ಮೈಸೂರು

'ಅಂಗವಿಕಲರಿಗೆ ಸ್ವಾವಲಂಬಿ ಬದುಕು ಅವಶ್ಯ'

Published On :

ಕ.ಪ್ರ.ವಾರ್ತೆ    ಮೈಸೂರು    ಅ. 28
ಅಂಗವಿಕಲರಿಗೆ ಸ್ವಾವಲಂಬಿ ಬದುಕು ಅವಶ್ಯಕ ಎಂದು ಮೆಡಿವೆವ್ ಗರ್ಭಧಾರಣಾ ಸಂಸ್ಥೆ ನಿರ್ದೇಶಕ ಡಾ. ಸಿ. ಶರತ್ಕುಮಾರ್ ಹೇಳಿದರು.
ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ನಲ್ಲಿ ಸೋಮವಾರ ಏರ್ಪಡಿಸಿದ್ದ ಅಂಧ ಯುವಜನತೆಗೆ ಹಕ್ಕುಗಳ ಅರಿವು ಕುರಿತಾದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.     
ದೇಶದಲ್ಲಿ ಮಧ್ಯರಾತ್ರಿ ಒಂಟಿ ಮಹಿಳೆ ನಿರ್ಭಿತಿಯಿಂದ ಓಡಾಡುವುದು ನಿಜವಾದ ಸ್ವಾತಂತ್ರ್ಯ ಎಂದು ಮಹಾತ್ಮಗಾಂಧಿ ಹೇಳಿರುವಂತೆ, ಅಂಗವಿಕಲರು ಯಾರ ಸಹಾಯವು ಇಲ್ಲದೆ ಸ್ವಾವಲಂಬಿಯಾಗಿ ಬದುಕುವಂತಹ ವಾತಾವರಣ ಉಂಟಾದಾಗ ಆ ಸ್ವಾಂತಂತ್ರ್ಯಕ್ಕೆ ಅರ್ಥ ಬರಲಿದೆ ಎಂದರು.      
ಸರ್ವರಿಗೂ ಸಮಪಾಲು ಹಾಗೂ ಸರ್ವರಿಗೂ ಸಮಬಾಳು ಎಂಬ ಪರಿಕಲ್ಪನೆಯಂತೆ ಅಂಧ ಮಕ್ಕಳಿಗೂ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಬೇಕು. ಶೇ.15ರಷ್ಟು ಮಂದಿ ಇಂತಹ ತೊಂದರೆಯಿಂದ ಬಳಲುತ್ತಿದ್ದು, ಇವರಿಗೆ ಎಲ್ಲಾ ಸವಲತ್ತು ಕಲ್ಪಿಸಿಕೊಟ್ಟು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಅಂಗವಿಕಲರಿಗೆ ಅದರಲ್ಲೂ ಅಂಧರಿಗೆ ಇರುವ ಹಕ್ಕುಗಳ ಕುರಿತಾಗಿ ಅರಿವು ಮೂಡಿಸಲು ಇದೇ ಮೊದಲ ಬಾರಿಗೆ ಇಂತಹ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತದ ಸಂಗತಿ. ಇದೇ ರೀತಿ ಸಂಸ್ಥೆಯು ಅರಿವು ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಿ ಅವರ ಬದುಕಿಗೆ ನೆರವಾಗಲಿ ಎಂದು ಅವರು ಆಶಿಸಿದರು.
ಚೆನ್ನೈನ ರಾಷ್ಟ್ರೀಯ ಅಂಧ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಆರ್. ಸುಪ್ರಿಯಾ ಮಾತನಾಡಿ, ಅಂಧರ ಪುನರ್ವಸತಿಗೆ 23 ಕಾರ್ಯ ಯೋಜನೆಗಳನ್ನು ಸಂಸ್ಥೆ ಹಮ್ಮಿಕೊಂಡಿದ್ದು, ಹಕ್ಕುಗಳ ಅರಿವು ಕುರಿತು ಪುನಶ್ಚೇತನ ಕಾರ್ಯಕ್ರಮ ಏರ್ಪಡಿಸಿದೆ. ಅಂಧರಿಗೆ ಬ್ರೈಲ್ ನೋಟ್ಸ್ ಉಚಿತವಾಗಿ ತಲುಪಿಸಲು ಅಂಚೆ ಇಲಾಖೆಯು ಒಪ್ಪಿಗೆ ಸೂಚಿಸಿದೆ ಎಂದರು.
ಪಾಲಿಟೆಕ್ನಿಕ್ ನಿಕಟಪೂರ್ವ ಪ್ರಾಂಶುಪಾಲ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಶೇಖರ್ ಸ್ವಾಗತಿಸಿದರು. ಶ್ರೀಕಂಠಸ್ವಾಮಿ ನಿರೂಪಿಸಿದರು. ಡಾ. ಪಳನಿಸ್ವಾಮಿ ಮುಗ್ದೂರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.