ಮೈಸೂರು

'ಮಧ್ಯವರ್ತಿಗಳನ್ನು ಅವಲಂಬಿಸಬೇಡಿ'

Published On :

ಕ.ಪ್ರ.ವಾರ್ತೆ ಹುಣಸೂರು ಸೆ. 23
ರೈತರು ಬೆಳೆದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ನಿಖರ ಬೆಲೆ ಮತ್ತು ತೂಕ ಪಡೆಯುವ ಮೂಲಕ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಕೃಷಿ ಉತ್ಪನ್ನ ಮಾರಾಟಕ್ಕೆ ಖಾಸಗಿ ಮಧ್ಯವರ್ತಿಗಳನ್ನು ಅವಲಂಬಿಸಬಾರದು ಎಂದು ಕೃಷಿ ವಿಜ್ಞಾನಿ ಡಾ. ಅರಸು ಮಲ್ಲಯ್ಯ ಎಚ್ಚರಿಕೆ ನೀಡಿದರು.
ತಾಲೂಕಿನ ಹನಗೋಡು ಹೋಬಳಿಯ ಕರ್ಣಕುಪ್ಪೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ, ಎಪಿಎಂಸಿ ಮತ್ತು ತಾಲೂಕು ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮುಸುಕಿನ ಜೋಳದ ಬೆಳೆ ಬೇಸಾಯ ಹಾಗೂ ಮಾರುಕಟ್ಟೆಯಲ್ಲಿ ಮಾರಾಟದ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡದೆ ಸರ್ಕಾರವೆ ತಾಲೂಕು ಮಟ್ಟದಲ್ಲಿ ಎಪಿಎಂಸಿ ಜಿಲ್ಲಾ ಮಟ್ಟದಲ್ಲಿ ಆರ್‌ಎಂಸಿ ತೆರೆದಿದ್ದು, ಇಲ್ಲಿ ಕೆಲ ಮಧ್ಯವರ್ತಿಗಳು ಬೆಳೆಗೆ ಅಧಿಕೃತ ರಸೀದಿ ನೀಡದೆ, ಬಿಳಿ ಚೀಟಿಯಲ್ಲಿ ವ್ಯವಹರಿಸುತ್ತಿದ್ದು ಉತ್ಪನ್ನಗಳನ್ನು ವಿದ್ಯುನ್ಮಾನ ಯಂತ್ರದ ಮೂಲಕ ಮಾರಾಟ ಮಾಡಿ ಯಾವುದೇ ರೀತಿಯಲ್ಲಿ ದಲ್ಲಾಳಿಗಳಿಗೆ ಕಮಿಷನ್ ನೀಡದೆ ಮಾರಾಟ ಮಾಡಿ ಎಂದರು.
ರೈತರು ತಮ್ಮ ಉತ್ಪನ್ನಕ್ಕೆ ನಿಗದಿತ ಬೆಲೆ ದೊರೆಯದಿದ್ದರೆ ಮಾರುಕಟ್ಟೆಯೊಳಗೆ ತಮ್ಮ ಉತ್ಪನ್ನವನ್ನು ಶೇಖರಣೆ ಮಾಡಿಡಲು ಉಗ್ರಾಣ ವ್ಯವಸ್ಥೆ ಕಲ್ಪಿಸಿದೆ. ಉಗ್ರಾಣದಲ್ಲಿ ರೈತರು ತಮ್ಮ ಉತ್ಪನ್ನವನ್ನು ಅಡವಿಟ್ಟು ಆರು ತಿಂಗಳ ಕಾಲ ಅಡಮಾನ ಸಾಲ ಪಡೆಯುವುದರೊಂದಿಗೆ ಬಡ್ಡಿರಹಿತ ಸಾಲ ಪಡೆಯಬಹುದು ಎಂದು ಹೇಳಿದರು.
ಈರಣ್ಣ, ಡಾ.ಡಿ.ಆರ್. ಬೋಸಲೆ ಮಾತನಾಡಿದರು. ತಾಪಂ ಸದಸ್ಯ ಕೆ. ಗಣಪತಿ, ಕರ್ಣಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟರಾಜೇಗೌಡ, ಸದಸ್ಯ ರಾಜಪ್ಪ, ಮುಖಂಡರಾದ ಕೆ.ಎಂ ರಾಜು, ಹರೀಶ್, ಭೂಚೇತನ ಅನುವುಗಾರ, ರಾಘವೇಂದ್ರ ಇದ್ದರು.

ಬದುಕಿನ ಬದಲಾವಣೆಗೆ ಶಿಕ್ಷಣ ಉತ್ತಮ
ಎಚ್.ಡಿ. ಕೋಟೆ: ಶಿಕ್ಷಣ ಪಡೆಯುವುದು ಕೇವಲ ಉದ್ಯೋಗಕ್ಕೆ ಸೀಮಿತವಾಗದೆ, ನಮ್ಮ ಬದುಕಿನ ಬದಲಾವಣೆಗಾಗಿ ಕಲಿಯುವುದು ಉತ್ತಮ ಎಂದು ಶಾಸಕ ಚಿಕ್ಕಮಾದು ಅಭಿಪ್ರಾಯಪಟ್ಟರು. ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗೂ ತಾಲೂಕು ಲೋಕ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಅಂತಾರಾಷ್ಟ್ರೀಯ 49ನೇ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶೇ.70ರಷ್ಟು ಅಕ್ಷರಸ್ಥರಿದ್ದು, ಉಳಿದ 30ರಲ್ಲಿ ಗಿರಿಜನರೆ ಹೆಚ್ಚು ಅನಕ್ಷರಸ್ಥರಿದ್ದು, ಇವರನ್ನು ಶಿಕ್ಷಿತರನ್ನಾಗಿ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಗ್ರಾಪಂ ಸೇರಿದಂತೆ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದ್ದು, ಗ್ರಾಪಂ ಅಧ್ಯಕ್ಷರಾದವರು ಆಡಳಿತ ನಡೆಸಲು ಶಿಕ್ಷಣ ತುಂಬ ಅವಶ್ಯಕ. ಇಲ್ಲದಿದ್ದರೆ ಅಧಿಕಾರಿಗಳು ಹೇಳಿದಂತೆ ಕೇಳ ಬೇಕಾಗುತ್ತದೆ. ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸುವಾಗ ಅನಕ್ಷರಸ್ಥರನ್ನು ಒಳಗೊಂಡಾಗ ಮಾತ್ರ ಕಾರ್ಯಕ್ರಮ ಯಶಸ್ವಿ ಸಾಧ್ಯ ಎಂದು ಹೇಳಿದರು. ತಾಪಂ ಅಧ್ಯಕ್ಷೆ ಲಕ್ಷ್ಮಿ ರಮೇಶ್ ಸಾಕ್ಷರತಾ ಜಾಥಾಗೆ ಚಾಲನೆ ನೀಡಿದರು. ಕಾರ್ಯನಿರ್ವಾಹಣಾಧಿಕಾರಿ ನಿಂಗರಾಜು ಪ್ರಮಾಣ ವಚನ ಬೋಧಿಸಿದರು. ತಾಪಂ ಉಪಾಧ್ಯಕ್ಷ ಬಿ.ಜಿ. ಮಹೇಂದ್ರ, ಸದಸ್ಯರಾದ ರವಿಕುಮಾರ್, ಹನು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.