ಷೇಕ್ಸ್ಪಿಯರ್ ಜನ್ಮದಿನ ಪ್ರದರ್ಶನ
ಮೈಸೂರು: ವಿಶ್ವದ ಪ್ರಸಿದ್ಧ ನಾಟಕಕಾರ ವಿಲಿಯಂ ಷೇಕ್ಸ್ಪಿಯರ್ ಅವರ 450ನೇ ಹುಟ್ಟುಹಬ್ಬವನ್ನು ಮೈಸೂರು ಮಕ್ಕಳ ಕೂಟ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಷೇಕ್ಸ್ಪಿಯರ್ ಕುರಿತು ಸಕಲ ವಿವರಗಳನ್ನು ನೀಡುವ ಎರಡು ದಿನಗಳ ಭಿತ್ತಿಪತ್ರಗಳ ಪ್ರದರ್ಶನವನ್ನು ಮೈಸೂರು ವಿವಿಯ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಮಹದೇವು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾರ ಪ್ರೊ.ಕೆ.ವಿ. ದಾಮೋದರ ಗೌಡ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಸ್. ಬಾಲಾಜಿ ಇದ್ದರು. ಪ್ರದರ್ಶನದಲ್ಲಿ ಪ್ರೊ.ಬಿ.ಎಸ್. ಬಾಲಾಜಿ ಅವರು ಖಾಸಗಿಯಾಗಿ ಸಂಗ್ರಹಿಸಿರುವ ಕ್ಯಾಸೆಟ್ಗಳು, ರೆಕಾರ್ಡಿಂಗ್ ಪ್ಲೇಟ್ಗಳು, ಕಥೆ ಹಾಗೂ ನಾಟಕದ ಪುಸ್ತಕಗಳು ಮತ್ತು ಜೀವನ ಚರಿತ್ರೆಯ ಕೃತಿಗಳು, ರಂಗಮಂದಿರದ ಚಿತ್ರಗಳು ಸೇರಿದಂತೆ ಷೇಕ್ಸ್ಪಿಯರ್ ಬಗ್ಗೆ ವಿವರಗಳನ್ನು ಒದಗಿಸುವ ಕುತೂಹಲಕಾರಿ ವಸ್ತುಗಳು ಅನಾವರಣಗೊಂಡಿವೆ. ಏ.4 ರವರೆಗೆ ನಡೆಯಲಿರುವ ಪ್ರದರ್ಶನವು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ವೀಕ್ಷಣೆಗೆ ಲಭ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

