ಸುದ್ದಿ ಸಂಕ್ಷೇಪ
ಸಂತ ಮೆರಿಸ್ ಚರ್ಚ್ ವಾರ್ಷಿಕೋತ್ಸವ
ಎಚ್.ಡಿ. ಕೋಟೆ: ಪಟ್ಟಣದ ಹುಣಸೂರು- ಬೇಗೂರು ರಸ್ತೆಯ ಸಂತ ಮೆರೀಸ್ ಚರ್ಚ್ನ ವಾರ್ಷಿಕೋತ್ಸವವು ಸೆ. 15ರ ಸಂಜೆ 5ಕ್ಕೆ ನಡೆಯಲಿದ್ದು, ಮೇರಿ ಮಾತೆಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ ಎಂದರು.
ನಾಳೆ ಸಿಜಿಬಿ ಶಾಖೆ ಉದ್ಘಾಟನೆ
ರಾವಂದೂರು: ತಾಲೂಕಿನ ರಾವಂದೂರು ಗ್ರಾಮದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ನ 354ನೇ ಶಾಖೆಯನ್ನು ಸೆ. 16ರಂದು ಪ್ರಾರಂಭಿಸಲಿದ್ದು, ರಾವಂದೂರಿನ ಮೋಕ್ಷಪತಿ ಸ್ವಾಮೀಜಿ ನೂತನ ಶಾಖೆಯನ್ನು ಉದ್ಘಾಟಿಸುವರು ಎಂದು ಬ್ಯಾಂಕಿನ ವ್ಯವಸ್ಥಾಪಕ ಜಿ.ಸುಧೀಂದ್ರ ತಿಳಿಸಿದ್ದಾರೆ. ಬ್ಯಾಂಕಿನ ಅಧ್ಯಕ್ಷ ಸೋಮಶೇಖರಶಾಸ್ತ್ರಿ ಅಧ್ಯಕ್ಷತೆ ವಹಿಸುವರು.
16ರಂದು ರಸಗ್ರಹಣ ಶಿಬಿರ
ಸಾಲಿಗ್ರಾಮ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.16ರಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕಾಲೇಜಿನ ಶ್ರೀ ವಿಜಯ ಕನ್ನಡ ವಿಭಾಗ ಸಂಯುಕ್ತವಾಗಿ ಮುತ್ತು ಬಂದಿದೆ ಕೇರಿಗೆ ಕನಕದಾಸರ ಉಪನ್ಯಾಸ, ವಾಚನ, ಗಾಯನ ರಸಗ್ರಹಣ ಶಿಬಿರ ಏರ್ಪಡಿಸಿದೆ. ಹೊರೆಯಾಲ ದೊರೆಸ್ವಾಮಿ ಉಪನ್ಯಾಸ ನೀಡುವರು. ಗಾಯನವನ್ನು ಶಾಂತಲ ವಟ್ಟಂ ನಡೆಸಿಕೊಡಲಿದ್ದಾರೆ ಎಂದು ಕನ್ನಡ ಉಪನ್ಯಾಸಕ ಪ್ರೊ. ಬಸವಂತಪ್ಪ ಗುದಗತ್ತಿಯರ್ ತಿಳಿಸಿದ್ದಾರೆ.
ಗೋಡೆ ಕುಸಿದು ಹಸು ಸಾವು
ಪಿರಿಯಾಪಟ್ಟಣ: ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಹಸು ಮೃತಪಟ್ಟಿರುವ ಘಟನೆ ತಾಲೂಕಿನ ವಡೇರಹೊಸಳ್ಳಿಯಲ್ಲಿ ಜರುಗಿದೆ. ಗ್ರಾಮದ ಶಂಕರಪ್ಪ ಎಂಬುವರ ಮನೆಯ ಪಕ್ಕದಲ್ಲಿ ಕಟ್ಟಿದ್ದ ಹಸುವಿನ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ, ಸುಮಾರು 40 ಸಾವಿರ ಬೆಲೆ ಬಾಳುವ ಹಸು ಸ್ಥಳದಲ್ಲೆ ಮೃತಪಟ್ಟಿದೆ.
ರಾವಂದೂರು; ಜೆಡಿಎಸ್ ಬೆಂಬಲಿತರ ಆಯ್ಕೆ
ಕ.ಪ್ರ.ವಾರ್ತೆ ರಾವಂದೂರು ಸೆ. 14
ತಾಲೂಕಿನ ರಾವಂದೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಬಿ.ಟಿ.ಮರೀಗೌಡ ಹಾಗೂ ಉಪಾಧ್ಯಕ್ಷರಾಗಿ ಆರ್.ಎಸ್.ಸುಮನ್ಕುಮಾರ್ ಶನಿವಾರ ಅವಿರೋಧ ಆಯ್ಕೆಯಾದರು. ಸಹಕಾರ ಸಂಘದಲ್ಲಿ ಒಟ್ಟು 10 ನಿರ್ದೇಶಕರಿದ್ದಾರೆ. ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆಯ ಅಧಿಕಾರಿ ಡಿ.ಎಲ್.ಸುರೇಶ್ ಕಾರ್ಯ ನಿರ್ವಹಿಸಿದರು. ಜಿಪಂ ಸದಸ್ಯ ಎಸ್.ಎ.ಶಿವಣ್ಣ, ನಿರ್ದೇಶಕರಾದ ಎಚ್.ಡಿ. ವಿಜಯ, ಕುಮಾರ್, ರಾಮಚಂದ್ರ, ಸೂಯೇಬ್ಖಾನ್, ಜಗದೀಶ್, ಗಾಯಿತ್ರಿ, ವೀಣಾ, ರವಿ, ಮುಖಂಡರಾದ ಸಯ್ಯದ್ಅಬ್ಬಾಸ್, ಶೇಖ್ಅಹಮ್ಮದ್, ಸಾಬೀತ್ಜಾವುಲ್ಲಾ, ನದೀಮ್, ಶಿವದೇವಪ್ಪ, ದೇವರಾಜೇಗೌಡ, ಸಿ.ಬಿ. ರಾಜ, ಸತ್ಯಾನಂದ, ಶಿವಣ್ಣ, ಹಾಗೂ ಕಾರ್ಯ ನಿರ್ವಹಣಾಧಿಕಾರಿ ಆರ್.ಎ.ವಿಜೇಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

