ಎಚ್.ಡಿ. ಕೋಟೆಯಲ್ಲಿ ಗ್ರಾಮೀಣ ದಸರಾ
ಎಚ್.ಡಿ. ಕೋಟೆ: ತಾಲೂಕಿನಲ್ಲಿ ಅ. 1 ರಂದು ಗ್ರಾಮೀಣ ದಸರಾ ಆಚರಿಸಲು ತಾಲೂಕು ಶಾಸಕ ಎಸ್. ಚಿಕ್ಕಮಾದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸೆ.26 ರಿಂದ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಕೃಷ್ಣ ಹೇಳಿದರು.
ಪುರುಷರಿಗಾಗಿ ಗೊಬ್ಬರ ಮೂಟೆ ಎತ್ತಿಕೊಂಡು ಓಡುವ ಸ್ಪರ್ಧೆ, ಕಲ್ಲುಗುಂಡು ಎತ್ತುವ ಸ್ಪರ್ಧೆ, ಕೆಸರಿನಗದ್ದೆ ಓಟ, ಹಗ್ಗ ಜಗ್ಗಾಟ, ಗೋಣಿ ಚೀಲದ ಓಟದ ಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ಎರಡು ವಿಭಾಗಗಳನ್ನು ಮಾಡಲಾಗಿದೆ.
18 ರಿಂದ 30 ವರ್ಷದವರಿಗೆ ಹಾಗೂ 31 ರಿಂದ 50 ವರ್ಷದವರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ರಂಗೋಲಿ ಸ್ಪರ್ಧೆ, ನೀರು ತುಂಬಿರುವ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, ಬುಟ್ಟಿಯಲ್ಲಿ ರಾಗಿ ಹೊತ್ತು ಓಡುವ ಸ್ಪರ್ಧೆ, ನಿಂಬೆಹಣ್ಣು ಚಮಚದ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈಗಾಗಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವವರು ಸಕಾಲದಲ್ಲಿ ಭಾಗವಹಿಸಬೇಕೆಂದು ತಹಸೀಲ್ದಾರ್ ಕೃಷ್ಣ ತಿಳಿಸಿದ್ದಾರೆ.
ಸಾಂಸ್ಕೃತಿಕ ಸ್ಪರ್ಧೆ: ಸೆ. 27 ರಂದು ಗ್ರಾಮೀಣ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕಂಸಾಳೆ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ನಂದಿ ಕೋಲು, ತಮಟೆ, ನಗಾರಿ, ನೃತ್ಯ, ಲಾವಣಿ ಪದಗಳು, ಗೀಗೀ ಪದ, ಜಾನಪದ ಗೀತೆ, ಸೋಬಾನೆ ಪದ, ತತ್ವ ಪದಗಳ ಸ್ಪರ್ಧೆ ನಡೆಯಲಿದೆ.
ಆಸಕ್ತರು ಹೆಸರನ್ನ ನೋಂದಾಯಿಸಿಕೊಳ್ಳಬಹುದು. ಈ ಎಲ್ಲ ಸ್ಪರ್ರ್ಧೆಗಳನ್ನು ಅಂಬೇಡ್ಕರ್ ಭವನ ಹಾಗೂ ಗುರುಭವನದಲ್ಲಿ ಏರ್ಪಡಿಸಿದೆ ಎಂದು ತಿಳಿಸಿದ್ದಾರೆ.
ತಳ ಮಟ್ಟದಿಂದ ಬಿಜೆಪಿ ಸಂಘಟಿಸಿ: ಯೋಗೀಶ್
ಎಚ್.ಡಿ. ಕೋಟೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೂತ್ ಮಟ್ಟದಿಂದ ಸಂಘಟಿಸುವಂತೆ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಸಿ. ಯೋಗೀಶ್ಕುಮಾರ್ ಕರೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಪ್ರಥಮ ವಿವಿಧ ಮೋರ್ಚಾಗಳ ತಾಲೂಕು ಕಾರ್ಯಕಾರಿಣಿಗಳ ಸಭೆಯಲ್ಲಿ ಮಂಗಳವಾರ ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಮುಂಬರುವ ಲೋಕಸಬಾ ಚುನಾವಣೆಯಲ್ಲಿ ಹಿಂದುಳಿದ ವರ್ಗದ ನಾಯಕ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಎಲ್ಲರೂ ಶ್ರಮವಹಿಸುವಂತೆ ಸಲಹೆ ಮಾಡಿದರು.
ಮಂಜುನಾಥ್, ಅಂಕನಾಯಕ, ಶಿವರಾಜಪ್ಪ, ಮಹದೇವಯ್ಯ, ಟಿ.ಎಲ್. ಸ್ವಾಮಿ, ಪುಟ್ಟರಾಜು, ಸ್ವಾಮಿ, ರೂಪೇಶ್, ಗುರುಸ್ವಾಮಿ, ಸಿಂಗಯ್ಯ, ಸಿದ್ದರಾಜು, ಜ್ಯೋತಿ, ಗೋವಿಂದನಾಯಕ, ಚಿಕ್ಕನಾಯಕ, ನಾಗನಾಯಕ, ನವೀನ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

