ಎಂಜಿನಿಯರ್ ವಜಾ
ಮೈಸೂರು: ಮೈಸೂರಿನ ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಎಸ್.ಎಂ. ಪೂಜಾರಿ ಎಂಬವರನ್ನು ಸರ್ಕಾರವು ಸೇವೆಯಿಂದ ವಜಾಗೊಳಿಸಿದೆ. ನಿಗದಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಎಸ್.ಎಂ. ಪೂಜಾರಿ ಕಚೇರಿ ಮತ್ತು ಮನೆಯ ಮೇಲೆ 1995 ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2011ರಲ್ಲಿ ಪೂಜಾರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 65.88 ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಪೂಜಾರಿಯನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ವಯ ಸರ್ಕಾರಿ ಸೇವೆಯಿಂದ ವಜಾ ಮಾಡಿ ದಂಡನೆ ವಿಧಿಸಿದೆ. ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಡಾ.ಸಿ.ಜಿ. ಬೆಟ್ಸೂರಮಠ ಅವರು ಪೂಜಾರಿಯನ್ನು ಗುರುವಾರ ಬೆಳಗ್ಗೆ ಇಲಾಖೆ ಸೇವೆಯಿಂದ ಬಿಡುಗಡೆ ಮಾಡಿದ್ದಾರೆ.
ನಾಳೆ ನಿರ್ಗಮನ ಪಥಸಂಚಲನ
ಮೈಸೂರು: ಮೈಸೂರು ನಗರ ಪೊಲೀಸ್ ತರಬೇತಿ ಶಾಲೆಯ 6ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನವು ಅ.28ರ ಬೆಳಗ್ಗೆ 9ಕ್ಕೆ ಸಿಎಆರ್ ಕವಾಯತು ಮೈದಾನದಲ್ಲಿ ನಡೆಯಲಿದೆ. ಐಜಿಪಿ (ತರಬೇತಿ) ಕೆ.ಎಸ್.ಆರ್. ಚರಣ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಗೌರವ ವಂದನೆ ಸ್ವೀಕರಿಸಿ, ಪಥಸಂಚಲನ ಪರಿವೀಕ್ಷಣೆ, ಬಹುಮಾನ ವಿತರಣೆ ನೆರವೇರಿಸಿಕೊಡುವರು ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಸಿಎಆರ್ ಡಿಸಿಪಿ ಆರ್. ಪ್ರಭಾಶಂಕರ್ ತಿಳಿಸಿದ್ದಾರೆ.
ಬಿಜೆಪಿ ಮೋರ್ಚಾ ಪದಾಧಿಕಾರಿಗಳು
ಮೈಸೂರು: ಕೃಷ್ಣರಾಜ ಕ್ಷೇತ್ರದ ಸ್ಲಂ ಮೋರ್ಚಾ ಪದಾಧಿಕಾರಿಗಳಾಗಿ ವೈ. ವೆಂಕಟೇಶ್ (ಅಧ್ಯಕ್ಷರು), ಬಿ. ಮಂಜುನಾಥ್ (ಪ್ರಧಾನ ಕಾರ್ಯದರ್ಶಿ), ಹರ್ಷಕುಮಾರ್, ಎಚ್. ಗಣೇಶ, ಆರ್. ಮುರುಗೇಶ್ (ಉಪಾಧ್ಯಕ್ಷರು), ಮುರುಗ, ಕಾಂತರಾಜ್, ಓಂಪ್ರಕಾಶ್, ಎನ್. ರಾಜ (ಕಾರ್ಯದರ್ಶಿಗಳು), ಕುಲ್ಲಾಯಪ್ಪ (ಕೋಶಾಧ್ಯಕ್ಷ), ಸುಬ್ರಹ್ಮಣ್ಯ, ಸುರೇಶ್, ರಾಜ, ನಾಗರಾಜ್, ಕೆ.ವಿ. ವೆಂಕಟೇಶ್, ನಾಗೇಂದ್ರ, ರವಿಕುಮಾರ್, ಕಿರಣ್ಕುಮಾರ್, ಲಕ್ಷ್ಮಿಕಾಂತ್, ಮಂಜುನಾಥ್, ಆನಂದ, ಆರ್. ಶಾಮ್ಕುಮಾರ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.
ಡಾ.ಹನುಮಣ್ಣಗೆ ಕಲಾ ಬಂಗಾರ
ಮೈಸೂರು: ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಅನುಪಮ ಸೇವೆಗಾಗಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಅವರಿಗೆ ಈ ಸಾಲಿನ ಕಲಾಬಂಗಾರ ಪ್ರಶಸ್ತಿ ದೊರೆತಿದೆ. ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಎಸ್. ಬಂಗಾರಪ್ಪ ವಿಚಾರ ವೇದಿಕೆ ಮತ್ತು ಎಸ್. ಬಂಗಾರಪ್ಪ ಪ್ರತಿಷ್ಠಾನದ ವತಿಯಿಂದ ನಡೆಯುವ ನಮನ, ಚಿಂತನ, ಅಭಿನಂದನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಿದ್ದು, 1 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ. ಅ.28 ರಂದು ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಮಾಡ್ರಹಳ್ಳಿಯಲ್ಲಿ ಎನ್ಎಸ್ಎಸ್ ಶಿಬಿರ
ಕ.ಪ್ರ.ವಾರ್ತೆ , ನಂಜನಗೂಡು , ಅ. 26
ತಾಲೂಕಿನ ಹೆಮ್ಮರಗಾಲದ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕವು ವಿಶೇಷ ಶಿಬಿರವನ್ನು ಮಾಡ್ರಹಳ್ಳಿಯಲ್ಲಿ ಆಯೋಜಿಸಿತ್ತು.
ಬದನವಾಳು ಕ್ಷೇತ್ರದ ತಾಪಂ ಸದಸ್ಯ ಕೆಂಪಣ್ಣ ಈ ಶಿಬಿರ ಉದ್ಘಾಟಿಸಿದರು. ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ಆರ್. ಸಿದ್ದಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಕೆಂಪಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಬಿ. ಸೋಮಶೇಖರ್ ಇದ್ದರು.
2013ರ ಸೃಜನ ಸದ್ಭಾವನಾ ಪ್ರಶಸ್ತಿಗೆ ಹಲವರು ಆಯ್ಕೆ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಅ. 26
ಸೃಜನ ಲೇಖಕರು ಮತ್ತು ಕಲಾವಿದರ ಬಳಗದ ವತಿಯಿಂದ ಜಿಲ್ಲಾಮಟ್ಟದ 2013ರ ಸೃಜನ ಸದ್ಭಾವನಾ ಪ್ರಶಸ್ತಿಗೆ ಕೆಳಕಂಡವರು ಆಯ್ಕೆಯಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಆರ್. ಸುರೇಶ್ ಹೇಳಿದ್ದಾರೆ. ಶಿಕ್ಷಣಾಧಿಕಾರಿ ಎಸ್.ಪಿ. ನಾಗರಾಜು, ಭೇರ್ಯದ ಆಶಾಕಿರಣ ಸೇವಾಶ್ರಮ ಮತ್ತು ದಿವ್ಯಜ್ಯೋತಿ ಜ್ಞಾನಾಲಯದ ಮುಖ್ಯಸ್ಥರಾದ ಸಿಸ್ಟರ್ ಬಿ.ಎಸ್. ಪೌಲ್, ಕೆ.ಆರ್. ನಗರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಬಿ.ಅಶೋಕ್, ಸಂಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಆರ್. ಮಹೇಶ್, ಕೆ.ಆರ್. ನಗರ ಪೊಲೀಸ್ ಠಾಣೆಯ ಪೇದೆ ಪಿ. ರಮೇಶ್, ಆರೋಗ್ಯ ಇಲಾಖೆಯ ಲೇಖಕ ಸುರೇಶ್ರಾವ್ ಚವಾಣ್.
ಹಗಲು ಯೋಗಕ್ಷೇವು ಕೇಂದ್ರಕ್ಕೆ ಚಾಲನೆ
ಕ.ಪ್ರ.ವಾರ್ತೆ , ಟಿ.ನರಸೀಪುರ , ಅ. 26
ಸರ್ಕಾರೇತರ ಸಂಘ ಸಂಸ್ಥೆಗಳು ಸಾರ್ವಜನಿಕ ಸೇವೆಯ ಜತೆಗೆ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ನೆರವು ನೀಡುವಂತೆ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಕರೆ ನೀಡಿದರು.
ಪಟ್ಟಣದ ಇಂದಿರಾ ಕಾಲೋನಿಯಲ್ಲಿ ಬೆಂಗಳೂರಿನ ಸಮೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ಸ್ಥಾಪಿಸಿರುವ ಸಮೃದ್ಧಿ ಹಗಲು ಯೋಗ ಕ್ಷೇಮ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಿರಿಯ ವೃದ್ಧರಿಗೆ ಹಾಗೂ ನಿರ್ಗತಿಕರಿಗೆ ಈ ಕೇಂದ್ರದ ಮೂಲಕ ಸಹಕಾರ ನೀಡಲು ಹೊರಟಿರುವುದು ಶ್ಲಾಘನೀಯ. ಆದರೆ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೂ ನಿಮ್ಮ ಸಹಕಾರ ಬೇಕಿದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಸ್. ರಂಗಯ್ಯ ಮಾತನಾಡಿದರು. ಸಮಗ್ರ ಬಾಲ ವಿಕಾಸ ಯೋಜನಾಧಿಕಾರಿ ಬಸವರಾಜು, ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ಕಾರ್ಯದರ್ಶಿ ಜಯರಾಂ, ಭೈರಾಪುರ ಗ್ರಾಪಂ ಸದಸ್ಯರಾದ ಆರ್. ನಂಜಯ್ಯ, ರಾಚೇಗೌಡ, ಪಪಂ ಮಾಜಿ ಉಪಾಧ್ಯಕ್ಷ ಮಹದೇವಣ್ಣ, ಸದಾಶಿವ ಇದ್ದರು.
ಬೈಲಕುಪ್ಪೆ ವ್ಯಾಪ್ತಿಯ ಗ್ರಾಮಗಳಲ್ಲಿ ವಾರ್ಡ್ ಸಭೆ
ಬೈಲಕುಪ್ಪೆ: ಪಂಚಾಯಿತಿ ವ್ಯಾಪ್ತಿಯ 9 ಹಳ್ಳಿಗಳಿಗೂ ಆಯಾಯ ಗ್ರಾಪಂ ಸದಸ್ಯರ ನೇತೃತ್ವದಲ್ಲಿ ವಾರ್ಡ್ ಸಭೆ ನಡೆಯಿತು. ಆಯಾಯ ಗ್ರಾಮದ ಅಭಿವೃದ್ಧಿ ಕೆಲಸ, ಒಳಚರಂಡಿ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆಯನ್ನು ಲಿಖಿತವಾಗಿ ಪಡೆದುಕೊಳ್ಳಲಾಯಿತು. ನಂತರ ಪಂಚಾಯಿತಿ ಆವರಣದಲ್ಲಿ ಗ್ರಾಪಂ ಅಧ್ಯಕ್ಷ ರವಿಮಾನು ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಸಿ, ವಾರ್ಡ್ ಸಭೆಯಲ್ಲಿ ಪಡೆದ ಎಲ್ಲ ಕೆಲಸ ಕಾರ್ಯಗಳನ್ನು ಗ್ರಾಮಸಭೆಯಲ್ಲಿ ಅನುಮೋದನೆ ಮಾಡಿಕೊಂಡು, ಎಲ್ಲ ಸಮಸ್ಯೆಯನ್ನು ಬಗೆಹರಿಸಲಾಯಿತು ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

