ಅಪಘಾತ ತಡೆಗಟ್ಟುವಲ್ಲಿ ಎಚ್ಚರ ವಹಿಸಿ
ಮೈಸೂರು: ಇತ್ತೀಚೆಗೆ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ಯುವಜನರೆ ಸಾವಿಗೀಡಾಗುತ್ತಿದ್ದು, ಭವಿಷ್ಯತ್ತಿನ ರೂವಾರಿಗಳಾದ ಯುವಜನರು ಜಾಗೃತರಾಗಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು. ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ನಡೆದ ವಿದ್ಯಾರ್ಥಿ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಕರು ರಸ್ತೆ ಅಪಘಾತ ತಡೆಗಟ್ಟುವಲ್ಲಿ ಎಚ್ಚರಿಕೆ ವಹಿಸಬೇಕು. ಕಳೆದ ಬಾರಿ 140ಕ್ಕೂ ಹೆಚ್ಚು ಪ್ರಕರಣಗಳು ಸಂಭವಿಸಿವೆ ಎಂದರು.
ಇದೇ ವೇಳೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸೆಸ್ಕ್ನ ವೃತ್ತ ಪ್ರಸರಣ ಮತ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಂ. ಸುಜಾತ, ಜೆಎಸ್ಎಸ್ ಕಾಲೇಜು ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಪ್ರೊ.ಎಂ.ಬಿ. ಮಲ್ಲಿಕಾರ್ಜುನ ಪಂಡಿತ್, ಕ್ರೀಡಾ ವೇದಿಕೆ ಸಂಚಾಲಕ ಎಂ.ಎಸ್.ವೆಂಕಟರಾವ್ ಇದ್ದರು.
ಇಬ್ಬರು ಅಪರಿಚಿತರ ಸಾವು
ಮೈಸೂರು: ದೇವರಾಜ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ. ನಗರದ ದಾಸಪ್ಪ ವೃತ್ತದ ಬಳಿಯ ಖಾನಿ ಜಾಗದಲ್ಲಿ 60 ವರ್ಷದ ವ್ಯಕ್ತಿ ಮಂಗಳವಾರ ಮೃತಪಟ್ಟಿದ್ದಾರೆ. ಚಹರೆ- 5.6 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಸ್ಕತ್ ಬಣ್ಣದ ಶರ್ಟ್, ಕಪ್ಪು ನಿಕ್ಕರ್ ಧರಿಸಿದ್ದಾರೆ. ಬೆಡ್ಶೀಟ್ ಮೈಮೇಲೆ ಹೊದಿಸಿರುತ್ತದೆ. ಧನ್ವಂತ್ರಿ ರಸ್ತೆಯ ಸ್ಕೂಟರ್ ನಿಲ್ದಾಣದ ಬಳಿ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ನೇರಳೆ ಬಣ್ಣದ ಶರ್ಟ್, ನೀಲಿ ನೇರಳೆ ಬಿಳಿ ಗೆರೆಯುಳ್ಳ ಲುಂಗಿ ಧರಿಸಿದ್ದಾರೆ. 0821- 2418306 ಸಂಪರ್ಕಿಸಿ.
ಅಪರಿಚಿತ ಶವ ಪತ್ತೆಗೆ ಮನವಿ
ಮೈಸೂರು: ನಾಗೇನಹಳ್ಳಿ-ಮೈಸೂರು ರೈಲು ನಿಲ್ದಾಣಗಳ ಮಧ್ಯೆ ಏ.1ರಂದು ಸುಮಾರು 40 ವರ್ಷ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.ಮೃತ ವ್ಯಕ್ತಿಯ ಚಹರೆ ಹೀಗಿದೆ. 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣಗೆಂಪು ಮೈಬಣ್ಣ, ಕೋಲುಮುಖ, ತಲೆಯಲ್ಲಿ ಸುಮಾರು ಒಂದು ಇಂಚು ಉದ್ದದ ಕಪ್ಪು ಕೂದಲು ಹಾಗೂ ಕುರುಚಲು ಗಡ್ಡ ಮೀಸೆ ಇರುತ್ತದೆ. ಕಪ್ಪು-ಕೆಂಪು ಮಿಶ್ರಿತ ಬಣ್ಣದ ಗೆರೆಯುಳ್ಳ ತುಂಬು ತೋಳಿನ ರೆಡಿಮೇಡ್ ಶರ್ಟ್, ಕಪ್ಪು ಬಣ್ಣದ ಟೆರಿಕಾಟ್ ಪ್ಯಾಂಟ್ ಧರಿಸಿರುತ್ತಾರೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ದೂ. 2516579 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

