ಅಸಮಾನತೆ ನಿವಾರಣೆಗೆ ಶ್ರಮಿಸಿದ ಕನಕರು
ಕ.ಪ್ರ.ವಾರ್ತೆ ಸಾಲಿಗ್ರಾಮ್ಣ ಸೆ. 16
ಬಾಲ್ಯದಲ್ಲಿ ಮನಸ್ಸಿನ ಮೇಲೆ ಬಿತ್ತಿದ ವಿಷಯಗಳು ಬದುಕನ್ನು ಕಟ್ಟಿ ಕೊಡುವುದು ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಹೇಳಿದರು.
ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಶ್ರೀ ವಿಜಯ ಕನ್ನಡ ವಿಭಾಗವು ಆಯೋಜಿಸಿದ್ದ ಕನಕದಾಸರ ಕುರಿತು ಉಪನ್ಯಾಸ, ವಾಚನ, ಗಾಯನ ಹಾಗೂ ರಸಗ್ರಹಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
16ನೇ ಶತಮಾನದ ಕನಕದಾಸರ ಆಚಾರ ವಿಚಾರಗಳನ್ನು 21ನೇ ಶತಮಾನದಲ್ಲಿ ಚರ್ಚೆ ಮಾಡುವ ವಿಷಯ ಪ್ರಮುಖವಾಗಿದೆ. ಸತತವಾಗಿ ಸಾವುಗಳ ಸಾಲು ಮತ್ತು ಯುದ್ದದ ಸೋಲಿನಿಂದ ಮನಪರಿವರ್ತನೆಗೊಂಡ ಕನಕರು, ಸಮಾಜದಲ್ಲಿನ ಮೇಲು ಕೀಳು ಎಂಬ ಭಾವನೆಯನ್ನು, ಬಡತನ, ಸಿರಿತನದ ತಾರತಮ್ಯವನ್ನು ಹಾಗೂ ಜಾತಿ ಮೌಢ್ಯತೆಯನ್ನು ಮತ್ತು ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದಂತಹ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಹೊರೆಯಾಲ ದೊರೆಸ್ವಾಮಿ ಮಾತನಾಡಿ, ಭಾರತದ ಅತ್ಯಂತ ಪ್ರಾಚೀನ ಭಾಷೆಗಳು ಕನ್ನಡ ಮತ್ತು ತಮಿಳು ಭಾಷೆಗಳಾಗಿವೆ. ಇಂತಹ ಕಾಲದಲ್ಲಿ ಕವಿ, ಕಲಿ ಹಾಗೂ ಕೀರ್ತನಾಕಾರರಾಗಿ ಕನಕದಾಸರು ನಿರ್ವಹಿಸಿದ ಕಾರ್ಯ ಅತ್ಯಮೂಲ್ಯವಾಗಿದೆ ಎಂದರು.
ಗಾಯಕಿ ಶಾಂತಲಾ ವಟ್ಟಂ ಮತ್ತು ತಂಡದವರು ಕನಕದಾಸರ ಕುರಿತ ಗೀತಗಾಯನ ನಡೆಸಿಕೊಟ್ಟರು. ಪ್ರಾಂಶುಪಾಲ ಎಸ್.ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬಸವಂತಪ್ಪ ಗುದಗತ್ತಿಯರ್, ಸತೀಶ್ಚಂದ್ರ, ಮಿರ್ಲೆ ಮೃತ್ಯುಂಜಯ, ಶ್ರೀನಿವಾಸ್, ಶಿವಕುಮಾರ್ಸ್ವಾಮಿ, ಕುಮಾರ್, ವಿಜಯ್ಕುಮಾರ್, ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

