ಸುದ್ದಿ ಸಂಕ್ಷೇಪ
ಮುಕುಂದಗೆ ಪ್ರಶಸ್ತಿ
ಕೆ.ಆರ್. ನಗರ: ಬೆಂಗಳೂರಿನ ಪದ್ಮಮುಖಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿಯನ್ನು ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮುಕುಂದ ಅವರಿಗೆ ನೀಡಿದೆ.
ಲೋಕಾಯುಕ್ತ ಎಂಜಿನಿಯರ್ ಭೇಟಿ
ಟಿ. ನರಸೀಪುರ: ತಾಲೂಕಿನ ಬಿ. ಸೀಹಳ್ಳಿ ಮತ್ತು ಮಾರಗೌಡನಹಳ್ಳಿ ಕೆರೆಗಳ ಪುನರುಜ್ಜೀವನ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ನಿಮಿತ್ತ ಸ್ಥಳ ಪರಿಶೀಲನೆಗೆ ಲೋಕಾಯುಕ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೆ.17 ಮತ್ತು 18 ರಂದು ಆಗಮಿಸುವರು. ಸೆ. 17ರ ಮಧ್ಯಾಹ್ನ 12.30ಕ್ಕೆ ತನಿಖೆ ನಡೆಸಲಿದ್ದಾರೆ ಎಂದು ದೂರುದಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಘಟನಾ ಕಾರ್ಯದರ್ಶಿ ಎಸ್.ಕೆ. ರಾಜುಗೌಡ ತಿಳಿಸಿದ್ದಾರೆ.
ಆದರ್ಶ ದಂಪತಿ ಕಾರ್ಯಕ್ರಮ
ಕೆ.ಆರ್. ನಗರ: ಇಲ್ಲಿನ ಬಸವೇಶ್ವರ ಬಡಾವಣೆಯ ಬಸವೇಶ್ವರ ಯುವ ವೇದಿಕೆಯ ವತಿಯಿಂದ ಪ್ರತಿಷ್ಠಾಪಿಸಿರುವ ಮಹಾಗಣಪತಿ ಸಾಂಸ್ಕೃತಿ ವೇದಿಕೆಯಲ್ಲಿ ಸೆ. 17ರ ಸಂಜೆ 7ಕ್ಕೆ ಆದರ್ಶ ದಂಪತಿಗಳು ಕಾರ್ಯಕ್ರಮ ಆಯೋಜಿಸಿದೆ. ಬಡಾವಣೆಯ ದಂಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವೇದಿಕೆಯ ಅಧ್ಯಕ್ಷ ಮಧು ಪ್ರಕಟಣೆಯಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

