ಮೈಸೂರು

ಔಷಧಿ ಸಿಂಪಡಣೆಯಿಂದ ನೊಣದ ಬದಲು ಎತ್ತುಗಳೆ ಸತ್ತು ಹೋದವು!

Published On :

ಕ.ಪ್ರ.ವಾರ್ತೆ   ಹುಣಸೂರು   ಅ. 30
ಎತ್ತುಗಳಿಗೆ ಮುತ್ತುತ್ತಿದ್ದ ನೊಣಗಳ ಹಾವಳಿ ತಪ್ಪಿಸಲು ಅವುಗಳ ಮೇಲೆ ಔಷಧಿ ಸಿಂಪಡಿಸಿದರೆ ನೊಣಗಳ ಬದಲು ಎತ್ತುಗಳೆ ಮೃತಪಟ್ಟ ಘಟನೆ ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತ ನಟರಾಜ್ ಎಂಬವರು ಕೋಳಿ ಪಾರಂನಲ್ಲಿ ನೊಣ ಹಾವಳಿ ನಿಯಂತ್ರಣಕ್ಕೆ ಬಳಸುವ ಔಷಧವನ್ನು ನೊಣದ ಹಾವಳಿ ತಪ್ಪಿಸಲು ಉಳುಮೆ ಮಾಡುತ್ತಿದ್ದ ಎತ್ತುಗಳ ಮೈಮೇಲೆ ಸಿಂಪಡಿಸಿದ್ದರಿಂದ ಸಾವಿರಾರು ರು. ಬೆಲೆ ಬಳುವ ಎರಡು ಎತ್ತುಗಳು ಹೊಲದಲ್ಲೆ ಉಳುಮೆ ಮಾಡುವಾಗಲೇ ಮೃತಪಟ್ಟಿವೆ.
ನಟರಾಜರ ಸಂಬಂಧಿ ಸೋಮಶೇಖರ್ ಅವರು ರಾಗಿ ಹೊಲದಲ್ಲಿ ಹರತೆ ಹೊಡೆಯುವ ವೇಳೆ ಎತ್ತುಗಳ ಮೇಲೆ ನೊಣಗಳ ದಾಳಿಯಿಂದ ಬೆದರಿ ಅತ್ತಿಂದಿತ್ತ ಓಡಾಡುವುದನ್ನು ತಪ್ಪಿಸಲು ರಸ್ತೆ ಎದುರಿನ ಕೋಳಿ ಫಾರಂನವರಿಗೆ ತಿಳಿಸಿದಾಗ ಫಾರಂನಲ್ಲಿ ನೊಣ ನಿಯಂತ್ರಣಕ್ಕೆ ಮಿಶ್ರ ಮಾಡಿದ್ದ ಔಷಧಿ ನೀಡಿ ಎತ್ತುಗಳ ಮೈಗೆ ಸವರಿ ಎಂಬ ಸೂಚನೆಯಂತೆ ಎತ್ತುಗಳಿಗೆ ಸವರಿದ ಕೆಲವೇ ಹೊತ್ತಿನಲ್ಲಿ ಜ್ಞಾನ ತಪ್ಪಿ ಬಿದ್ದು ಬಿಟ್ಟವು, ನೀರು ಕುಡಿಸಿದರಾದರೂ ಕೇವಲ 5 ನಿಮಿಷದಲ್ಲಿ ಒದ್ದಾಡಿ ಪ್ರಾಣ ಬಿಟ್ಟವು.


ಸ್ಥಳದಲ್ಲೇ ಪರಿಹಾರ
ಸ್ಥಳದಲ್ಲಿ ಫಾರಂನ ಮಾಲೀಕರು ಚರ್ಚಿಸಿ ರೈತನಿಗೆ ಸಾವಿನ ಪರಿಹಾರವಾಗಿ 42 ಸಾವಿರ ನೀಡಿದರು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.