ಸಂಘಗಳು ಸಮಾಜ ಸೇವಾ ಕಾರ್ಯದಲ್ಲಿ ತೊಡಗಲು ಸಲಹೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 19
ವಿಷ್ಣುವರ್ಧನ್ ಅಭಿಮಾನಿ ಸಂಘಗಳು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಜಿಲ್ಲಾ ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಹೇಳಿದರು.
ದಿ.ವಿಷ್ಣುವರ್ಧನ್ ಅವರ 63ನೇ ಹುಟ್ಟುಹಬ್ಬದ ಅಂಗವಾಗಿ ವಿಷ್ಣುವರ್ಧನ್ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆತ್ತು ಹೊತ್ತು ಸಾಕಿದ ತಂದೆ, ತಾಯಿಯನ್ನು ವೃದ್ಧಾಪ್ಯದಲ್ಲಿ ಅವರನ್ನು ನೋಡಿಕೊಳ್ಳಿ, ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ನಿಮ್ಮ ಸಮಿತಿಯಿಂದ ರಕ್ತದಾನ ಶಿಬಿರ, ಅನ್ನದಾನ, ಹಣ್ಣುಹಂಪಲು ವಿತರಣೆಯಂತಹ ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಪಪಂ ಸದಸ್ಯ ವಿವೇಕ್, ಎಂ.ಡಿ. ಪಾರ್ಥಸಾರಥಿ, ಮೈಕ್ ಚಂದ್ರು, ಪೇದೆ ರಮೇಶ್ ರಾವ್, ಸೋಮು, ವಿನಯ್ ಭಜರಂಗಿ, ಸೋಮಶೇಖರ್, ಶಬ್ಬೀರ್ ಇವರನ್ನು ವಿಷ್ಣುವರ್ಧನ್ ಸೇವಾ ಸಮಿತಿಯಿಂದ ಅಭಿನಂದಿಸಿತು.
ಸಮಿತಿ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಶೇಖರ್, ಖಜಾಂಚಿ ನವೀನ್, ಸದಸ್ಯರಾದ ರಾಜಾಚಾರಿ, ರಮೇಶ್, ರಾಜ, ಸ್ವಾಮಿ, ರಮೇಶಾಚಾರಿ, ರವಿ ಭಾಗವಹಿಸಿದ್ದರು.
ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ
ಕ.ಪ್ರ.ವಾರ್ತೆ ಹೊಸೂರು ಸೆ. 19
ಪ್ರಾಥಮಿಕ ಶಿಕ್ಷಣಕ್ಕೆ ಖಾಸಗಿ ಶಾಲೆಗಳ ಮೊರೆ ಹೋಗುವ ಪೋಷಕರು ಉನ್ನತ ಶಿಕ್ಷಣಕ್ಕೆ ಮಾತ್ರ ಸರ್ಕಾರಿ ಕೋಟಾದ ಸೀಟು ಬಯಸುವ ಪರಿಪಾಠ ಬಿಟ್ಟು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವಂತೆ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಹೇಳಿದರು.
ಕೆ.ಆರ್. ನಗರ ತಾಲೂಕಿನ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾ.ರಾ. ಸ್ನೇಹ ಬಳಗದ ವತಿಯಿಂದ ನೀಡುವ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸವಲತ್ತು ಬಯಸುವವರು ಶಾಲೆಗಳ ಏಳಿಗೆಗೆ ದುಡಿಯಬೇಕು ಆ ಕೆಲಸವನ್ನು ಶಾಸಕ ಸಾ.ರಾ. ಮಹೇಶ್ ಮಾಡುತ್ತಿದ್ದು ಇದು ಪ್ರಶಂಸನೀಯ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮೃತ್ಯುಂಜಯ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿ.ಡಿ. ಪ್ರಭಾಕರ, ತಾಲೂಕು ಜೆಡಿಎಸ್ ಉಪಾಧ್ಯಕ್ಷ ಹಳಿಯೂರು ಕೃಷ್ಣಮೂರ್ತಿ, ಸಾ.ರಾ. ಬಳಗದ ಕಾರ್ಯದರ್ಶಿ ಆನಂದ, ಮಹೇಶ್, ಮುಖ್ಯ ಶಿಕ್ಷಕ ಎಸ್. ಪ್ರದೀಪ್‌ಕುಮಾರ್, ಶಿಕ್ಷಕರಾದ ಧನಂಜಯ, ಪ್ರಕಾಶ್, ಮಂಜುನಾಥ್, ಶ್ರೀಧರ, ರಶ್ಮಿ, ವಿದ್ಯಾ, ಕವಿತಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

