ಮೈಸೂರು

ಜಾನಪದ ತಾತ್ಸಾರ ಸಲ್ಲದು: ಜನಾರ್ಧನ್

Published On :

ಕ.ಪ್ರ.ವಾರ್ತೆ ಮೈಸೂರು ಸೆ. 26
ಜಾನಪದ ತಾತ್ಸಾರ ಸರಿಯಲ್ಲ ಎಂದು ರಂಗಾಯಣ ನಿರ್ದೇಶಕರಾಗಿ ನೇಮಕವಾಗಿರುವ ಎಚ್. ಜನಾರ್ಧನ್ ಹೇಳಿದರು.
ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಗುರುವಾರ ಸಮರ್ಪಣ ಸಂಸ್ಥೆ ಏರ್ಪಡಿಸಿದ್ದ ಜಾನಪದ ನೃತ್ಯಗಳ ಪ್ರದರ್ಶನ ಮತ್ತು ಜಾನಪದ ಝೇಂಕಾರ ಸಮಾರಂಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದವನ್ನು ತಾತ್ಸಾರದಿಂದ ನೋಡುತ್ತಿರುವುದು ಬೇಸರದ ಸಂಗತಿ. ಜಾನಪದ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ ಎಂದರು. ಸಂಸ್ಕೃತಿಯ ಮೂಲವೆ ಜಾನಪದ. ಜಾನಪದ ಬಿಟ್ಟರೆ ಜ್ಞಾನ ಮತ್ತು ಮನುಷ್ಯತ್ವ ಕಳೆದುಕೊಂಡಂತೆ. ಪ್ರತಿ ಕಲೆಯ ಮೂಲವೂ ಜಾನಪದವೆ. ಅಕ್ಷರಸ್ಥರು ರಾಕ್ಷಸರಂತೆ ವರ್ತಿಸುತ್ತಾರೆ. ಅವರಿಗೆ ಜಾನಪದ ಸ್ಪರ್ಶ ದೊರೆತರೆ ಮನುಷ್ಯತ್ವ ಬೆಳೆಯುತ್ತದೆ ಎಂದು ಹೇಳಿದರು. ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಪುರುಷೋತ್ತಮ್ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸ.ನ. ಗಾಯತ್ರಿ, ಸಂಸ್ಥೆಯ ಲಕ್ಷ್ಮಿರಾಮ್, ಶಿಬಿರ ನಿರ್ದೇಶಕ ಕೃಷ್ಣಮೂರ್ತಿ ತಲಕಾಡು ಇದ್ದರು.

357 ಮಂದಿ ವಿರುದ್ಧ ಕ್ರಮ
ಕ.ಪ್ರ.ವಾರ್ತೆ ಮೈಸೂರು ಸೆ. 26

ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 357 ಮಂದಿಯ ವಿರುದ್ಧ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿ, 64,200 ದಂಡವನ್ನು ಸ್ಥಳದಲ್ಲಿಯೇ ವಸೂಲಿ ಮಾಡಿದ್ದಾರೆ. ಇಬ್ಬರಿಗೆ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ನೋಟಿಸ್ ಪಡೆದಿದ್ದಾರೆ.

ಬಲ್ಲಹಳ್ಳಿ ಯುವತಿ ನಾಪತ್ತೆ
ಮೈಸೂರು:
ಮೈಸೂರು ತಾಲೂಕು ಬಲ್ಲಹಳ್ಳಿ ನಿವಾಸಿ ವೆಂಕಟೇಗೌಡ ಎಂಬವರ ಪುತ್ರಿ ದೇವಿ (20) ನಾಪತ್ತೆಯಾಗಿದ್ದಾರೆ. ದೇವಿ ಸೆ.22 ರಂದು ಬಟ್ಟೆ ಹೊಲಿಸುವ ಸಲುವಾಗಿ ಬಲ್ಲಹಳ್ಳಿಯಿಂದ ಮೈಸೂರಿನ ಶಾರದಾದೇವಿನಗರಕ್ಕೆ ಹೋದವರು ಕಾಣೆಯಾಗಿದ್ದಾರೆ. ಕಾಣೆಯಾಗಿರುವ ತನ್ನ ಅಕ್ಕನನ್ನು ಪತ್ತೆ ಮಾಡಿಕೊಡುವಂತೆ ವೆಂಕಟೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 4.5 ಅಡಿ ಎತ್ತರ, ತೆಳ್ಳನೆಯ ಶರೀರ, ಎಣ್ಣೆಗೆಂಪು ಮೈಬಣ್ಣ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2595781 ಸಂಪರ್ಕಿಸಲು ಜಯಪುರ ಠಾಣೆ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.