ಹಂಪಾಪುರದಲ್ಲಿ ಸಾಕ್ಷರತಾ ದಿನಾಚರಣೆ
ಕೆ.ಆರ್. ನಗರ: ತಾಲೂಕಿನ ಹಂಪಾಪುರ ಗ್ರಾಪಂ ಲೋಕ ಶಿಕ್ಷಣ ಕೇಂದ್ರದಲ್ಲಿ 49ನೇ ಅಂತಾರಾಷ್ಟ್ರಿಯ ಸಾಕ್ಷರತಾ ದಿನವನ್ನು ಭಾನುವಾರ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಚೆಲುವೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾಕ್ಷರತಾ ಕಾರ್ಯಕ್ರಮದ ಮೂಲಕ ಸರ್ಕಾರ 15 ರಿಂದ 35 ವರ್ಷದವರೆಗಿನ ಅನಕ್ಷರಸ್ಥರಿಗೆ ಮೂಲ ಸಾಕ್ಷರತೆ, ಓದು ಮುಂದುವರಿಸುವ ಆಸಕ್ತರಿಗೆ ಸಮಾನ ಶಿಕ್ಷಣ ನೀಡುತ್ತಿದೆ. ಜೊತೆಗೆ ಜೀವನ ಗುಣಮಟ್ಟ ಸುಧಾರಣೆಗೆ ವೃತ್ತಿ ಕೌಶಲ್ಯ ತರಬೇತಿ ಮತ್ತು ಜೀವನ ಪರ್ಯಂತ ಕಲಿಕೆಗೆ ಮುಂದುವರಿಕೆ ಶಿಕ್ಷಣದ ಅವಕಾಶ ಕಲ್ಪಿಸಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಎಸ್. ಶಿವಣ್ಣ, ಸದಸ್ಯರಾದ ಎಂ.ಎಸ್. ಅನಂತು, ರಾಮು, ಸರಸ್ವತಿ ಲೋಕೇಶ್, ಪ್ರೇರಕರಾದ ಬಸವರಾಜ್, ವನಜಾಕ್ಷಿ, ಮುಖಂಡರಾದ ಉಮೇಶ್, ನಟರಾಜ್, ಸಾಕ್ಷರತಾ ಸಮಿತಿಯ ಸದಸ್ಯರಾದ ರವಿಶಂಕರ್, ಫರೀನಾ ಬಾನು, ಯಶೋಧಮ್ಮ, ಭಾಗ್ಯಮ್ಮ, ಸುಮಲತ, ನಾಗೇಶ್, ದೀಪಕ್, ಜಯಮ್ಮ ಇದ್ದರು.
ಹಸಿರುಪಡೆ ಕಾರ್ಯಕ್ರಮ
ಭೇರ್ಯ: ಕೆ.ಆರ್. ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಸಿರುಪಡೆ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜವರೇಗೌಡ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಶಾಲಾವರಣದಲ್ಲಿ ಗಿಡಗಳನ್ನು ಬೆಳೆಸುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಯಾವಾಗಲೂ ಹಸಿರಿನಿಂದ ಕೂಡಿರುತ್ತದೆ ಎಂದು ಹೇಳಿದರು. ಪ್ರಾಂಶುಪಾಲೆ ಸರ್ವಮಂಗಳಮ್ಮ, ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಆರ್. ಆನಂದ್, ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

