'ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ'
ಹುಣಸೂರು: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ, ತಾಲೂಕಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಪ್ರಾಧ್ಯಾಪಕರು ಶ್ರಮಿಸಬೇಕು ಎಂದು ಶಾಸಕ ಎಚ್.ಪಿ. ಮಂಜುನಾಥ್ ಕರೆ ನೀಡಿದರು.
ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡುವ ವಿದ್ಯಾರ್ಥಿ ಮತ್ತು ಕಾಲೇಜಿಗೆ ಶಾಸಕರ ಅನುದಾನ ಮತ್ತು ವೈಯಕ್ತಿಕವಾಗಿ ನಮ್ಮ ತಾಯಿ ಹೆಸರಿನಲ್ಲಿ ನೀಡುವ ಬಹುಮಾನ ಮತ್ತು ಅನುದಾನವನ್ನು ಗೆಲ್ಲುವಂತೆ ಹೇಳಿದರು. ಪಿಯುಸಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಟರ್ನಿಂಗ್ ಪಾಯಿಂಟ್, ವಿಷಯ ಆಯ್ಕೆ ಬಹುಮುಖ್ಯ. ನಂತರ ನಿಮ್ಮ ಪಠ್ಯೇತರ ಚಟುವಟಿಕೆಯು ಪಠ್ಯ ಅಂಕಗಳಿಕೆಗೆ ಪೂರಕವಾದುದು. ಈ ನಿಟ್ಟಿನಲ್ಲಿ ತಾವು ಇದಕ್ಕಾಗಿ ಹೆಚ್ಚು ಫಲಿತಾಂಶ ಪಡೆದು, ಕಾಲೇಜು ಅಭಿವೃದ್ಧಿಗೆ ಪ್ರಥಮ ಬಹುಮಾನವಾಗಿ ಒಂದು ಲಕ್ಷ ರು., ದ್ವಿತೀಯ 50 ಸಾವಿರ ರು., ಶಾಸಕರ ಅನುದಾನದಿಂದ ಕಾಲೇಜು ಅಭಿವೃದ್ಧಿಗೆ ನೀಡುತ್ತಿದ್ದೇನೆ. ಇದರಿಂದ ಕಾಲೇಜುಗಳ ನಡುವೆ ಪೈಪೋಟಿ ಉಂಟಾಗಿದ್ದು, ಫಲಿತಾಂಶ ಹೆಚ್ಚಳವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರೊ.ಸಿದ್ದೇಗೌಡ, ಪ್ರಾಂಶುಪಾಲ ಎ.ಆನಂದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಷಯ ವಿಜ್ಞಾನ ಸಂಸ್ಥೆಯ ಪೆಂಜಹಳ್ಳಿ ಸುರೇಂದ್ರ ಸರಳ ವಿಜ್ಞಾನ ಪ್ರಯೋಗಗಳ ಬಗ್ಗೆ ಪ್ರಾತಕ್ಷತೆ ನೀಡಿ ಗಮನ ಸೆಳೆದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಎಸ್. ಚಂದ್ರಶೇಖರ್, ಸದಸ್ಯರಾದ ಮೋಹನ್ ರಾವ್, ಶೋಹಿಬ್ ಅಹ್ಮದ್, ಬಸವರಾಜು, ರಮೇಶ್ಬಾಬು, ಉಪನ್ಯಾಸಕ ಕಾರ್ಯದರ್ಶಿ ಎಚ್. ಶಾಂತರಾಜು, ಸಹ ಕಾರ್ಯದರ್ಶಿಗಳಾದ ಟಿ.ಸಿ. ಕೃಷ್ಣ, ರೂಪಾ, ಶಹನಾದಿತರನಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

