'ರಸಪ್ರಶ್ನೆಗಳಿಂದ ಜ್ಞಾನ ವಿಸ್ತಾರ'
ಮೈಸೂರು: ರಸಪ್ರಶ್ನೆಗಳು ವಿದ್ಯಾರ್ಥಿಗಳ ಕುತೂಹಲ, ಆಸಕ್ತಿಯನ್ನು ಮೂಡಿಸಿ ಜ್ಞಾನದ ವಿಸ್ತಾರಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ ಹೇಳಿದರು. ಅನುಭವ ಟ್ಯುಟೋರಿಯಲ್ಸ್ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜ್ಞಾನ ಗಣಿತ ಶಾಸ್ತ್ರಗಳು ಚಿಂತನೆಗೆ ಗುರಿಮಾಡಿ ವಿಷಯದ ಮೇಲೆ ಪ್ರಭುತ್ವ ಸಾಧಿಸುತ್ತದೆ. ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಉನ್ನತೀಕರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ನಿವೃತ್ತ ವಿಜ್ಞಾನ ಶಿಕ್ಷಕ ಎ.ಸಂಗಪ್ಪ ಸ್ಪರ್ಧೆ ನಡೆಸಿಕೊಟ್ಟರು. ಕೆ.ಎ. ಭಾಗೀರಥಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕಿ ಎಚ್.ಆರ್. ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು. ವಿ.ನಾರಾಯಣರಾವ್ ವಾಚನ ಮಾಡಿದರು. ಅಶ್ವಥನಾರಾಯಣ ಹಾಗೂ ನಾಗಲತಾರಿಗೆ ಬಹುಮಾನ ವಿತರಿಸಿದರು. ಎಸ್. ಶೈಲಾ ಸ್ವಾಗತಿಸಿದರು. ಸಿ. ಮೀರಾ ವಂದಿಸಿದರು.
22 ರಂದು ಡಾ. ಪಿಬಿಎಸ್ ಕಾರ್ಯಕ್ರಮ
ಮೈಸೂರು: ನಗರದ ಇಎನ್ಟಿ ತಜ್ಞ ಡಾ.ಎಂ.ಎಸ್. ನಟಶೇಖರ್ ಅವರ ಸಾರಥ್ಯದಲ್ಲಿ ಸೆ.22 ರಂದು ಕಲಾಮಂದಿರದಲ್ಲಿ ಮರೆಯಲಾಗದ ಮಾಣಿಕ್ಯ ಡಾ.ಪಿ.ಬಿ. ಶ್ರೀನಿವಾಸ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 5 ರಿಂದ ರಾತ್ರಿ 9 ರವರೆಗೆ ಡಾ.ಪಿಬಿಎಸ್ ಹಾಡಿರುವ ಅತ್ಯಂತ ಜನಪ್ರಿಯ ಕನ್ನಡ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು. ಡಾ.ಎಂ.ಎಸ್. ನಟಶೇಖರ್ ಅವರೊಂದಿಗೆ ಶ್ರೀದೇವಿ ಕುಳೇನೂರ್, ಆರ್.ವಿ. ನವ್ಯಶ್ರೀ, ಆರತಿರಾವ್, ಹಂಸಿನಿ ಎಸ್. ಕುಮಾರ್ ಗಾನ ಸುಧೆ ಹರಿಸುವರು. ಪಿಬಿಎಸ್ ಅವರ ಅಪಾರಕೀರ್ತಿ ಮೆರೆದ ಭವ್ಯ ನಾಡಿದು.., ಮೈಸೂರು ದಸರಾ ಎಷ್ಟೊಂದು ಸುಂದರ.. ಓಡುವ ನದಿನ ಸಾಗರವ ಸೇರಲೆಬೇಕು.., ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ.., ಒಲವೇ ಜೀವನ ಸಾಕ್ಷಾತ್ಕಾರ.., ಆಡುತಿರುವ ಮೋಡಗಳೆ.., ತಂ ನಂ ತಂ ನಂ ಎನ್ನೀ ಮನಸು ಮಿಡಿಯುತ್ತಿದೆ... ಹೀಗೆ ಸುಮಾರು 26 ಹಾಡುಗಳ ಪೈಕಿ 13 ಯುಗಳ ಗೀತೆ, 13 ಸೋಲೋ ಗೀತೆಗಳು ರಸಿಕರ ಮನರಂಜಿಸಲಿವೆ.
ಹುಟ್ಟುಹಬ್ಬ ಆಚರಣೆ
ಮೈಸೂರು: ವಿದ್ಯಾರಣ್ಯಪುರಂನ ಮಡಿಲು ಚಾರಿಟಬಲ್ ಟ್ರಸ್ಟ್ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭ ಮತ್ತು ಅಂಧಮಕ್ಕಳ ಹುಟ್ಟುಹಬ್ಬವನ್ನು ಸೆ.20ರ ಮಧ್ಯಾಹ್ನ 1ಕ್ಕೆ ತಿಲಕ್ನಗರದ ಅಂಧಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಆಯೋಜಿಸಿದೆ. ಟ್ರಸ್ಟ್ ಅಧ್ಯಕ್ಷ ಆರ್. ಪುರುಷೋತ್ತಮ್ ಅಧ್ಯಕ್ಷತೆ ವಹಿಸುವರು. ಶಾಸಕ ಎಂ.ಕೆ. ಸೋಮಶೇಖರ್, ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಹರ್ಷದ್, ಇನ್ಸ್ಪೆಕ್ಟರ್ ಟಿ.ಬಿ. ರಾಜಣ್ಣ, ಶಾಲೆಯ ಅಧೀಕ್ಷಕ ಎಚ್.ಆರ್. ಶ್ರೀನಿವಾಸ್ ಅತಿಥಿಯಾಗಿ ಭಾಗವಹಿಸುವರು.
ಇಂದಿನಿಂದ ಕಿಡ್ನಿ ಕಾಯಿಲೆ ತಪಾಸಣೆ
ಮೈಸೂರು: ಬಿಎನ್ ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸೆ.19 ರಿಂದ 21 ರವರೆಗೆ ಮೂತ್ರಪಿಂಡದ ಕಾಯಿಲೆಗಳ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಈ ಮೂರು ದಿನಗಳ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮೂತ್ರಪಿಂಡ ತಜ್ಞರೊಡನೆ ಸಮಾಲೋಚನೆ, ಮೂತ್ರರೋಗ ತಜ್ಞರು ಮತ್ತು ಆಹಾರ ತಜ್ಞರೊಡನೆ ಸಂವಾದ, ಮೂತ್ರದ ರುಟೀನ್ ತಪಾಸಣೆ, ಸೀರಮ್ ಕ್ರಿಯಾಟಿನಿಸ್, ರಕ್ತದಲ್ಲಿನ ಯೂರಿಯಾ ತಪಾಸಣೆ ಮಾಡಲಾಗುವುದು. ಜತೆಗೆ ಸಿಟಿ ಕೆಯುಬಿ ತಪಾಸಣೆಯ ಮೇಲೆ ವಿಶೇಷ ರಿಯಾಯಿತಿ ಕೂಡ ಇರುತ್ತದೆ. ದೂ. 0821- 3989896, ಮೊ. 96207 00867 ಸಂಪರ್ಕಿಸಬಹುದು.
21ರಂದು ಸಮಾರೋಪ
ಕುಂಬಾರಕೊಪ್ಪಲಿನ ಮೈಸೂರು ಜಿಲ್ಲೆ ಕುಂಭೇಶ್ವರ ಕುಂಬಾರರ ಕೈಗಾರಿಕಾ ವಿವಿಧೋದ್ದೇಶ ಸಹಕಾರ ಸಂಘವು ಸೆ.21ರ ಮಧ್ಯಾಹ್ನ 12ಕ್ಕೆ ಗೋವರ್ಧನ್ ಹೊಟೇಲ್ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ಆಯೋಜಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸುವರು. ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಕೆಆರ್ಡಿಸಿಎಲ್ ಎಂಡಿ ಆರ್. ಶ್ರೀನಿವಾಸ, ಕುಂಬಾರರ ಮಹಾಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

