ಮೈಸೂರು

ಎಸ್ಪಿ ನೇತೃತ್ವದಲ್ಲಿ ಶಾಂತಿ ಸಭೆ

Published On :

ಕ.ಪ್ರ.ವಾರ್ತೆ ನಂಜನಗೂಡು ಸೆ. 23
ಪಟ್ಟಣದ ನೀಲಕಂಠನಗರ ಗಣಪತಿ ವಿಸರ್ಜನೆ ಕುರಿತು ಎರಡು ಕೋಮಿನ ನಡುವೆ ಉಂಟಾಗಿರುವ ವಿವಾದವನ್ನು ಬಗೆಹರಿಸುವ ಪ್ರಯತ್ನವಾಗಿ ಎಎಸ್ಪಿ ಡಾ.ರಾಜು ಅಧ್ಯಕ್ಷತೆಯಲ್ಲಿ ಸೋಮವಾರ ಉಭಯ ಕೋಮಿನ ಪ್ರಮುಖರ ಶಾಂತಿ ಸಭೆ ನಡೆಯಿತು. ಪುರಸಭಾ ಸದಸ್ಯ ರಾಜೇಶ್ ಮಾತನಾಡಿ, ತಲತಲಾಂತರದಿಂದ ನಾವೆಲ್ಲರೂ ಸೋದರತ್ವದಿಂದ ಜೀವನ ನಡೆಸುತ್ತಿದ್ದೇವೆ. ಕೆಲವು ಕಿಡಿಗೇಡಿಗಳಿಂದ ಈ ಘಟನೆ ಸಂಭವಿಸಿದೆ. ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಪೊಲೀಸರನ್ನು ಒತ್ತಾಯಿಸಿದರು. ಅಬ್ದುಲ್‌ಖಾದರ್ ಮಾತನಾಡಿ, ಘಟನೆಯಲ್ಲಿ ನಮ್ಮಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ. ಮುಂದಿನ ದಿನಗಳಲ್ಲಿ ಶಾಂತಿ, ನೆಮ್ಮದಿಯಿಂದ ಬದುಕೋಣ ಎಂದು ಹೇಳಿದರು. ಎಎಸ್ಪಿ ಡಾ. ರಾಜು ಮಾತನಾಡಿ, ದಕ್ಷಿಣಕಾಶಿ ಶ್ರೀಕಂಠೇಶ್ವರನ ಸನ್ನಿಧಿ ಶಾಂತಿಗೆ ಹೆಸರಾದ ಕ್ಷೇತ್ರ. ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡದೆ, ಎಲ್ಲ ಕೋಮಿನವರೂ ಒಂದಾಗಿ ಶಾಂತಿ, ನೆಮ್ಮದಿ ಬಾಳ್ವೆಗೆ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಪೊಲೀಸ್ ಬೆಂಗಾವಲಿಲ್ಲದೇ ಗಣಪತಿ ವಿಸರ್ಜನೆ ಮಾಡುವಂತಹ ವಾತಾವರಣ ಸೃಷ್ಟಿಸಬೇಕೆಂದು ಮನವಿ ಮಾಡಿದರು.
ಡಿವೈಎಸ್ಪಿ ಆನಂದ್ ಕುಮಾರ್, ಪ್ರೊಬೆಷನರಿ ಡಿವೈಎಸ್ಪಿ ಸಿದ್ದೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಎಸ್. ರಘು, ಎಸ್‌ಐಗಳಾದ ರವಿಶಂಕರ್, ನಟರಾಜು, ಪುರಸಭಾ ಸದಸ್ಯರಾದ ಆನಂದ್, ಮಹದೇವು, ವಕೀಲ ಮುರುಳಿ, ಮಹೇಶ್‌ಕುಮಾರ್, ವಸಂತ, ರವಿ, ಸುಬ್ಬಣ್ಣ, ಸಿದ್ದಕಿ, ನಾಸೀರ್, ನಾಜೀರ್‌ಖಾನ್ ಇದ್ದರು.

ಪ್ರಾಥಮಿಕ ಶಾಲೆ ಸ್ಥಳಾಂತರಿಸದಂತೆ ಮನವಿ
ನಂಜನಗೂಡು: ಪಟ್ಟಣದ ಸರಸ್ವತಿ ಕಾಲೋನಿಯಲ್ಲಿರುವ ಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಳಾಂತರ ಮಾಡಬಾರದೆಂದು ಕಾಲೋನಿಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮುಖಂಡರಾದ ಫರೀದ್ ಅಹಮದ್, ನಿಸಾರ್ ಅಹಮದ್, ಆಟೋ ಮಾಲೀಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ರಾಚನಾಯ್ಕ, ಅಣ್ಣಾದೊರೆ, ಜಾವಿದ್, ಷೇಕ್ ನಬಿ, ಶ್ರೀಕಂಠ, ಇಫಿನ್ ಜುಲ್ಲಾ ಸೇರಿದಂತೆ ಹಲವಾರು ಪ್ರಮುಖರು ಮಾತನಾಡಿ, ಸಂಸದ ಆರ್. ಧ್ರುವನಾರಾಯಣ್ ಮತ್ತು ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರ ಅನುದಾನದ ಅಡಿಯಲ್ಲಿ ಈ ಶಾಲೆಯು ನಿರ್ಮಾಣವಾಗಿದ್ದು, ಅತ್ಯುತ್ತಮವಾಗಿ ನಡೆಯುತ್ತಿದೆ. ಅತಿ ಹೆಚ್ಚು ಹಿಂದುಳಿದಿರುವ ಮತ್ತು ಅತಿ ಬಡತನದಲ್ಲಿರುವ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆಡಳಿತ ಮಂಡಳಿ ಶಾಲೆ ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.