ಮೈಸೂರು

ಸುದ್ದಿ ಸಂಕ್ಷೇಪ

Published On :

ನಾಳೆ ಯಕ್ಷಗಾನ ಪ್ರಸಂಗ
ಮೈಸೂರು: ದಕ್ಷಿಣ ಕನ್ನಡ ಜಿಲ್ಲಾ ಸಂಘದಿಂದ ಸೆ.18ರ ಸಂಜೆ 6ಕ್ಕೆ ನಗರದ ಜಗನ್ಮೋಹನ ಅರಮನೆಯಲ್ಲಿ ಕೋಟಿ ಚೆನ್ನಯ್ಯ ಎಂಬ ತುಳು ಪೌರಾಣಿಕ ಪ್ರಸಂಗ ಏರ್ಪಡಿಸಲಾಗಿದೆ.
ವಿಶೇಷ ತರಬೇತಿ
ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಕಂದಳಿಕೆ ಹೋಬಳಿಯ ಕಾಟವಾಳು ಗ್ರಾಮದ ಚಿಗುರು ವಿಜ್ಞಾನ ಸಂಸ್ಥೆ ವತಿಯಿಂದ ಅ.5 ರಿಂದ 7 ರವರೆಗೆ 8 ರಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ಕಷ್ಟ ಪಟ್ಟು ಓದಬೇಡಿ, ಇಷ್ಟ ಪಟ್ಟು ಓದಿ ಎಂಬ ವಿಶೇಷ ತರಬೇತಿಯನ್ನು ನಗರದ ಗೋಪಾಲಸ್ವಾಮಿ ಶಿಶು ಶಿಕ್ಷಣ ಸಂಸ್ಥೆಯ ಪಿಯುಸಿ ಕಾಲೇಜಿನಲ್ಲಿ ಆಯೋಜಿಸಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊ. 8971797901 ಸಂಪರ್ಕಿಸಬಹುದು ಎಂದು ಶಿಕ್ಷಕ ಶಿವಪ್ಪ ತಿಳಿಸಿದ್ದಾರೆ.
ವಿಚಾರಗೋಷ್ಠಿ
ಮೈಸೂರು: ಪೀಪಲ್ಸ್ ಲೀಗಲ್ ಫೋರಂ, ರಾಮ್ ಮನೋಹರ ಲೋಹಿಯಾ ಟ್ರಸ್ಟ್, ಪ್ರಥಮ್ ಮೈಸೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೆ.18ರ ಬೆಳಗ್ಗೆ 10ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಮಕ್ಕಳ ಬೆನ್ನ ಪುಸ್ತಕ ಭಾರ- ಪರಿಹಾರ ಮಾರ್ಗೋಪಾಯಗಳು ಕುರಿತ ರಾಜ್ಯಮಟ್ಟದ ವಿಚಾರಗೋಷ್ಠಿ ಏರ್ಪಡಿಸಿದ್ದು, ಸೆಸ್ಕ್ ಎಂಡಿ ಎ.ಬಿ. ಇಬ್ರಾಹಿಂ ಉದ್ಘಾಟಿಸುವರು. ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಡಾ.ಜಿ.ಎಸ್. ಜಯದೇವ, ಡಿಡಿಪಿಐ ಬಿ.ಕೆ. ಬಸವರಾಜು ಭಾಗವಹಿಸುವರು.
ಗಣಿತ ತರಬೇತಿ
ಮೈಸೂರು: ಟ್ರಸ್ಟ್ ಫಾರ್ ಬಡ್ಡೀಸ್ಸ್ ಸಂಸ್ಥೆಯಿಂದ ಟಿ4ಬಿ ಬೋಧನೆ ವಿಧಾನ ಹೇಳಿಕೊಡಲಿದ್ದು, ಸಿಬಿಎಸ್‌ಇ, ಐಸಿಎಸ್‌ಇ, ಸ್ಟೇಟ್ ಪಠ್ಯಕ್ರಮ ಮತ್ತು 1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಗಣಿತ ಬಗ್ಗೆ ಸರಾಸರಿ ಅಥವಾ ದುರ್ಬಲರಾಗಿದ್ದಲ್ಲಿ ಈ ಅವಕಾಶ ಪಡೆದುಕೊಳ್ಳಬಹುದು.ಸೆ.18 ರೊಳಗೆ ಹೆಸರು ನೋಂದಾಯಿಸಿಕೊಂಡು ಸೆ. 21 ಮತ್ತು 22 ರಂದು ಟಿ4ಬಿ ಪರೀಕ್ಷೆ ಕೇಂದ್ರದಲ್ಲಿ ನಡೆಯುವ ಪರೀಕ್ಷೆಯಲ್ಲಿ ಭಾಗವಹಿಸಹುದು. ಮೊ. 917829044312
ಇಂಗ್ಲಿಷ್ ಕಲಿಕಾ ಶಿಬಿರ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ತರಬೇತಿ ಕೇಂದ್ರವು ಗೃಹಿಣಿಯರು ಮತ್ತು ಆಸಕ್ತರಿಗೆ 45 ದಿನಗಳ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರ ಏರ್ಪಡಿಸಿದೆ. ವಿವಿ ಆವರಣದ ಕೇಂದ್ರದ ಕಚೇರಿಯಲ್ಲಿ ಸೆ.20ರೊಳಗೆ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ವಿವಿ ಕುಲಸಚಿವ ಪ್ರೊ.ಪಿ.ಎಸ್. ನಾಯಕ್ ತಿಳಿಸಿದ್ದಾರೆ. ವಿವರಗಳಿಗೆ ದೂ. 2515944 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.