ಮೈಸೂರು

ರತ್ನಪುರಿ ಪುಟ್ಟಸ್ವಾಮಿ ವಿರುದ್ಧ ತನಿಖೆ ನಡೆಸಿ: ಪಾಪಣ್ಣ

Published On :

ಹುಣಸೂರು: ತಾಲೂಕಿನ ದಲಿತ ಸಂಘರ್ಷ ಸಮಿತಿ ಮುಖಂಡರೆಂದು ಹೇಳಿಕೊಂಡು ತಾಲೂಕಿನಾದ್ಯಂತ ಸುಳ್ಳು ಆಪಾದನೆಗಳನ್ನು ಮಾಡಿ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿರುವ ರತ್ನಪುರಿ ಪುಟ್ಟಸ್ವಾಮಿ ವಿರುದ್ಧ ತನಿಖೆ ನಡೆಸುವಂತೆ ಮಾಜಿ ಶಾಸಕ ವಿ. ಪಾಪಣ್ಣ ಒತ್ತಾಯಿಸಿದ್ದಾರೆ.
ತಾಲೂಕಿನ ಬಿಳಿಕೆರೆ ಹೋಬಳಿಯ ತರಿಕಲ್ ಗ್ರಾಮದ ಸರ್ವೇ ನಂ.9, 4/1, 4/2, 5 ಮತ್ತು ಗ್ರಾಮ ತರಿಕಲ್ ನಾಲಾ 159ರ ಜಮೀನಿದ್ದು, ಇದು ಭಾಗಾಯ್ತು ಹಿಡುವಳಿ ಭೂಮಿಯಾಗಿದೆ. ಸುಮಾರು 40 ವರ್ಷಗಳಿಂದ ಸದರಿ ಜಮೀನಿನಲ್ಲಿ ಅನುಭವದಲ್ಲಿದೆ. ಪ್ರಸ್ತುತ ಪುಟ್ಟಸ್ವಾಮಿಯು ಸದರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಗಿರಿಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅಲ್ಲದೇ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ತಾವು ಯಾವುದೇ ತನಿಖೆಗೆ ಸಿದ್ಧವಿರುವುದಾಗಿ ಅವರು ಸವಾಲು ಹಾಕಿದ್ದಾರೆ.
ಗಿರಿಜನರ ನಿವೇಶನಗಳನ್ನು ಇತರರಿಗೆ ತರಿಕಲ್ ರಂಗಯ್ಯನ ಕೊಪ್ಪಲು ಪಂಚಾಯಿತಿ ಸದಸ್ಯ ಕಾಳಯ್ಯ ರತ್ನಪುರಿ ಪುಟ್ಟಸ್ವಾಮಿ ಇವರ ಕುಮ್ಮಕ್ಕಿನಿಂದ ಗಿರಿಜನ ವಾಟರ್‌ಮನ್ ಶಿವಣ್ಣ ಜಮೀನಿನನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಬೇರೆ ಸಮಾಜದವರಿಗೆ ಮಾರಾಟ ಮಾಡಿ ಅಲ್ಲಿ ಅಂಗಡಿ, ಮಳಿಗೆಗಳನ್ನು ನಿರ್ಮಿಸಿದ್ದಾರೆ. ಪ್ರತಿದಿನ ಅಂಗಡಿಗಳಿಂದ 2ರಿಂದ 3 ಸಾವಿರದವರೆಗೆ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

'ಆರೋಗ್ಯಕ್ಕಾಗಿ ಯೋಗ ಅಗತ್ಯ'
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಸೆ. 28

ಆಧುನಿಕ ಸಮಾಜದ ಬದುಕಿನಲ್ಲಿ ಆರೋಗ್ಯವಂತರಾಗಿ ಬದುಕಲು ಯೋಗ ಅತ್ಯಗತ್ಯ ಎಂದು ಪಪಂ ಸದಸ್ಯ ಪಿ.ವಿ. ನಂಜುಂಡಸ್ವಾಮಿ ಹೇಳಿದರು.
ಬಿಸಿಎಂ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಆಯುಷ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಜೀವನದಲ್ಲಿ ಹಣಕ್ಕಿಂತ ಮುಖ್ಯವಾದುದ್ದು ಆರೋಗ್ಯ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ವ್ಯಾಸಂಗ ಮಾಡಲು ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಯೋಗ ಸಂಯೋಜಕ ನವೀನ್‌ಕುಮಾರ್ ಮಾತನಾಡಿ, ಆಯುಷ್ ಇಲಾಖೆ ವತಿಯಿಂದ ಬಿಸಿಎಂ ವಸತಿ ನಿಲಯದಲ್ಲಿ ಯೋಗ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪತ್ರಿದಿನ ಒಂದು ಗಂಟೆ ಯೋಗ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ ಮಾತನಾಡಿದರು.  
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.