ಮೈಸೂರು

ಜ್ಞಾನ ವೃದ್ಧಿಗೆ ಪುಸ್ತಕಗಳು ಸಾಧನ

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 16
ಜ್ಞಾನ ವೃದ್ಧಿಗೆ ಪುಸ್ತಕಗಳು ಸಾಧನ ಎಂದು ಎಸ್‌ಡಿಎಂ ಐಎಂಡಿ ಸಂಸ್ಥೆಯ ಗ್ರಂಥಪಾಲಕ ಡಾ.ಎಂ.ಎ. ಸುನಿಲ್ ಹೇಳಿದರು.
ಶಾರದಾ ವಿಲಾಸ ಕಾಲೇಜಿನ ಗ್ರಂಥಾಲಯ ವಿಭಾಗವು ಮೊದಲನೇ ಚಾತುರ್ಮಾಸದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗ್ರಂಥಾಲಯ ಪ್ರಾಮುಖ್ಯತಾ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗ್ರಂಥಾಲಯದಲ್ಲಿ ಇರುವ ಪುಸ್ತಕಗಳು ಮಾತನಾಡುತ್ತವೆ. ಅವುಗಳ ಮಾತನ್ನು ನಾವು ತಾಳ್ಮೆಯಿಂದ ಆಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜ್ಞಾನ ವೃದ್ಧಿ ಸಾಧ್ಯ. ಗ್ರಂಥಗಳು ಹಾಗೂ ಅಂತರ್ಜಾಲ ಈ ಎರಡನ್ನು ಬಳಸಿಕೊಂಡಾಗ ಮತ್ತಷ್ಟು ಮಾಹಿತಿ ದೊರೆಯಲಿದೆ ಎಂದರು.
ಇಂದು ಅಂತರ್ಜಾಲದಲ್ಲಿ ಉಪನ್ಯಾಸಗಳು, ಲೇಖನಗಳು, ಮಾದರಿ ಪ್ರಶ್ನೆ ಪತ್ರಿಕೆಗಳು ಹೀಗೆ ಎಲ್ಲವೂ ಲಭ್ಯವಿದೆ. ಅವುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿ ಅವರು, ಕೆಲವು ಬಹುಮುಖ್ಯ ವೆಬ್‌ಸೈಟ್ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಎ.ಆರ್. ನಾಗಭೂಷಣ್, ತರಗತಿಗಳಲ್ಲಿ ಕಲಿತಿದ್ದನ್ನು ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ವಿಸ್ತರಿಸಿಕೊಳ್ಳಬೇಕು. ಆಗ ಮಾತ್ರ ಶಿಕ್ಷಣ ಅರ್ಥಪೂರ್ಣವಾಗಲಿದೆ. ಕಾಲೇಜಿನ ಜ್ಞಾನಕೇಂದ್ರ ಎಂದರೆ ಅದು ಗ್ರಂಥಾಲಯ. ಇದನ್ನು ಹಚ್ಚಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.  
ಗ್ರಂಥಪಾಲಕ ರಾಮಯ್ಯ ಸ್ವಾಗತಿಸಿದರು. ಗ್ರಂಥಾಲಯ ಸಮಿತಿ ಸಂಚಾಲಕ ಡಾ. ಜೆ. ಮಹಾದೇವ ಗಣ್ಯರ ಪರಿಚಯಿಸಿದರು. ಎಸ್. ವಿಮಲ ನಿರೂಪಿಸಿದರು. ಚಂದ್ರಕಲಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.