ಅಂತರ ಕಾಲೇಜು ಹಾಕಿ ಪಂದ್ಯಾವಳಿಗೆ ಚಾಲನೆ
ಮೈಸೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಂತರ ಕಾಲೇಜು ಮೈಸೂರು ವಿಭಾಗೀಯ ಪುರುಷರ ಹಾಗೂ ಮಹಿಳೆಯರ ಹಾಕಿ ಪಂದ್ಯಾವಳಿಯು ಮಂಗಳವಾರ ನಡೆಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಪ್ರಾದೇಶಿಕ ಕಚೇರಿ ವತಿಯಿಂದ ಏರ್ಪಡಿಸಿದ್ದ ಈ ಪಂದ್ಯಾವಳಿಯನ್ನು ಭಾರತದ ಮಾಜಿ ಹಾಕಿ ಆಟಗಾರ್ತಿ ಬಿ.ಜಿ. ಹೇಮಲತಾ ಉದ್ಘಾಟಿಸಿದರು. ಕುಲಸಚಿವ ಡಾ.ಕೆ.ಇ. ಪ್ರಕಾಶ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎ.ಜಿ. ಬುಜುರ್ಕೆ ಇದ್ದರು. ನಂತರ ಮಂಗಳೂರಿನ ಎಸ್ಜೆಸಿಇ ಮತ್ತು ಶಿವಮೊಗ್ಗದ ಜೆಎನ್ಎನ್ಸಿಇ ಕಾಲೇಜಿಗೂ ಹಾಗೂ ಮೈಸೂರು ಎನ್ಐಇ ಮತ್ತು ಮಂಡ್ಯದ ಪಿಇಎಸ್ ಕಾಲೇಜು ತಂಡಗಳ ನಡುವೆ ಪಂದ್ಯ ನಡೆಯಿತು.
ಕಳವು: ಇಬ್ಬರು ಸಿಬ್ಬಂದಿ ಬಂಧನ
ಮೈಸೂರು: ಭದ್ರತಾ ಸಿಬ್ಬಂದಿ ಜೊತೆಗೂಡಿ ಸಿಬ್ಬಂದಿಯೇ ಕಳವು ಮಾಡಿ ಸಿಕ್ಕಿಬಿದ್ದಿರುವ ಘಟನೆ ಸರಸ್ವತಿಪುರಂನ ಸರ್ಕಾರಿ ಮುದ್ರಣಾಲಯದಲ್ಲಿ ನಡೆದಿದೆ. ಮುದ್ರಣಾಲಯದ ಬೈಂಡರ್ ಬಸವರಾಜು ಮತ್ತು ಭದ್ರತಾ ಸಿಬ್ಬಂದಿ ರಘುವೀರ್ ಬಂಧಿತ ಆರೋಪಿಗಳು. ಭಾನುವಾರ, ಸೋಮವಾರ ರಜಾ ದಿನವಾದ್ದರಿಂದ ಮುದ್ರಣಾಲಯಕ್ಕೆ ಬೀಗ ಹಾಕಲಾಗಿತ್ತು. ಜತೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಹೀಗಿದ್ದರೂ ಮುದ್ರಣಾಲಯದ ಶಟರ್ ಮುರಿದು ಒಳ ನುಗ್ಗಿ 4.50 ಲಕ್ಷ ಮೌಲ್ಯದ 102 ಪೇಪರ್ ಬಂಡಲ್ಗಳನ್ನು ಕಳವು ಮಾಡಿದ್ದರು. ಮಂಗಳವಾರ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದಾಗ ಕಳವು ನಡೆದಿರುವುದು ಗೊತ್ತಾಗಿದೆ. ಮುದ್ರಣಾಲಯದ ಉಪ ನಿರ್ದೇಶಕ ವಿಶ್ವನಾಥ್ ಅವರು ಸರಸ್ವತಿಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುದ್ರಣಾಲಯದ ಇಬ್ಬರು ಸಿಬ್ಬಂದಿಯನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

