ಮೈಸೂರು

ಸುಧಾರಿತ ಕುರಿ ಕೊಟ್ಟಿಗೆ ವರದಾನ

Published On :

ಕ.ಪ್ರ.ವಾರ್ತೆ ಸುತ್ತೂರು ಸೆ. 19
ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ಹಾಗೂ ಸುಧಾರಿತ ಕುರಿ ಕೊಟ್ಟಿಗೆ ಕುರಿತು ರೈತರಿಗೆ ಪರಿಚಯಿಸುವ ಕಾರ್ಯಕ್ರಮ ನಡೆಯಿತು.
ಟಿ.ನರಸೀಪುರದ ಪಶುಸಂಗೋಪನೆ ಮತ್ತು ಪಶುಪಾಲನಾ ಇಲಾಖೆಯ ವಿಸ್ತರಣಾ ಅಧಿಕಾರಿ ಡಾ.ಹರೀಶ್ ಮಾತನಾಡಿ, ಕುರಿ ಮತ್ತು ಮೇಕೆಗಳನ್ನು ನಡೆದಾಡುವ ಎಟಿಎಮ್‌ಗೆ ಹೋಲಿಸಿ, ಕುರಿ ಸಾಕಣೆ ಪದ್ಧತಿಗಳು, ಸುಧಾರಿತ ಕುರಿ ಕೊಟ್ಟಿಗೆಯ ನಿರ್ಮಾಣ ಮತ್ತು ಕೊಟ್ಟಿಗೆ ಪದ್ಧತಿಯ ವಿಧಾನಗಳು, ಸೈಲೇಜ್ (ರಸ ಮೇವು) ತಯಾರಿಕೆ, ಕುರಿ ಮತ್ತು ಮೇಕೆಗಳಿಗೆ ಬರುವ ರೋಗಗಳು ಹಾಗೂ ಅವುಗಳನ್ನು ನಿಯಂತ್ರಿಸುವ ಕ್ರಮಗಳು ಮತ್ತು ಕುರಿ ಸಾಕಣೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ರೈತರಿಗೆ ಸಮಗ್ರವಾದ ಮಾಹಿತಿ ನೀಡಿ ಕುರಿ ಸಾಕಣೆ ಬಗ್ಗೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಕಾವೇರಿ ಗ್ರಾಮೀಣ ಬ್ಯಾಂಕ್, ಅಳಗಂಚಿ ಶಾಖೆಯ ವ್ಯವಸ್ಥಾಪಕ ಎ.ಎಸ್. ರಾಜಶೇಖರ್ ಮಾತನಾಡಿ, ಕುರಿ ಸಾಕಣೆಗೆ ಬ್ಯಾಂಕಿನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಇದೆ ವೇಳೆ ದೇವನಹಳ್ಳಿಯ ಪ್ರಗತಿಪರ ರೈತರಾದ ಶಂಕರೇಗೌಡರು, ತಾವು ಅಳವಡಿಸಿಕೊಂಡಿರುವ ಕುರಿ ಕೊಟ್ಟಿಗೆಯ ಅನುಭವ ಹಂಚಿಕೊಳ್ಳುತ್ತಾ, ಕುರಿ ಕೊಟ್ಟಿಗೆ ವಿಧಾನದಿಂದ ಒಂದೇ ಸ್ಥಳದಲ್ಲಿ ಉತ್ತಮ ಗೊಬ್ಬರ ದೊರೆಯುವುದರಿಂದ ಅದನ್ನು ಬೆಳೆಗಳಿಗೆ ಉಪಯೋಗಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು.
ಹೊಸ ಕುರಿ ಕೊಟ್ಟಿಗೆ: ದೇವನೂರಿನಲ್ಲಿ ಹೊಸದಾಗಿ, ವ್ಯವಸ್ಥಿತವಾಗಿ ಕುರಿ ಕೊಟ್ಟಿಗೆ ನಿರ್ಮಿಸಿಕೊಂಡಿರುವ ಡಿ.ಸಿ. ಗುರುಪ್ರಸಾದ್ ಮಾತನಾಡಿ, ಸುಧಾರಿತ ಕುರಿ ಕೊಟ್ಟಿಗೆಯಿಂದ ಕೆಲಸ ಸರಳ ಹಾಗೂ ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅವರು ನಿರ್ಮಿಸಿದ ಸುಧಾರಿತ ಕುರಿ ಕೊಟ್ಟಿಗೆಯು ನೆರೆದ ರೈತರ ಗಮನ ಸೆಳೆಯಿತು.
ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ಬಳಮಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಧಾರಿತ ಕುರಿ ಕೊಟ್ಟಿಗೆ ನಿರ್ಮಿಸಿ ರೈತರಿಗೆ ಮಾದರಿಯಾದ ಡಿ.ಸಿ. ಗುರುಪ್ರಸಾದ್ ಅವರನ್ನು ಅಭಿನಂದಿಸಿ, ರೈತರು ಯಾರನ್ನೂ ಅವಲಂಬಿಸದೆ ತಮ್ಮ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಕೃಷಿಯಲ್ಲಿ ಅನೇಕ ಸಾಧನೆಗಳನ್ನು ಮಾಡಬಹುದೆಂದು ಸಲಹೆ ನೀಡಿದರು.
ಶಾಮರಾಜ ಸ್ವಾಗತಿಸಿದರು. ನೇತ್ರಾವತಿ ವಂದಿಸಿದರು. ಕಳ್ಳೀಮನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.