ಮೈಸೂರು

ಪದಾಧಿಕಾರಿಗಳ ನೇಮಕ

Published On :

ಟಿ. ನರಸೀಪುರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾಗಿ ಬಿ. ಸೋಮಶಂಕರ್, ಗೌರವಾಧ್ಯಕ್ಷರಾಗಿ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷರಾಗಿ ನಟರಾಜು, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಜಿ. ರಾಜಶೇಖರ್, ತೊಂಟೇಶ್, ಖಜಾಂಚಿಯಾಗಿ ಬಿ.ಎಂ. ನಿಜಗಣರಾಧ್ಯ, ಮಹಾ ಪೋಷಕರಾಗಿ ಎಂ. ಲಿಂಗರಾಜು, ಸುಗಂಧರಾಜು ಹಾಗೂ ಎಂ.ಎಸ್. ಮಹೇಶ್ ನೇಮಕವಾಗಿದ್ದಾರೆ.

ರಾಸುಗಳ ತಪಾಸಣೆ
ಟಿ. ನರಸೀಪುರ: ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಪಶುಪಾಲನೆ ಇಲಾಖೆಯ ವತಿಯಿಂದ ರಾಸುಗಳಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹೈನುಗಾರಿಕೆ ಹಸುಗಳಿಗೆ ಹಾಗೂ ಇನ್ನಿತರ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹರಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಲಾಯಿತು. ಅಲ್ಲದೆ ಬಂಜೆತನ ನಿವಾರಣೆ ಔಷಧವನ್ನು 8 ರಾಸುಗಳಿಗೆ ನೀಡಲಾಯಿತು. ಶಿಬಿರದಲ್ಲಿ 165 ಧನಕರುಗಳು, 20 ಕುರಿ, 15 ಮೇಕೆ ಹಾಗೂ 255 ರಾಸುಗಳಿಗೆ ಪಶುಪಾಲನೆ ಇಲಾಖೆಯ ಸರ್ಕಾರಿ ಚಿಕಿತ್ಸೆಯನ್ನು ನೀಡಲಾಯಿತು.

ಬಿಜೆಪಿ ವಿವಿಧ ಮೋರ್ಚಾಗೆ ಪದಾಧಿಕಾರಿಗಳ ನೇಮಕ
ಪಿರಿಯಾಪಟ್ಟಣ: ತಾಲೂಕಿನ ಬಿಜೆಪಿ ಪಕ್ಷದ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್ ತಿಳಿಸಿದ್ದಾರೆ. ಯುವ ಮೊರ್ಚಾ- ಜೆ.ರವಿ (ಅಧ್ಯಕ್ಷರು), ರವಿ (ಪ್ರ.ಕಾರ್ಯದರ್ಶಿ), ಎಸ್ಸಿ ಮೋರ್ಚಾ- ಬಸವರಾಜು (ಅಧ್ಯಕ್ಷರು), ಕೆ.ಕೆ. ನಾರಾಯಣ (ಪ್ರ.ಕಾರ್ಯದರ್ಶಿ). ಪಿರಿಯಾಪಟ್ಟಣ ಟೌನ್- ಪಿ.ಜೆ. ರವಿ (ಅಧ್ಯಕ್ಷರು), ಸುದರ್ಶನ್ (ಪ್ರ.ಕಾರ್ಯದರ್ಶಿ). ಅಲ್ಪ ಸಂಖ್ಯಾತ ಮೋರ್ಚಾ- ವಾಹೀದ್ ಪಾಷ (ಅಧ್ಯಕ್ಷರು), ಸೈಯದ್‌ರುಕ್ಮದ್, ವೆಂಕಟೇಶ್ (ಪ್ರ.ಕಾರ್ಯದರ್ಶಿ). ಮಹಿಳಾ ಮೋರ್ಚಾ- ಪ್ರೀತಿ ಅರಸ್ (ಅಧ್ಯಕ್ಷರು), ನೇತ್ರಕುಮಾರಿ (ಪ್ರ. ಕಾರ್ಯದರ್ಶಿ). ರೈತ ಮೋರ್ಚಾ- ಆನಂದ್ (ಅಧ್ಯಕ್ಷರು), ರವಿ (ಪ್ರ. ಕಾರ್ಯದರ್ಶಿ).

ಶ್ರೀಕೃಷ್ಣ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ
ಕೆ.ಆರ್. ನಗರ: ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಾಲಾಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಮತ್ತು ದೇವರ ನಾಮ ಸ್ಪರ್ಧೆ ಏರ್ಪಡಿಸಲಾಗಿತ್ತು. 350 ಕ್ಕೂ ಹೆಚ್ಚು ಶಾಲಾ ಮಕ್ಕಳು ಲವಲವಿಕೆಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗೌರವ ಕಾರ್ಯದರ್ಶಿ ಡಾ. ಮೋಹನದಾಸಭಟ್, ಉಪಾಧ್ಯಕ್ಷ ಶ್ರೀಧರಭಟ್, ಸೋಮಯಾಜಿ ಸಹೋದರರು, ಡಾ. ಜನಾರ್ದನಭಟ್, ಪತ್ರಕರ್ತ ಪಂಡಿತ್ ನಾಟೀಕರ್, ಭವಾನಿ ಶಂಕರ್, ನರಸಿಂಹ ಸೋಮಯಾಜಿ, ನಾಗರಾಜ್, ನಾಗೇಶ್, ಡಾ. ಗೋವರ್ಧನಾಚಾರ್, ಚೈತನ್ಯ, ಪ್ರಸಾದ್, ಕೃಷ್ಣಭಟ್, ವಾದಿರಾಜ್, ಹೃಷಿಕೇಶ್, ಕೃಷ್ಣಮೂರ್ತಿ, ವೆಂಕಟೇಶ್, ಪಾಲ್ಗೊಂಡಿದ್ದರು.
ಬಜರಂಗದಳದಿಂದ: ಸರಗೂರು ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ವತಿಯಿಂದ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ ಮತ್ತು ರಾಧ ವೇಷ ಧರಿಸಿದ್ದರು. ಬಸವೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಹೊರಟ ವೇಷಧಾರಿಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶಿಕ್ಷಕರ ಭವನಕ್ಕೆ ಆಗಮಿಸಿದರು. ಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಯುವಸ್ಪಂದನಾ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ ಪ್ರದಾನ
ಕ.ಪ್ರ.ವಾರ್ತೆ ಭೇರ್ಯ ಸೆ. 1
ಮಿರ್ಲೆ ಗ್ರಾಮದ ಯುವಸ್ಪಂದನ ಸ್ವಯಂಸೇವಾ ಸಂಸ್ಥೆಯಿಂದ ಭಾನುವಾರ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕ ಕೆ.ಎಲ್. ಹೇಮಂತ್‌ಕುಮಾರ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಸರ್ಕಾರದ ಜತೆಗೆ ಹಲವು ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ನಿವೃತ್ತ ಶಿಕ್ಷಕ ಹೊಸಹಟ್ಟಿ ವಿಶ್ವನಾಥ್, ಜೆಡಿಎಸ್ ಯುವ ಮುಖಂಡ ಧನಂಜಯ್, ಮಿರ್ಲೆ ಸುಭಾಷ್, ಸಂಸ್ಥೆಯ ಸಂಸ್ಥಾಪಕ ವಕೀಲ ಪ್ರಶಾಂತ್, ಕಾರ್ಯನಿರ್ವಾಹಕಿ ಇಂದ್ರರಾಜು, ಸಮಾಜ ಸೇವಕ ಕೃಷ್ಣಮೂರ್ತಿ, ನಿಶ್ಚಿತಾ ಪ್ರಶಾಂತ್, ವಿಜಯಲಕ್ಷ್ಮೀ ಇದ್ದರು.

ಭಾರಿ ಬಿರುಗಾಳಿ ಮಳೆಗೆ ಅಪಾರ ಪ್ರಮಾಣ ಬೆಳೆ ನಾಶ
ಹುಣಸೂರು: ತಾಲೂಕಿನ ಹನಗೋಡು ಹೋಬಳಿಯಲ್ಲಿ ಭಾನುವಾರ ಸಂಜೆ ಬಿರುಗಾಳಿ, ಮಳೆಗೆ ಜನ ಜಾನುವಾರುಗಳು ತತ್ತರಿಸಿ ಹೋಗಿದ್ದು, ಲಕ್ಷಾಂತರ ರು. ಮೌಲ್ಯದ ಮುಸುಕಿನ ಜೋಳ, ರಾಗಿ, ಬತ್ತ ನಾಶವಾಗಿವೆ. ಹನಗೋಡು ಹೋಬಳಿಯ ಬಿ.ಆರ್. ಕಾವಲ್ ಗ್ರಾಮದ ಹಲಗೆಗೌಡರಿಗೆ ಸೇರಿದ 8 ಎಕರೆ, ಕೃಷ್ಣೇಗೌಡರ 5 ಎಕರೆ, ಶಾಂತಶೆಟ್ಟಿ ಅವರ 2 ಎಕರೆ, ಮಾಸ್ತಯ್ಯ ಅವರ 7 ಎಕರೆ ಮುಸುಕಿನ ಜೋಳ ಬೆಳೆ ಹಾಗೂ ರಾಮಬೋವಿ ಅವರ 4 ಎಕರೆ ರಾಗಿ, ಕಡೆಮನುಗನಹಳ್ಳಿಯ ಕೆ.ಟಿ. ಕೃಷ್ಣೇಗೌಡರಿಗೆ ಸೇರಿದ 4 ಎಕರೆ ಬತ್ತದ ನಾಟಿ ಬೆಳೆಯು ಮಳೆಗೆ ಕೊಚ್ಚಿಹೋಗಿದೆ. ಹಾಗೆ ಹೆಬ್ಬಾಳದ ರಾಮಕೃಷ್ಣ ಬೋವಿ ಮತ್ತು ಪುಟ್ಟರಾಜು ಎಂಬವರ ಮನೆಗಳ ಕಲ್ನಾರ್ ಶೀಟುಗಳು ಗಾಳಿಗೆ ಹಾರಿ ಹೋಗಿ ಪುಡಿ ಪುಡಿಯಾಗಿವೆ. ಮುರಿದು ಬಿದ್ದ ಕಂಬಗಳು: ಹನಗೋಡು ಹೋಬಳಿಯ ಹೆಬ್ಬಾಳ, ನೇರಳಕುಪ್ಪೆ, ಕಚುವಿನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಲೈನ್ ಕಂಬಗಳು ಮುರಿದು ಬಿದ್ದಿವೆ. ಹನಗೋಡಿನ ಉಪ ಕೇಂದ್ರದಿಂದ ಬಿ.ಆರ್. ಕಾವಲ್ ಮಾರ್ಗದಿಂದ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಹೆಬ್ಬಾಳದಲ್ಲಿ ಮುರಿದು ಬಿದ್ದ ಕಂಬದಿಂದ ಇಡೀ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಗ್ಗತ್ತಲು ಆವರಿಸಿದೆ. ಆಗ್ರಹ: ತಾಲೂಕು ಆಡಳಿತ ನಷ್ಟ ಸಂಭವಿಸಿದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ದೊಡ್ಡಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ದಾ.ರಾ. ಮಹೇಶ್ ಮತ್ತು ನೇರಳಕುಪ್ಪೆ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಂದರಮ್ಮಮಹದೇವ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.