ಸಿಎಂ, ಸಚಿವರ ವಿಡಿಯೋ ಕಾನ್ಫ್ರೆನ್ಸ್ಗೆ ಹರ್ಷ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಅ. 26
ಗ್ರಾಮೀಣಾಭಿವೃದ್ಧಿಯ 7 ಕಾರ್ಯಕ್ರಮಗಳ ಚಾಲನೆ ಮತ್ತು 15 ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ ಸಮಾರಂಭದ ವೀಡಿಯೋ ಕಾನ್ಫ್ರೆನ್ಸ್ ಪಟ್ಟಣದ ತಾಪಂ ಕಚೇರಿಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಜಾರಿಗೆ ತಂದ 7 ಕಾರ್ಯಕ್ರಮಗಳು ಹಾಗೂ ಕೈಪಿಡಿ ಬಿಡುಗಡೆ ಸಮಾರಂಭ ವೀಕ್ಷಿಸಿದ ತಾಲೂಕಿನ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯ ಜನಪ್ರನಿಧಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಈ ವಿಭಿನ್ನ ಕಾರ್ಯಕ್ರಮ ಉತ್ತಮವಾಗಿದೆ ಎಂದು ಪ್ರಶಂಸಿಸಿದರು.
ವೀಡಿಯೊ ಕಾನ್ಫ್ರೆನ್ಸ್ ಕಾರ್ಯಕ್ರಮ ವೀಕ್ಷಿಸಿದ ಜನಪ್ರನಿಧಿಗಳು ನಂತರ, ಪರಸ್ಪರ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಂಡು ಸರ್ಕಾರದ ನೂತನ ಗ್ರಾಮೀಣ ಯೋಜನೆಗಳು ಹಳ್ಳಿಗಳ ಅಭಿವೃದ್ಧಿಗೆ ಪೂರಕವಾಗಿವೆಯಲ್ಲದೆ, ಕೈಪಿಡಿ ಮತ್ತು ಮಾಹಿತಿಯಿಂದ ನಾವು ಅನುಷ್ಠಾನದಲ್ಲಿ ಪ್ರಧಾನ ಪಾತ್ರ ವಹಿಸಬಹುದು ಎಂದು ಸಂತಸಪಟ್ಟರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಬಸವರಾಜು ಅವರ ವಿಶೇಷ ಕಾಳಜಿಯಿಂದ ವೀಡಿಯೋ ಕಾನ್ಪ್ರೆನ್ಸ್ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತಲ್ಲದೆ, ದೃಶ್ಯ ಮತ್ತು ಧ್ವನಿ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಜತೆಗೆ ಹಾಜರಿದ್ದವರಿಗೆ ಉತ್ತಮವಾಗಿ ವೀಕ್ಷಣೆಯ ಅನುಕೂಲ ಮಾಡಲಾಗಿತ್ತು.
300 ಕ್ಕೂ ಅಧಿಕ ಸ್ಥಳೀಯ ಜನಪ್ರಧಿನಿಗಳು, ನೂರಾರು ಸಾರ್ವಜನಿಕರು ಹಾಜರಿದ್ದು, ಕಾನ್ಫರೆನ್ಸ್ ವೀಕ್ಷಿಸಿದರು.
ಇದೇ ತಾಪಂ ಅಧ್ಯಕ್ಷೆ ಶಕುಂತಲಾ ರಮೇಶ್, ಜಿಪಂ ಸದಸ್ಯರಾದ ಪುಷ್ಪಲತಾ, ಸುಮಿತ್ರಮ್ಮ, ಕೈಪಿಡಿ ಬಿಡುಗಡೆ ಮಾಡಿದರು. ಮಾಜಿ ಅಧ್ಯಕ್ಷರಾದ ಕವಿತಾ, ಹೇಮಾವತಿ, ಸದಸ್ಯರಾದ ವಿಜಯಲಕ್ಷೀ, ಜಾನಕಮ್ಮ, ಜಯಲಕ್ಷೀ, ತಂದ್ರೆರವಿ, ತಹಸೀಲ್ದಾರ್ ವೀಣಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ. ಬಸವರಾಜು, ಪಂಚಾಯತ್ ರಾಜ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್, ಸಿಡಿಪಿಒ ಸದಾಶಿವಪ್ಪ, ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ, ಕಾರ್ಯಾಕ್ರಮದ ನೋಡಲ್ ಅಧಿಕಾರಿ ಶಂಭುಗೌಡ ಇದ್ದರು.
ಗಾಪಂ ಸದಸ್ಯರಿಂದ ಭಾರಿ ಮೆಚ್ಚುಗೆ
ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಶನಿವಾರ ತಾಪಂ ಆವರಣದಲ್ಲಿ ನಡೆದ ವೀಡಿಯೊ ಕಾನ್ಫ್ರೆನ್ಸ್ನಲ್ಲಿ ಭಾಗವಹಿಸಿದ್ದ ಗ್ರಾಪಂ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಡಿಸಿದರು. ಕಾರ್ಯಕ್ರಮದಿಂದ ಗ್ರಾಮಾಂತರ ಪ್ರದೇಶದ ಜನಪ್ರತಿನಿಧಿಗಳಿಗೆ ಸರ್ಕಾರದ ಯೋಜನೆಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿ ದೊರೆಯುತ್ತದೆ ಎಂದು ಅಂಕನಹಳ್ಳಿ ಗ್ರಾಪಂ ಸದಸ್ಯೆ ರೂಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುವಾಗ ಇದೇ ರೀತಿ ವೀಡಿಯೊ ಕಾನ್ಫ್ರೆನ್ಸ್ ಮೂಲಕ ಚಾಲನೆ ನೀಡಿದರೆ ಜನರಿಗೆ ಹಾಗೂ ಸ್ಥಳೀಯ ಜನಪ್ರನಿಧಿಗಳಿಗೆ ಯೋಜನೆಗಳ ಬಗ್ಗೆ ಅರಿವು ಮೂಡುತ್ತದೆ ಎಂದು ಕೆಸ್ತೂರು ಗ್ರಾಪಂ ಅಧ್ಯಕ್ಷ ಮಹದೇವ ಹೇಳಿದರು. ವೀಡಿಯೊ ಕಾನ್ಫ್ರೆನ್ಸ್ನಿಂದ ನಮಗೆ ತುಂಬಾ ಅನುಕೂಲವಾಗಿದ್ದು, ಸರ್ಕಾರದ ಯೋಜನೆಗಳನ್ನು ಯಾವ ರೀತಿ ಜಾರಿಗೆ ತರಬೇಕು ಎಂಬ ದಾರಿ ತಿಳಿಯಿತು. ಇದು ನಿಜವಾಗಿಯು ಹೊಸ ಅನುಭವ ಎಂದು ತಿಪ್ಪೂರು ಗ್ರಾಪಂ ಸದಸ್ಯರಾದ ಎಸ್. ಲತಾಶಿವಕುಮಾರ್ ಮತ್ತು ಹೇಮಾ ತಿಳಿಸಿದರು.
ಉಪಗ್ರಹ ಆಧರಿತ ಕಾರ್ಯಕ್ರಮ ವೀಕ್ಷಣೆ
ಪಿರಿಯಾಪಟ್ಟಣ: ಪಟ್ಟಣದ ತಾಪಂ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣಾಭಿವೃದ್ಧಿ ಯೋಜನೆಗಳ 15 ಕೈಪಿಡಿಗಳನ್ನು ಶಾಸಕ ಕೆ.ವೆಂಕಟೇಶ್ ಬಿಡುಗಡೆ ಮಾಡಿದರು. ಸ್ಯಾಟ್ಲೈಟ್ ಸ್ಟುಡಿಯೋ ಮೂಲಕ ರಾಜ್ಯಾದ್ಯಂತ ಏಕಕಾಲಕ್ಕೆ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮವನ್ನು ಪಟ್ಟಣದ ತಾಪಂ ಆವರಣದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಮೈಸೂರಿನಲ್ಲಿ ಕೈಪಿಡಿ ಬಿಡುಗಡೆಯಾದ ಬಳಿಕ ಸ್ಥಳೀಯವಾಗಿ ಶಾಸಕ ಕೆ.ವೆಂಕಟೇಶ್ ಅವರು ಸಹ ಕೈಪಿಡಿಗಳನ್ನು ಬಿಡುಗಡೆ ಮಾಡಿದರು. ತಾಪಂ ಅಧ್ಯಕ್ಷೆ ಪವಿತ್ರಾ, ಜಿಪಂ ಸದಸ್ಯೆ ಡಿ.ಮಂಜುಳಾ ರಾಜ್, ತಾಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯೆ ಗೀತಾ, ತಹಸೀಲ್ದಾರ್ ಎಂ.ಕೆ.ಸವಿತಾ, ಇಒ ಮಹದೇವಸ್ವಾಮಿ, ತಾಲೂಕಿನ ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

