ಇಬ್ಬರಿಗೆ ಪಿಎಚ್ಡಿ
ಮೈಸೂರು: ಡಾ.ಟಿ. ದಿಮಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಲಿಗರ್ ಸುಧೀರ್ ರಾಮಸ್ವಾಮಿ ಅವರು ಸಾದರಪಡಿಸಿದ ಮಹಾಪ್ರಬಂಧ ಮೈಸೂರು ವಿವಿ ಅಂಗೀಕರಿಸಿ, ಪಾಲಿಮರ್ ಸೈನ್ಸ್ ವಿಷಯದಲ್ಲಿ ಪಿಎಚ್ಡಿ ಪದವಿ ನೀಡಿದೆ.
ಪ್ರೊ. ಕೆ. ಬೈರಪ್ಪ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಕೆ. ನಮ್ರತಾ ಅವರು ಸಾದರಪಡಿಸಿದ ಮಹಾ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.
ನಾಳೆ ಪಾಲಿಕೆ ಸಭೆ
ಮೈಸೂರು: ನಗರಪಾಲಿಕೆಯನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೆ. 27ರ ಮಧ್ಯಾಹ್ನ 3ಕ್ಕೆ ನಗರಪಾಲಿಕೆಯ ಸಾಮಾನ್ಯ ಸಭೆಯು ಮೇಯರ್ ಎನ್.ಎಂ. ರಾಜೇಶ್ವರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ನಾಳೆ ಕಣ್ಣಿನ ತಪಾಸಣೆ
ಮೈಸೂರು: ಐಎನ್ಜಿ ವೈಶ್ಯ ಬ್ಯಾಂಕ್ ಹಾಗೂ ಇಸ್ಮಾಯಿಲ್ ಐಡೆಂಟಿಟಿ ಸಂಯುಕ್ತವಾಗಿ ಸೆ.27 ರಂದು ಸಾರ್ವಜನಿಕರು ಮತ್ತು ಗ್ರಾಹಕರಿಗಾಗಿ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಜೆಎಸ್ಎಸ್ ಕಾನೂನು ಕಾಲೇಜು ಬಳಿಯ ಐಎನ್ಜಿ ವೈಶ್ಯ ಬ್ಯಾಂಕ್ ಕುವೆಂಪುನಗರ ಶಾಖೆಯಲ್ಲಿ ಈ ಶಿಬಿರವು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಗ್ರಾಹಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರ ಸದುಪಯೋಗ ಪಡೆದುಕೊಳ್ಳುವಂತೆ ಬ್ಯಾಂಕ್ನ ಮುಖ್ಯಸ್ಥ ಕೆ.ಎಂ. ಶ್ರೀನಿವಾಸ ಬುಧವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಸುಮಿತ್ ಮಹಾಜನ್, ಇಸ್ಮಾಯಿಲ್ ಐಡೆಂಟಿಟಿ ಸುಲೈಮಾನ್ ಇದ್ದರು.
ಪದಾಧಿಕಾರಿಗಳ ಆಯ್ಕೆ
ಮೈಸೂರು: ಜಮಿಯಾತ್- ಉಲಾಮ-ಐ- ಹಿಂದ್ ಸಂಘಟನೆಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಉಲ್ಲಾ, ಉಪಾಧ್ಯಕ್ಷರಾಗಿ ಷರೀಫ್, ಅಯೂಬ್ ಅನ್ಸಾರಿ, ಅಯೂಬ್ ಖಾನ್, ನಾಸಿರ್, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಷರೀಫ್, ಕಾರ್ಯದರ್ಶಿಗಳಾಗಿ ಜುಚೀರ್, ಇಲ್ಯಾಜ್ ಬ್ಯಾಖಮಿ, ಕಲೀಂ ಸಾಬ್, ಶೌಕತ್ ಪಾಷಾ, ಖಜಾಂಚಿಯಾಗಿ ಮತೀನ್ ಬೇಗ್ ಆಯ್ಕೆಯಾಗಿದ್ದಾರೆ.
ಟಿ.ನರಸೀಪುರ ತಾಪಂ ಅಧ್ಯಕ್ಷರ ರಾಜಿನಾಮೆ
ಟಿ. ನರಸೀಪುರ: ತಾಪಂ ಅಧ್ಯಕ್ಷ ತುಂಬಲ ಅಂದಾನಿ ಹಾಗೂ ಉಪಾಧ್ಯಕ್ಷೆ ಸುಜಾತ ವೆಂಕಟೇಶ್ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ. ತಾಪಂ ಸದಸ್ಯರ ನಡುವೆ ಮಾಡಿಕೊಂಡಿದ್ದ ಆಂತರಿಕ ಒಪ್ಪಂದಂತೆ ಹತ್ತು ತಿಂಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ತುಂಬಲ ಅಂದಾನಿ ಮತ್ತು ಸುಜಾತ ವೆಂಕಟೇಶ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜಿನಾಮೆ ನೀಡುವ ಮೂಲಕ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.
ರಾಮಮೂರ್ತಿ ಅಧ್ಯಕ್ಷಆಯ್ಕೆ
ಟಿ. ನರಸೀಪುರ: ರೋಟರಿ ಸಂಸ್ಥೆಯ 2013-14ನೇ ಸಾಲಿನ ನೂತನ ಅಧ್ಯಕ್ಷರ ತಂಡದ ಪದವಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷರಾಗಿ ರಾಮಮೂರ್ತಿ, ಕಾರ್ಯದರ್ಶಿಯಾಗಿ ಎನ್.ಎಸ್. ಜ್ಞಾನೇಂದ್ರಮೂರ್ತಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ರೋಟರಿಯ ವಿವಿಧ ಸೇವಾ ಕ್ಷೇತ್ರಗಳಿಗೂ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ವಲಯ ಸಮನ್ವಯಾಧಿಕಾರಿ ಕೆ. ಪುಟ್ಟರಸಶೆಟ್ಟಿ ರೋಟರಿ ನೂತನ ಅಧ್ಯಕ್ಷ, ಕಾರ್ಯದರ್ಶಿಗೆ ಪದವಿ ಪ್ರದಾನ ಮಾಡಿದರು. ರೋಟರಿ ಸಹಾಯಕ ಗೌರ್ನರ್ ಕೆ.ಎಸ್. ಜಗದೀಶ, ವಲಯ ಪ್ರತಿನಿಧಿ ಸುರೇಶ, ಪಪಂ ಸದಸ್ಯ ಟಿ.ಜಿ. ಪುಟ್ಟಸ್ವಾಮಿ, ಪಿಎಲ್ಡಿ ಬ್ಯಾಂಕ್ ವ್ಯವಸ್ಥಾಪಕ ಎನ್.ಎಸ್. ದೇವರಾಜ ಅರಸು, ವಕೀಲ ಎಂ. ನಂಜುಂಡೇಗೌಡ, ವೈದ್ಯ ಡಾ.ಬಿ. ರವಿಶಂಕರ್, ಪ್ರಾಂಶುಪಾಲ ಕುಮಾರಸ್ವಾಮಿ, ಬನ್ನೂರು ರೋಟರಿ ಅಧ್ಯಕ್ಷ ಹನುಮಂತೇಗೌಡ, ಕಾರ್ಯದರ್ಶಿ ಬಿ.ಎಸ್. ಯೋಗೇಂದ್ರ, ಜಂಟಿ ಕಾರ್ಯದರ್ಶಿ ಎನ್.ಎಂ. ರಾಮಚಂದ್ರ, ರೋಟರಿ ಮಾಜಿ ಅಧ್ಯಕ್ಷರಾದ ಜಯಶೀಲ, ರಾಜಶೇಖರ, ಸದಸ್ಯರಾದ ಪ್ರಕಾಶ್, ಎಸ್. ನಾಗರಾಜು, ಹೇಮಂತ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

