11ಕ್ಕೆ ವಿವೇಕಾನಂದರ ವಿಚಾರ ಸಂಕಿರಣ
ಕ.ಪ್ರ.ವಾರ್ತೆ ಮೈಸೂರು ಸೆ.8
ಮೈಸೂರು ವಿವಿ ಸ್ವಾಮಿ ವಿವೇಕಾನಂದ ಪೀಠ ತತ್ವಶಾಸ್ತ್ರ ಅಧ್ಯಯನ ವಿಭಾಗವು ಸೆ.11 ಮತ್ತು 12 ರಂದು ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರೀಯ ಪುನರ್ ನಿರ್ಮಾಣ ಹಾಗೂ ಸ್ವಾಮಿ ವಿವೇಕಾನಂದರ ವಿಶ್ವಮಾನವ ಸಂದೇಶ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಾನಸಗಂಗೋತ್ರಿ ಇಎಂಆರ್ಸಿ ಸಭಾಂಗಣದಲ್ಲಿ ಆಯೋಜಿಸಿದೆ.
ಸೆ.11ರ ಬೆಳಗ್ಗೆ 10.30ಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ವಿಚಾರಸಂಕಿರಣ ಉದ್ಘಾಟಿಸುವರು. ಶ್ರೀರಾಮಕೃಷ್ಣ ಆಶ್ರಮದ ಮಾಜಿ ಅಧ್ಯಕ್ಷ ಸ್ವಾಮಿ ಜಗದಾತ್ಮಾನಂದಜಿ ಅಧ್ಯಕ್ಷತೆ ವಹಿಸುವರು. ಸಂದರ್ಶಕ ಪ್ರಾಧ್ಯಾಪಕ ಕೆ.ಬಿ. ಪ್ರಭುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡುವರು.
ಮಧ್ಯಾಹ್ನ 12.30ಕ್ಕೆ ನಡೆಯುವ ಗೋಷ್ಠಿ- 1ರಲ್ಲಿ ಡಾ.ಎಸ್. ರಾಜೇಂದ್ರನ್, ಡಾ.ಆರ್. ಇಂದಿರಾ, ಡಾ.ಸಿ. ನಾಗಣ್ಣ, ಡಾ.ಎಚ್.ಎಲ್. ಚಂದ್ರಶೇಖರ್ ವಿಷಯ ಮಂಡಿಸುವರು. ಡಾ.ಆರ್. ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ಕ್ಕೆ ನಡೆಯುವ ಗೋಷ್ಠಿ-2 ರಲ್ಲಿ ಡಾ.ಎನ್. ಮಲ್ಲಿಕಾರ್ಜುನ, ರಾಚಯ್ಯ ಸ್ವಾಮೀಜಿ, ಡಾ.ಕೆ.ಎನ್. ಬಸವರಾಜು, ಪಿ.ಅರುಳಪ್ಪ, ಲಿಂಗಣ್ಣಸ್ವಾಮಿ, ಎನ್. ಚಿನ್ನಸ್ವಾಮಿ, ಎಸ್. ಶಿವಶಂಕರ್ ವಿಷಯ ಮಂಡಿಸುವರು, ಪ್ರೊ.ಜಿ.ಎನ್. ರೇಚಣ್ಣ ಅಧ್ಯಕ್ಷತೆ ವಹಿಸುವರು.
ಸೆ.12ರ ಬೆಳಗ್ಗೆ 10ಕ್ಕೆ ನಡೆಯುವ ಗೋಷ್ಠಿ-3 ರಲ್ಲಿ ಡಾ.ಎಂ. ರಾಮಚಂದ್ರ, ಪ್ರೊ.ಎಸ್.ಆರ್. ರಮೇಶ್, ಡಾ.ಎಸ್. ವೆಂಕಟೇಶ್, ಡಾ.ಕೆ. ಚಂಚುಲಕ್ಷ್ಮಿ ವಿಷಯ ಮಡಿಸುವರು, ಪ್ರೊ.ಜೆ.ಎಸ್. ಜಯದೇವ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2ಕ್ಕೆ ನಡೆಯುವ ಗೋಷ್ಠಿ- 4ರಲ್ಲಿ ಡಾ.ಎಸ್. ರಾಧಾ, ಸ್ವಾಮಿ ವೀರೇಶಾನಂದಜಿ ಮಹಾರಾಜ್, ಡಾ.ಎಂ. ವಿಜಯಲಕ್ಷ್ಮಿ, ಡಾ.ಎಂ. ಡ್ಯಾನಿಯಲ್, ಡಾ.ಕೆ. ನಾಗಣ್ಣ ವಿಚಾರ ಮಂಡಿಸುವರು. ಪ್ರೊ.ಎಚ್.ಎನ್. ಮುರುಳೀಧರ ಅಧ್ಯಕ್ಷತೆ ವಹಿಸುವರು.
ಸಂಜೆ 4ಕ್ಕೆ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಸಮಾರೋಪಣ ಭಾಷಣ ಮಾಡುವರು. ಮೈಸೂರು ವಿವಿ ಕುಲಸಚಿವ ಪ್ರೊ.ಸಿ. ಬಸವರಾಜು ಅಧ್ಯಕ್ಷತೆ ವಹಿಸುವರು ಎಂದು ತತ್ತ್ವಶಾಸ್ತ್ರ ಅಧ್ಯನ ವಿಭಾಗದ ಅಧ್ಯಕ್ಷ ಪ್ರೊ.ಎಂ. ರಾಮಚಂದ್ರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

