'ಗ್ರಾಮೀಣ ಜನರ ನೈಜ ಬೇಡಿಕೆಗೆ ಸ್ಪಂದನೆ'
ಕ.ಪ್ರ.ವಾರ್ತೆ , ಮೈಸೂರು , ಅ. 26
ಗ್ರಾಮೀಣ ಜನರ ನೈಜ ಬೇಡಿಕೆಗಳಿಗೆ ಸ್ಪಂದಿಸಿ ಇಲಾಖೆಯ ಏಳು ನೂತನ ಯೋಜನೆಗಳನ್ನು ರೂಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ನಿವಾರ ಲಲಿತಮಹಲ್ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶುದ್ಧ ನೀರು, ವೈಯಕ್ತಿಕ ಶೌಚಾಲಯ, ಆಟದ ಮೈದಾನ, ಕಣ, ಸ್ಮಶಾನ ಅಭಿವೃದ್ಧಿ, ನಮ್ಮ ಹೊಲ ನಮ್ಮ ದಾರಿ, ನಮ್ಮೂರ ಕೆರೆ, ರಾಜೀವ್ಗಾಂಧಿ ಕೌಶಲ್ಯ ಯೋಜನೆ- ಇವೆಲ್ಲವೂ ಜನರ ಬಹುದೊಡ್ಡ ಬೇಡಿಕೆಯ ಕಾರ್ಯಕ್ರಮಗಳಾಗಿದ್ದವು. ನಗರ ಪ್ರದೇಶಗಳಲ್ಲಿ ಸಿಗುವ ಎಲ್ಲಾ ಆಧುನಿಕ ಮತ್ತು ಗುಣಮಟ್ಟದ ಸವಲತ್ತುಗಳು ಗ್ರಾಮೀಣ ಜನರಿಗೂ ಸಿಗಬೇಕೆಂಬುದು ಇವುಗಳ ಉದ್ದೇಶ. ರಾಜ್ಯದ ಎಲ್ಲ 176 ತಾಲೂಕುಗಳ 5,600 ಗ್ರಾಪಂಗಳ ಮೂಲಕ ಏಕಕಾಲಕ್ಕೆ ಎಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ನೀಡುವ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗುವುದು ಎಂದರು.
ಗ್ರಾಮೀಣ ನಾಯಕರೇ ನೈಜ ಪ್ರಭುಗಳು
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಮೂರು ಹಂತವಾದ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಸದಸ್ಯರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಗ್ರಾಮೀಣ ಕ್ಷೇತ್ರದ ನಾಯಕರು ಎಂದು ಬಣ್ಣಿಸಿದರು. ಗ್ರಾಮೀಣಾಭಿವೃದ್ಧಿಯ 7 ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಸಾಮಾನ್ಯರೇ ನಮ್ಮ ನೈಜ ಪ್ರಭುಗಳು ಎಂದರು. ಎಚ್.ಕೆ. ಪಾಟೀಲರು ತಮ್ಮ ಮಾತಿನಲ್ಲಿ ಸಂವಿಧಾನದ 73-74ನೇ ತಿದ್ದುಪಡಿಗೆ ಕಾರಣರಾದ ಮಾಜಿ ಪ್ರಧಾನಿ ದಿ. ರಾಜೀವ್ಗಾಂಧಿ, ಖಾತ್ರಿಗೆ ಕಾರಣರಾದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಸ್ಮರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ತಿದ್ದುಪಡಿ ಮಾಡಿ, ಅಧಿಕಾರ ವಿಕೇಂದ್ರೀಕರಣ ಮಾಡಿದ ರಾಜೀವ್ಗಾಂಧಿ, ಇದಕ್ಕೂ ಮೊದಲೇ ರಾಜ್ಯದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ಕಾರಣರಾದ ಅಬ್ದುಲ್ ನಜೀರ್ಸಾಬ್ರನ್ನು ಸ್ಮರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

