುಖಂಡರಾದ ಗುಣಪಾಲ ಜೈನ್, ತಾಪಂ ಮಾಜಿ ಸದಸ್ಯ ಎಸ್.ಎಂ. ಶ್ರೀನಿವಾಸಗೌಡ, ಅಮರಜಿತ್ಜೈನ್, ಎಸ್.ಜೆ. ರಾಜೇಂದ್ರಪ್ರಸಾದ್, ಉಷಾ, ಟಿ. ರಾಜಣ್ಣ, ಸಂಜು, ಗುಣಚಂದ್ರಕುಮಾರ್, ನೇಮಿಚಂದ್ರ, ಸುಜಾತ ರಾಜೇಂದ್ರಪ್ರಸಾದ್, ವಿಶಾಲ ಧರಣೇಂದ್ರ ಇದ್ದರು.
ಹೈಟೆಕ್ ಕಾರ್ಮಿಕ ಆಸ್ಪತ್ರೆಗೆ ಇಂದು ಗುದ್ದಲಿಪೂಜೆ
ಕ.ಪ್ರ.ವಾರ್ತೆ ನಂಜನಗೂಡು ಅ. 22
ಕೇಂದ್ರ ಕಾರ್ಮಿಕ ಇಲಾಖೆಯಿಂದ ನಂಜನಗೂಡಿನಲ್ಲಿ ಹೈಟೆಕ್ ಕಾರ್ಮಿಕರ ವಿಮಾ ಆಸ್ಪತ್ರೆಗೆ ಭೂಮಿ ಪೂಜೆ ನಡೆಸಲು ಕೇಂದ್ರದ ರಾಜ್ಯ ಸಚಿವ ಕುಡಿ ಕುನ್ನಿಲ್ ಸುರೇಶ್ ಬುಧವಾರ 11ಕ್ಕೆ ಆಗಮಿಸುವರು ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲೆ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯನ್ನು ಪರಿಶೀಲಿಸಿ ಸಂಸದರು ಮಾತನಾಡಿದರು.
ಕಾಂಗ್ರೆಸ್ ಮುಖಂಡ ಯು.ಎನ್. ಪದ್ಮನಾಭರಾವ್, ಮಾಜಿ ಪುರಸಭಾಧ್ಯಕ್ಷ ಸಿ.ಎಂ. ಶಂಕರ್, ಬ್ಲಾಕ್ ಅಧ್ಯಕ್ಷರಾದ ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ, ಪುರಸಭಾ ಸದಸ್ಯರಾದ ದೊರೆಸ್ವಾಮಿ, ಅನುಸೂಯ, ತಾಪಂ ಸದಸ್ಯೆ ಲಕ್ಷ್ಮೀನಾಗರಾಜು, ಸಂಸದರ ಖಾಸಗಿ ಕಾರ್ಯದರ್ಶಿ ನಾಗೇಶ್, ಅಧಿಕಾರಿಗಳಾದ ತಹಸೀಲ್ದಾರ್ ಅರುಳ್ಕುಮಾರ್, ಇಒ ಕೃಷ್ಣಂರಾಜು, ಪುರಸಭಾ ಮುಖ್ಯಾಧಿಕಾರಿ ಡಿ. ರಮೇಶ್, ಮಾಜಿ ತಾಪಂ ಅಧ್ಯಕ್ಷ ನಾಗೇಶ್ರಾಜು, ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಗೋವಿಂದರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

