ಸೌಜನ್ಯಾ ಕೊಲೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ
ಮೈಸೂರು: ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ, ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ಸಿಐಡಿ ತನಿಖೆಯಿಂದ ಸೌಜನ್ಯಾಳ ಮಾನಹಾನಿ, ಪ್ರಾಣಹಾನಿ ಮಾಡಿದವರಿಗೆ ಶಿಕ್ಷೆಯಾಗುವ ನಂಬಿಕೆಯಿಲ್ಲ. 1987ರಲ್ಲಿ ಇದೇ ಪ್ರದೇಶದಲ್ಲಿ ಪದ್ಮಲತಾ ಎಂಬವರ ಕೊಲೆಯಾಗಿದ್ದು, ಉಜಿರೆ ಪ್ರಗತಿಪರ ಸಂಘಟನೆಗಳ ಒತ್ತಾಯದಿಂದಾಗಿ ಅಂದಿನ ಸರ್ಕಾರ ಸಿಒಡಿ ತನಿಖೆಗೆ ವಹಿಸಿತ್ತು. ಆದರೆ, ಪದ್ಮಲತಾ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸುವಲ್ಲಿ ಸಿಒಡಿ ವಿಫಲವಾಗಿದೆ. ಸೌಜನ್ಯಾ ಪ್ರಕರಣವು ಕೂಡ ಇದೇ ರೀತಿಯಾಗುವ ಅಪಾಯವಿದೆ ಎಂದು ಅವರು ಹೇಳಿದರು.
ನಾವು ಯಾವುದೇ ಧರ್ಮ, ಧಾರ್ಮಿಕ ಸಂಸ್ಥೆಯ ವಿರುದ್ಧವಾಗಲಿ ಇಲ್ಲ. ಸೌಜನ್ಯಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಹಿಂಜರಿಯುವುದು ಏಕೆ? ಸಾಮಾಜಿಕ ನ್ಯಾಯ ಪರವಾಗಿ ಇದ್ದೇವೆಂದು ಹೇಳಿಕೊಳ್ಳುವ ರಾಜ್ಯ ಸರ್ಕಾರವು ಯಾವುದೇ ಶಕ್ತಿಗಳ ಒತ್ತಡಕ್ಕೂ ಮಣಿಯದೆ ಸೌಜನ್ಯಾ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ದಿಟ್ಟತನ ತೋರಬೇಕು ಎಂದು ಅವರು ಒತ್ತಾಯಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಬಸವರಾಜು, ಮುಖಂಡರಾದ ಲ. ಜಗನ್ನಾಥ್, ವಿಜಯಕುಮಾರ್, ಪುಟ್ಟನಂಜಯ್ಯ, ಪ್ರೊ.ನಂಜರಾಜ ಅರಸ್, ರತಿರಾವ್, ನಂದಾ ಹಳೆಮನೆ, ನಿಂಗರಾಜು, ಸಿಕ್ರಂ ಪ್ರಸನ್ನ, ಕೊ.ಸು. ನರಸಿಂಹಮೂರ್ತಿ ಇದ್ದರು.
ವಿಷಯಾಂತರ ಬೇಡ
ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು. ಈ ವಿಚಾರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ನಡವಳಿಕೆ ಬೇಸರ ತರಿಸಿದೆ. ಕಾನೂನು ಎಲ್ಲರಿಗೂ ಒಂದೆಯಾದ ಮೇಲೆ ತನಿಖೆಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ವಿಷಯಾಂತರ ಮಾಡುವುದು ಸರಿಯಲ್ಲ. ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು, ಇದಕ್ಕೆ ಹೆಗ್ಗಡೆ ಅವರು ಸ್ಪಂದಿಸಬೇಕು.
-ನಂದಾ ಹಳೇಮನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

