ಆಲಗೂಡು ಸಹಕಾರ ಸಂಘದ ವಾರ್ಷಿಕ ಸಭೆ
ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 19
ಸರ್ಕಾರ ಸಾಲ ಮನ್ನಾ ಯೋಜನೆಯನ್ನು 357 ಮಂದಿ ರೈತರು ಪಡೆದುಕೊಂಡಿದ್ದು, ರೈತರು ಪಡೆದುಕೊಂಡಿದ್ದ 88.86 ಲಕ್ಷ ಸಾಲದ ಹಣವನ್ನು ಮನ್ನಾ ಮಾಡಲಾಗಿದೆ ಎಂದು ಆಲಗೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಕೆ. ಲಿಂಗಣ್ಣ ಹೇಳಿದರು.
ತಾಲೂಕಿನ ಹೆಳವರಹುಂಡಿ ಗ್ರಾಮದಲ್ಲಿರುವ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ 2012-13ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಸಂಘದಿಂದ 1.74 ಕೋಟಿ ಸಾಲ ನೀಡಲಾಗಿತ್ತು. 88.86 ಲಕ್ಷ ರೈತರ ಸಾಲ ಮನ್ನಾ ಆಗಿದೆ. ಮನ್ನಾ ಮಾಡಿದ್ದ ಹಣಕ್ಕೆ ಸರ್ಕಾರ 22.91 ಲಕ್ಷಗಳನ್ನಷ್ಟೆ ಮಾತ್ರ ನೀಡಿದೆ. ಸಂಘದಲ್ಲಿ ಸುಸ್ತಿ ಸಾಲ 52.31 ಲಕ್ಷ ಬಾಕಿ ಇದೆ ಎಂದು ತಿಳಿಸಿದರು.
ಸರ್ಕಾರದಿಂದ 65.95 ಲಕ್ಷ ಸಾಲ ಮನ್ನಾ ಹಣ ಬರಬೇಕಿದೆ. ಸಾಲ ಮನ್ನಾ ಯೋಜನೆ ಅನುದಾನವನ್ನು ಸರ್ಕಾರ ನೀಡಿದ ನಂತರವಷ್ಟೇ ರೈತರಿಗೆ ಹೊಸ ಸಾಲ ನೀಡಲಾಗುವುದು. ರೈತರಿಂದ ಸುಸ್ತಿ ಸಾಲ ವಸೂಲಾತಿಗೆ ಸಿವಿಲ್ ದಾವೆ ಹೂಡುವ ಬಗ್ಗೆ ನಿರ್ಧರಿಸಲಾಗಿದೆ. ಪ.ಜಾತಿ ಹಾಗೂ ಪಂಗಡ ಸಮುದಾಯಗಳ ಜನರಿಗೆ ಯಶಸ್ವಿನಿ ಯೋಜನೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಸಿದ್ದಯ್ಯ, ಆಡಳಿತ ಮಂಡಳಿ ನಿರ್ದೇಶಕರಾದ ಎನ್. ಮೂರ್ತಿ, ಎ.ಎನ್. ಮಹದೇವಯ್ಯ, ದೊಡ್ಡೆಣ್ಣಮ್ಮ, ಎಚ್. ಮರಿಸ್ವಾಮಿ, ಪಿ. ನಟರಾಜು, ಮಲ್ಲಣ್ಣ, ಮೇಲ್ವಿಚಾರಕ ಪುಟ್ಟರಾಜು, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ನಾಗಲಾಂಭ, ಬಿ.ನಂಜುಂಡ, ಎಂ. ಗುರುಮಲ್ಲಪ್ಪ, ಎಸ್. ಗುರುಸ್ವಾಮಿ ಭಾಗವಹಿಸಿದ್ದರು.
ಮರಳು ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಹುಣಸೂರು: ಮರಳು ತುಂಬಿದ್ದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಕುಳಿತಿದ್ದ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಣಸೂರು-ಕೆ.ಆರ್. ನಗರ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ಮೀನಾಕ್ಷಿ ಸುಂದರಂ ಟೆಕ್ಸ್ಟೈಲ್ಸ್ ಬಳಿ ಜರುಗಿದೆ. ತಾಲೂಕಿನ ಹನಗೋಡು ಹೋಬಳಿಯ ಕಿರಂಗೂರು ಗ್ರಾಮದ ರಾಜೇಗೌಡನ ಪುತ್ರ, ಜೆಡಿಎಸ್ ಕಾರ್ಯಕರ್ತ ಬೀರೇಶ್ ಉ. ಬೀರೇಗೌಡ (27) ಮೃತಪಟ್ಟವರು. ಹಿರಿಕ್ಯಾತನಹಳ್ಳಿಯ ವಿಜಯಕುಮಾರ್ ಹಾಗೂ ನಟರಾಜ್ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಣಸೂರು ಕಡೆಯಿಂದ ಹಿರಿಕ್ಯಾತನಹಳ್ಳಿಗೆ ಬೈಕ್ನಲ್ಲಿ ಬುಧವಾರ ರಾತ್ರಿ ಮೃತ ಬೀರೇಶ್ ಸಂಬಂಧಿಕ ವಿಜಯಕುಮಾರ್ ಹಾಗೂ ಈತನ ಸ್ನೇಹಿತ ನಟರಾಜನೊಂದಿಗೆ ತೆರಳುತ್ತಿದ್ದ ವೇಳೆ, ಹುಣಸೂರಿನ ಕಡೆಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

