ಮೈಸೂರು

ನಷ್ಟದತ್ತ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು: ಎಸ್.ಎನ್. ಸಿದ್ದಾರ್ಥ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 24
ಗ್ರಾಮೀಣ ಪ್ರದೇಶದ ರೈತರಿಗೆ ಹಣಕಾಸಿನ ನೆರವು ನೀಡುವ ಪ್ರಾಥಮಿಕ ಕೃಷಿ ಪತ್ತಿನ ಸಂಘ ನಷ್ಟದ ಕತ್ತಲೆ ಕೂಪಕ್ಕೆ ಸಿಲುಕಬಾರದು ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ ಹೇಳಿದರು.
ತಾಲೂಕಿನ ಸೋಸಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2012-13ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದ ತಳಹದಿಯಂತಿರುವ ಪ್ರಾಥಮಿಕ ಕೃಷಿಪತ್ತಿನ ಸಂಘಗಳ ಹಣಕಾಸಿನ ಪರಿಸ್ಥಿತಿ ಸುಧಾರಿಸಿಕೊಂಡು ಬೆಳಕಿನತ್ತ ಹೆಜ್ಜೆಯನ್ನಿಡಬೇಕು. ಈ ಭಾಗದ ರೈತರೆಲ್ಲರನ್ನೂ ತಮ್ಮ ಕುಟುಂಬದ ಸದಸ್ಯರೆಂಬಂತೆ ಕಾಣುವ ಮನೋಭಾವನೆ ಇರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಿಯೋಜಿಸಬೇಕೆಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 2011-12ನೇ ಸಾಲಿನಲ್ಲಿ 214 ಸಂಘದ ರೈತರಿಗೆ ಒಟ್ಟು 72.41 ಲಕ್ಷ ಸಾಲ ನೀಡಲಾಗಿತ್ತು. ಅದರಲ್ಲಿ ಸರ್ಕಾರದ ಸಾಲ ಮನ್ನಾ ಯೋಜನೆ ಪ್ರಕಟಿಸಿದ್ದರಿಂದ, 212 ಮಂದಿ ಸದಸ್ಯರ 48.22 ಲಕ್ಷ ಸಾಲ ಮನ್ನಾ ಮಾಡಿದೆ. ಮನ್ನಾ ಮಾಡಿದ ಹಣಕ್ಕೆ ಸರ್ಕಾರ 22.09 ಲಕ್ಷ ಮಾತ್ರ ನೀಡಿದ್ದು, ಉಳಿದ 26.13 ಲಕ್ಷ ಬಾಕಿ ಬರಬೇಕಿದೆ ಎಂದು ತಿಳಿಸಿದರು.
ಹೆಚ್ಚುವರಿ ಸಾಲ ಮರುಪಾವತಿ ಮಾಡಿರುವ 63 ರೈತರಿಗೆ ದಾಖಲೆಗಳನ್ನು ಸಲ್ಲಿಸಿದ್ದು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 36.20 ಲಕ್ಷ ಸಾಲ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಹಣಕಾಸಿನ ಮುಗ್ಗಟ್ಟು ಎದುರಾಗಿರುವುದರಿಂದ ಬಿಡುಗಡೆ ವಿಳಂಬವಾಗಿದೆ ಎಂದು ಹೇಳಿದರು.
ಪ್ರಭಾರ ಸಿಇಒ ಹಾಗೂ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿ.ಸೋಮಶೇಖರ್ ಮಾತನಾಡಿದರು. ಆಡಳಿತ ಮಂಡಳಿ ನಿರ್ದೇಶಕ ವೆಂಕಟರಮಣಸ್ವಾಮಿ, ಎಸ್.ಪಿ. ಸುಂದರ್, ಎಂ.ಮಹದೇವಪ್ಪ, ಸುಂದ್ರಮ್ಮ, ಬೆ.ಗು. ಶಿವಸ್ವಾಮಿ, ಬಿ.ಎಂ. ಶಿವಮಲ್ಲಪ್ಪ, ಬಿ.ಎಸ್. ನಾಗರಾಜು, ಸದಸ್ಯರಾದ ಬಿ.ಪಿ. ಪರಶಿವಮೂರ್ತಿ, ಬೆನಕನಹಳ್ಳಿ ಸೋಮಶಂಕರಪ್ಪ, ಬೇಕರಿ ಸೋಮಣ್ಣ, ಸಿಬ್ಬಂದಿ ಕೆ.ಎಂ. ಜವರಯ್ಯ, ಸಿದ್ದು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.