'ಮಹಾನುಭಾವರ ಚಿಂತನೆ ಮನೆ ಮಾತಾಗಲಿ'
ಎಚ್.ಡಿ. ಕೋಟೆ: ಮಹಾನುಭಾವರ ಚಿಂತನಗೆಳು ಮನೆ ಮಾತಾಗಬೇಕೆಂದು ಡಾ.ಎಸ್. ಶಿವರಾಜಪ್ಪ ಹೇಳಿದರು. ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕಸಾಪ ವತಿಯಿಂದ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ನಡೆದ ವಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಜವಾದ ಧರ್ಮ ಎಂದರೆ ನೋವಿಗೆ ಸ್ಪಂದಿಸುವುದು, ವಚನಗಳು ಪ್ರತಿಜ್ಞಾ ಪೂರ್ವಕವಾಗಿರಬೇಕು. ಎಲ್ಲರಲ್ಲಿಯೂ ಸಮಾನತೆ ಇರಬೇಕು, ನಡೆ, ನುಡಿ, ವೇಷ, ಭೂಷಣ ಒಂದೇ ಎಂದು ಬಸವಣ್ಣ ತಮ್ಮ ವಚನದಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು. ಎಂ. ಚಂದ್ರಶೇಖರ್, ತಾಲೂಕು ಅಧ್ಯಕ್ಷ ಮಹೇಶ್, ಮಹದೇವನಾಯಕ, ಶಾಲೆಯ ಮುಖ್ಯೋಪಾದ್ಯಾಯಿನಿ ನಂದಿನಿ, ಕಸಾಪ ಕಾರ್ಯದರ್ಶಿ ಪ್ರಮೋದ್ ಇದ್ದರು.
'ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ'
ಟಿ. ನರಸೀಪುರ: ಮನುಷ್ಯನ ದೇಹದಲ್ಲಿ ಸೂಕ್ಷ್ಮತೆಯುಳ್ಳ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಸ್ವಾಮಿನಾಥ್ ಗೌಡ ಹೇಳಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ದೈಹಿಕ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳುವಂತೆಯೇ ಕಣ್ಣಿನಲ್ಲಿಯೂ ತೊಂದರೆ ಕಂಡು ಬಂದಾಗ ವಿಳಂಬ ಮಾಡದೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಅಮೂಲ್ಯವಾದ ಕಣ್ಣುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಖಾಸಗಿ ಬಸ್ ಏಜೆಂಟರ ಸಂಘದ 17ನೇ ವರ್ಷದ ಶ್ರೀ ಗಣಪತಿ ಮಹೋತ್ಸವದ ಪ್ರಯುಕ್ತ ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಅರವಿಂದ ಕಣ್ಣಾಸ್ಪತ್ರೆಯ ವೈದ್ಯಾಧಿಕಾರಿ ಡಾ.ನಿಶಾಂತ್ ರಾಜನ್, ಶಿಬಿರ ಸಂಯೋಜಕ ವಿಜಯ್, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು, ಕಾರ್ಯದರ್ಶಿ ರಾಜಣ್ಣ, ಖಾಸಗಿ ಬಸ್ ಏಜೆಂಟರಾದ ಶ್ರೀನಿವಾಸ್, ಶಂಕರ್, ನಂಜಪ್ಪ, ಚೇತು, ಪುಟ್ಟಣ್ಣ, ರಮೇಶ್, ರಾಜು, ನಾಗ, ನಾಗಲಿಂಗು, ಗಿರೀಶ್, ಮಾಧು, ಲೋಕೇಶ್, ಚಂದ್ರಶೇಖರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

