ಮೈಸೂರು

ಹಾಡ್ಯ ನೀರು ಬಳಕೆದಾರರ ಸಂಘಕ್ಕೆ ಆಯ್ಕೆ

Published On :

ಕ.ಪ್ರ.ವಾರ್ತೆ ಹೊಸೂರು ಸೆ. 20
ಚುಂಚನಕಟ್ಟೆ ಹೋಬಳಿ ಹಾಡ್ಯ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎನ್. ಸೋಮೇಶ್, ಉಪಾಧ್ಯಕ್ಷರಾಗಿ ಹನುಮಂತಶೆಟ್ಟಿ ಆಯ್ಕೆಯಾದರು.
ಎಚ್.ಎನ್. ಸೋಮೇಶ್ ಅವಿರೋಧವಾಗಿ ಆಯ್ಕೆಯಾದರೆ, ಹನುಮಂತಶೆಟ್ಟಿ ತಮ್ಮ ಪ್ರತಿಸ್ಪರ್ಧಿ ದ್ಯಾವನಾಯ್ಕ ಅವರನ್ನು ಮೂರು ಮತಗಳ ಅಂತರದಿಂದ ಸೋಲಿಸಿದರು. ಚುನಾವಣಾಧಿಕಾರಿಯಾಗಿ ರಾಮೇಗೌಡ ಕಾರ್ಯ ನಿರ್ವಹಿಸಿದರು. ಕಾರ್ಯದರ್ಶಿ ಮಹೇಶ್ ಸಹಕರಿಸಿದರು. ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಬಸವಲಿಂಗಪ್ಪ, ಜಯಣ್ಣ,  ಗಂಗಾಧರ, ಪಾರ್ವತಮ್ಮ, ಚಲುವಯ್ಯ, ಸಣ್ಣೇಗೌಡ, ಸುಶೀಲಮ್ಮ, ಮಾದಪ್ಪ ಭಾಗವಹಿಸಿದ್ದರು.
ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯ ನಂತರ ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಹಾಡ್ಯ ಕೃಷಿ ಪತ್ತಿನ ಸಂಘದ ನಿರ್ದೇಶಕರಾದ ಎಚ್.ಎಸ್. ರಘು, ಚನ್ನಬಸಸಪ್ಪ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ, ಮುಖಂಡ ಕುಮಾರಪ್ಪ ಚುನಾಯಿತರನ್ನು ಅಭಿನಂದಿಸಿದರು.

ಬತ್ತದ ಬೆಂಕಿ ರೋಗ ಹತೋಟಿಗೆ ಸೂಚನೆ
ಕ.ಪ್ರ.ವಾರ್ತೆ ಸುತ್ತೂರು ಸೆ. 20
ತಾಲೂಕಿನಾದ್ಯಂತ ಬತ್ತದ ಬೆಳೆ ಬೆಳೆಯುತ್ತಿದ್ದು, ನಗರ್ಲೆ, ಹೊಸಕೋಟೆ, ಸುತ್ತೂರು, ಕಲ್ಮಳ್ಳಿ, ಕುಪ್ಪರವಳ್ಳಿ ಗ್ರಾಮಗಳಲ್ಲಿ ಬತ್ತದಲ್ಲಿ ಬೆಂಕಿ ರೋಗದ ಬಾಧೆ ಕಾಣಿಸಿಕೊಂಡಿದೆ. ರೋಗದ ಹತೋಟಿಗೆ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಿರ್ವಹಣಾ ಕ್ರಮಗಳನ್ನು ನೀಡಿದ್ದಾರೆ. ಬೆಂಕಿ ರೋಗ- ಎಲೆಗಳ ಮೇಲೆ ವಜ್ರಾಕಾರದ ಕಂದು ಚುಕ್ಕೆಗಳಿದ್ದು, ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣ ಹೊಂದಿರುತ್ತದೆ. ಈ ರೋಗದ ನಿರ್ವಹಣೆಗೆ ಪ್ರತಿ ಲೀಟರ್ ನೀರಿಗೆ 0.6 ಗ್ರಾಂ ಟ್ರೈಸೈಕ್ಲೋಜಾಲ್ ಅಥವಾ ಕಾರ್ಬೆನಡೈಜಿಂ ಒಂದು ಗ್ರಾಮ್ ಅನ್ನು ಸೇರಿಸಿ ಸಿಂಪಡಿಸುವುದರಿಂದ ರೋಗ ತಡೆಗಟ್ಟಬಹುದು. ರೋಗ ಪೀಡಿತ ಸಸ್ಯಗಳಿಂದ ಹೆಚ್ಚು ಹಾನಿಯಾಗದಂತೆ ಕ್ರಮವಹಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆಯ ವಿಷಯ ತಜ್ಞ ಸತೀಶ್ ಅವರನ್ನು ಸಂಪರ್ಕಿಸಬಹುದು. ಮೊ.98864 93153.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.