ಮೈಸೂರು

ಗಾಂಧಿ ವಿಚಾರಗಳು ಎಲ್ಲರಿಗೂ ಬೇಡವಾಗಿವೆ

Published On :

ಕ.ಪ್ರ.ವಾರ್ತೆ    ರಾವಂದೂರು    ಅ. 28
ಪ್ರಸ್ತುತ ದಿನಗಳಲ್ಲಿ ಯುವ ಜನಾಂಗಕ್ಕೆ ಗಾಂಧೀಜಿ ವಿಚಾರಧಾರೆಗಳು ಬೇಡವಾಗಿರುವುದು ವಿಷಾದನೀಯ ಎಂದು ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಎಚ್.ಆರ್. ತಿಮ್ಮೇಗೌಡ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಪಿಯು ಕಾಲೇಜಿನ ವತಿಯಿಂದ ಹಂಡಿತವಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ, ಅಂಬೇಡ್ಕರ್ ಮುಂತಾದ ಮಹಾತ್ಮರು ಒಂದು ಜಾತಿಗೆ ಸೀಮಿತವಾಗಿದ್ದಾರೆ.
ಇವರ ಪ್ರತಿಮೆಗಳಿಗೆ ತೊಂದರೆಯಾದರೆ ಇಡೀ ಸಮುದಾಯವೆ ಧ್ವನಿ ಎತ್ತುತ್ತದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ನೀಡಿದ ಅನೇಕ ಆದರ್ಶಗಳನ್ನು ಕೊಡುಗೆಯಾಗಿ ನೀಡಿದ ಮಹಾತ್ಮ ಗಾಂಧಿಯ ಬಗ್ಗೆ ಚಿಂತನೆ ನಡೆಸುವರೆ ಇಲ್ಲವಾಗಿದ್ದಾರೆ ಎಂದರು.
ಪ್ರಸ್ತುತ ಸರಕಾರ ಉತ್ತಮ ಶಿಕ್ಷಣ ನೀಡುವ ಬದಲು ಹಾಲು, ಮಧ್ಯಾಹ್ನದ ಬಿಸಿಯೂಟ ನೀಡುವುದರಲ್ಲೆ ಕಾಲಕಳೆಯುತ್ತಿದೆ. ಶಿಕ್ಷಕರು ಪಾಠ ಮಾಡುವುದು ಬಿಟ್ಟು ಅಡುಗೆ ಮಾಡಿಸುವ ಕೆಲಸದಲ್ಲಿ ಮಗ್ನರಾಗಿರಬೇಕಾಗಿದೆ. ಇದರಿಂದ ಖಾಸಗಿ ಶಾಲೆಗಳಿಗೆ ಅನುಕೂಲವಾಗಲಿದೆ. ಮಕ್ಕಳ ಭೌತಿಕ ಅಭಿವೃದ್ಧಿಗೆ ಮಾತೃಭಾಷೆ ಮುಖ್ಯವಾಗಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ ಎಂದರು.
ಶಿಬಿರದಲ್ಲಿ ಜಾನಪದ ವಿದ್ವಾಂಸ ಡಾ. ಪಿ.ಕೆ. ರಾಜಶೇಖರ್ ಸಾರಥ್ಯದ ಹೊನ್ನಾರು ಜಾನಪದ ಗಾಯನ ತಂಡ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿತು.
ಪ್ರಾಧ್ಯಾಪಕ ಕೆ.ಎಂ. ಮಹದೇವ್, ಧರ್ಮಪಾಲ್, ದೊರೆಸ್ವಾಮಿ, ಗ್ರಾಮದ ಮುಖಂಡ ಡಿ.ಜೆ. ನಂದೀಶ್, ಸೋಮಶೇಖರ್, ಕಸಾಪ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್, ಕಾರ್ಯದಶರ್ಳಿ ಕಂಪಲಾಪುರ ಗೋಪಾಲ್, ವೆಂಕಟೇಶ್, ಶಿಬಿರಾಧಿಕಾರಿ ರಾಜೀವ್, ಗೋಪಾಲ್ ಕೃಷ್ಣ, ಸುಧಾಕರ್, ಖಲಿಲುಲ್ಲಾಖಾನ್, ಬಿ. ರಾಜೇಶ್, ರವೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.