ಮೈಸೂರು

ಅಕ್ರಮ ಮದ್ಯ, ಸ್ಮಶಾನ, ಶೌಚಾಲಯದ್ದೆ ಸಮಸ್ಯೆ...

Published On :

ಕ.ಪ್ರ.ವಾರ್ತೆ   ಹುಣಸೂರು   ಅ. 30
ತಾಲೂಕಿನಾದ್ಯಂತ ಹಳ್ಳಿಗಳಲ್ಲಿ ಅನಧಿಕೃತ ನಕಲಿ ಮದ್ಯ ಮಾರಾಟ, ಸ್ಮಶಾನ ಒತ್ತುವರಿ, ಜಲಾನಯನ ಇಲಾಖೆಯು ಗ್ರಾಮ ಸಭೆ ನಡೆಸದೆ ಸಮಿತಿ ರಚಿಸಿರುವುದೇ ಸೇರಿದಂತೆ ಇನ್ನಿತರ ಸಮಸ್ಯೆಗಳು ಸುರಿಮಳೆ ಬುಧವಾರ ತಾಪಂನಲ್ಲಿ ನಡೆದ ಫೋನ್- ಇನ್ ಕಾರ್ಯಕ್ರಮದಲ್ಲಿ ಕೇಳಿ ಬಂದಿತು.
ತಹಸೀಲ್ದಾರ್ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಮರುದಿನವೂ ಲಕ್ಷಣತೀರ್ಥ ನದಿಯ ಬಿಲ್ಲೇನಹೊಸಳ್ಳಿ, ಕೋಣನಹೊಸಳ್ಳಿ ಬಳಿ ಮರಳು ದಂಧೆ ಮುಂದುವರೆದಿದೆ. ಇಲ್ಲಿನ ಗ್ರಾಮಲೆಕ್ಕಿಗರೇ ಅವರೊಂದಿಗೆ ಶಾಮೀಲಾಗಿದ್ದು, ಮಾಹಿತಿದಾರು ಸಹ ಆಗಿದ್ದಾರೆ ಎಂದು ಬಿಲ್ಲೇನ ಹೊಸಳ್ಳಿಯ ಚಿನ್ನಪ್ಪ ಕರೆ ಮಾಡಿದ್ದರು, ನದಿಯು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದ್ದರೂ ಸಹ ಮರಳು ಸಂಗ್ರಹಣೆ ನಿಂತಿಲ್ಲಾ ಎಂಬ ದೂರಿಗೆ ಮುಂದೆ ತಾಲೂಕು ಆಡಳಿತ ಉಗ್ರ ಕ್ರಮ ಕೈಗೊಳ್ಳಲಿದೆ ಎಂದು ಇಒ ಡಾ. ಪ್ರೇಮಕುಮಾರ್ ತಿಳಿಸಿದರು.
ಚಿಲ್ಕುಂದದ ಸದಾನಂದ, ಸಣ್ಣೇನಳ್ಳಿಯ ಸುತೀಶ ಕರೆ ಮಾಡಿ, ಗ್ರಾಮದ ಮನೆ ಮತ್ತು ಅಂಗಡಿಗಳಲ್ಲಿ ನಕಲಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆದಿದ್ದರೂ ಅಬಕಾರಿ ಇಲಾಖೆ ಯಾವುದೇ ಕ್ರಮ ವಹಿಸುತ್ತಿಲ್ಲಾ. ಹಳ್ಳಿಗಳು ಹಾಳಾಗುತ್ತಿವೆ ಎಂದು ದೂರಿದರು. ಇಒ ಅಬಕಾರಿ ಇಲಾಖೆಗೆ ಕ್ರಮವಹಿಸುವಂತೆ ಸೂಚಿಸಿದರು. ಸತೀಶ್ ಅವರು ತಿಪ್ಪಲಾಪುರ, ಸಣ್ಣೇನಹಳ್ಳಿಗಳಲ್ಲಿ ಹುಣಸೂರು ಡಿಪೋಗೆ ಸೇರಿದ ಬಸ್ ಚಾಲಕ ಸುಂದರ್ ಎಂಬಾತ ಬಸ್ ನಿಲ್ಲಿಸದೆ ತೊಂದರೆ ಕೊಡುತ್ತಿದ್ದಾರೆಂದು ನೀಡಿದ ದೂರಿಗೆ ಸಾರಿಗೆ ಇಲಾಖೆಗೆ ತಿಳಿಸಲು ಸೂಚಿಸಲಾಯಿತು.
ಮೂಲ ಸೌಲಭ್ಯಕ್ಕೆ ಮನವಿ: ಹನಗೋಡು ಗ್ರಾಪಂ ಸದಸ್ಯ ನಂಜುಂಡಸ್ವಾಮಿ ಹಾಗೂ ಶ್ರೀಧರ್, ಜಲಾನಯನ ಇಲಾಖೆ ಅಧಿಕಾರಿಗಳು ಗ್ರಾಮಸಭೆ ನಡೆಸದೆ, ಗ್ರಾಪಂ ಸದಸ್ಯರಿಗೂ ತಿಳಿಸದೆ ಜಲಾನಯನ ಅಭಿವೃದ್ಧಿ ಸಮಿತಿ ರಚಿಸಿದ್ದಾರೆ. ಈ ಬಗ್ಗೆ ಗ್ರಾಪಂನಲ್ಲೂ ನಿರ್ಣಯವಾಗಿದೆ ಎಂದರೆ, ದಸಂಸ ನಿಗರಾಜ ಮಲ್ಲಾಡಿ ಹನಗೋಡು ಹೋಬಳಿ ದೊಡ್ಡಹೆಜ್ಜೂರು ಗ್ರಾಮದಲ್ಲಿ ದಲಿತರ ಸ್ಮಶಾನಕ್ಕೆ ತೆರಳಲು ಸವರ್ಣೀಯರು ತೊಂದರೆ ಕೊಡುತ್ತಿದ್ದಾರೆ ಬಿಡಿಸಿಕೊಡಬೇಕೆಂಬ ಮನವಿಗೆ ನವೆಂಬರ್ನಲ್ಲಿ ಅಳತೆ ಮಾಡಿ ಒತ್ತುವರಿ ಬಿಡಿಸಲಾಗುವುದು ಎಂದು ತಹಸೀಲ್ದಾರ್ ವೆಂಕಟಾಚಲ ತಿಳಿಸಿದರು. ಪಟ್ಟಣದ ಬೆಳ್ತೂರು ಮಹದೇವು, ಕುಮಾರ್ ಮಾತನಾಡಿದರು.
ಗೈರು ಹಾಜರಿಗೆ ನೋಟಿಸ್: 35 ಇಲಾಖೆಗಳ ಪೈಕಿ 14 ಇಲಾಖೆ ಅಧಿಕಾರಿಗಳು ಗೈರು ಹಾಗೂ ಕೆಲ ಇಲಾಖೆ ಕೆಳ ಹಂತದ ಅಧಿಕಾರಿಗಳ ಹಾಜರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಸಂಬಂಧ ಗೈರು ಅಧಿಕಾರಿಗಳಿಂದ ಕಾರಣ ಕೇಳಿ ಹಿರಿಯ ಅಧಿಕಾರಿಗೆ ದೂರು ನೀಡಲಾಗುವುದು ಎಂದು ಇಒ ಡಾ. ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.