ಮೈಸೂರು

ಸುದ್ದಿ ಸಂಕ್ಷೇಪ

Published On :

ಕುರುಬರ ಸಂಘದ ಸದಸ್ಯರಿಗೆ ಸೂಚನೆ
ಮೈಸೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆಯು ಸೆ.29ರಂದು ನಡೆಯಲಿದ್ದು, ಕೇಂದ್ರ ಸಂಘದಿಂದ ನೀಡಿರುವ ಗುರುತಿನ ಚೀಟಿ ಕಳೆದುಕೊಂಡವರು ಮತ್ತೆ 2 ಭಾವಚಿತ್ರ ಹಾಗೂ ವಿಳಾಸ ನೀಡಿ ಕೇಂದ್ರ ಸಂಘದಿಂದ ಗುರುತಿನ ಚೀಟಿ ಪಡೆದುಕೊಳ್ಳುವಂತೆ ಹೊಸಹುಂಡಿ ಗ್ರಾಪಂ ಸದಸ್ಯ ಕೆ. ಶಿವಣ್ಣ ಮನವಿ ಮಾಡಿದ್ದಾರೆ. ಈಗಾಗಲೇ ಸದಸ್ಯತ್ವ ಪಡೆದು ಗುರುತಿನ ಚೀಟಿ ಹೊಂದಿರುವವರು ಮತ ಚಲಾಯಿಸಬಹುದು. ಆದರೆ, ಗುರುತಿನ ಚೀಟಿ ಹೊಂದಿಲ್ಲದವರಿಗೆ ಪರ್ಯಾಯವಾಗಿ ಈ ಅನುಕೂಲ ಮಾಡಿಕೊಡಲಾಗಿದೆ. ಆದ್ದರಿಂದ ಸೆ.19ರ ಸಂಜೆ 6ರೊಳಗೆ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆದುಕೊಳ್ಳುವಂತೆ ಕೋರಿದ್ದಾರೆ.
ಆರೋಗ್ಯತಪಾಸಣೆ ಶಿಬಿರ
ನಗರದ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಎಸ್. ಉತ್ತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀಶ್ ಉಪಾಧ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನತೆಯಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆಗಳು ಹಾಗೂ ಅವುಗಳ ಪರಿಹಾರ ಉಪಾಯಗಳು ಅಲ್ಲದೆ ಆರೋಗ್ಯ ರಕ್ಷಣೆಯ ಮಹತ್ವವನ್ನು ಕುರಿತು ವಿವರಿಸಿದರು. ಗ್ರಾಪಂ ಸದಸ್ಯೆ ಸುನೀತಾ ಲಿಂಗರಾಜು ಮಾತನಾಡಿದರು. ಎಸ್. ಉತ್ತನಹಳ್ಳಿ ಆಯುಷ್ ಆಸ್ಪತ್ರೆಯ ವೈದ್ಯೆ ಡಾ. ಉಮಾ ಇದ್ದರು. ಸಂಚಾಲಕ ಡಾ. ಶಿವಾನಂದ ಗವಿಮಠ ಹಾಗೂ ಡಾ. ಸುಭಾಷ್‌ಚಂದ್ರ ಬೋಸ್ ಕಾರ್ಯ ನಿರ್ವಹಿಸಿದರು. ಡಾ. ರೂಪಾ, ಡಾ. ಸುನಿಲ್, ಡಾ. ಅನಂತ್ ಭಾಗವಹಿಸಿದ್ದರು. ಶಿಬಿರದಲ್ಲಿ ಸಾಮಾನ್ಯ ರೋಗಗಳಾದ ಸಂಧಿನೋವು, ಕೀಲುನೋವು, ಚರ್ಮರೋಗಗಳು, ಕಿವಿ, ಮೂಗು, ಗಂಟಲಿನ ಸಮಸ್ಯೆಗಳು, ಕಣ್ಣಿನ ಸಮಸ್ಯೆಗಳು, ಸ್ತ್ರೀ ರೋಗಗಳು ಹಾಗೂ ಮಕ್ಕಳ ಸಮಸ್ಯೆಗಳಿಗೆ ಉಚಿತ ತಪಾಸಣೆ ಹಾಗೂ ಔಷಧಿ ವಿತರಿಸಲಾಯಿತು.
ಯೋಜನೆ ಅವಧಿ ವಿಸ್ತರಣೆಗೆ ಮನವಿ
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹಲವು ವಿಶೇಷ ಯೋಜನೆಗಳ ಸೌಲಭ್ಯ ಪಡೆಯಲು ಇರುವ ಅವಧಿಯನ್ನು ವಿಸ್ತರಿಸಬೇಕು ಎಂದು ಅಶೋಕಪುರಂನ ಸಾಮಾಜಿಕ ಕಾರ್ಯಕರ್ತ ಎಚ್.ಎಸ್. ತೀರ್ಥಪ್ರಸಾದ್ ಮನವಿ ಮಾಡಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪ.ಜಾತಿಯವರ ಅಭಿವೃದ್ಧಿಗೆ ಅನೇಕ ವಿಶೇಷ ಕಾರ್ಯಕ್ರಮವನ್ನು ಸರ್ಕಾರ ಘೋಷಿಸಿದೆ. 15 ದಿನಗಳ ಕಾಲ ಅರ್ಜಿ ಸಲ್ಲಿಕೆ, ದಾಖಲಾತಿ ಲಗತ್ತಿಗೆ 15 ದಿನಗಳ ಕಾಲಾವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.