ತರಬೇತಿಗೆ ಆಹ್ವಾನ
ಹುಣಸೂರು: ಪಟ್ಟಣದ ಅರಿವು ಫೌಂಡೇಶನ್ ವತಿಯಿಂದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಮುಂಬರುವ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಪೊಲೀಸ್ ನೇಮಕಾತಿಯ ಸಿಇಟಿ ಪರೀಕ್ಷೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಮುಖ್ಯಸ್ಥ ರೇಣುಕಾ ಪ್ರಸಾದ್ ಅವರ ಮೊ. 9964342806, ಸಂಪರ್ಕಿಸಬಹುದು.
ಗ್ಯಾಸ್ ವಿತರಣೆ
ಅಂತರಸಂತೆ: ಅಂತರಸಂತೆ ಹೋಬಳಿ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಕಾಡಂಚಿನ ಗ್ರಾಮಗಳ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ಅಡುಗೆ ಅನಿಲ ವಿತರಿಸಲಾಗಿದೆ. ಕಾಡಂಚಿನ ಗ್ರಾಮಗಳಾದ ಕಾರಾಪುರ, ಎನ್.ಬೆಳತ್ತೂರು, ಮಳಲಿ, ಮಗ್ಗೆ, ಕೆ.ಆರ್. ಪುರ, ಹೊಸಹೊಳಲು, ಎ. ದಮ್ಮನಕಟ್ಟೆ, ಹುಣಸೇಕುಪ್ಪೆ, ತಾರಕ, ಸತ್ತಿಗೆಹುಂಡಿ, ಸೋಗಹಳ್ಳಿ ಮುಂತಾದ ಗ್ರಾಮಗಳ ಜನರು ಅಡುಗೆ ಮಾಡಲು ಕಾಡಿನ ಕಟ್ಟಿಗೆ ಬಳಸುತ್ತಿದ್ದರು. ಕಾಡಂಚಿನ ಗ್ರಾಮಗಳ ನಿವಾಸಿಗಳು ಅರಣ್ಯ ಪ್ರವೇಶಿಸದಂತೆ ಮಾಡಲು ಅಂತರಸಂತೆ ವಲಯ ಅರಣ್ಯ ಅಧಿಕಾರಿ ಪ್ರಶಾಂತ್ಕುಮಾರ್ ಪೈ ಸುಮಾರು 590 ಗ್ಯಾಸ್ ಸಿಲಿಂಡರ್ಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಯಿತು.
ಅಹಿಂಸಾ ರಥಯಾತ್ರೆ
ಸರಗೂರು: ಪಟ್ಟಣಕ್ಕೆ ಆಗಮಿಸಿದ ಶಾಂತಿನಾಥ ಮಹಾರಾಜ ಅಹಿಂಸಾ ರಥವನ್ನು ಜೈನ ಸಮಾಜದ ಅಧ್ಯಕ್ಷ ಎಸ್.ವಿ. ಮಂಜುನಾಥ್ ಮತ್ತು ಜೈನ ಸಮಾಜದ ಮುಖಂಡರು ಬರ ಮಾಡಿಕೊಂಡರು. ಅಹಿಂಸಾ ಸಂದೇಶ ಸಾರುತ್ತಾ ಜೈನ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ಮಹಾರಾಷ್ಟ್ರದ ಪೂನಾದಿಂದ ಶಾಂತಿನಾಥ ಮಹಾರಾಜ ಅಹಿಂಸಾ ರಥವು 2013ರ ಜು.21 ಹೊರಟು, ಮಧ್ಯಪ್ರದೇಶ ನಂತರ ರಾಜ್ಯಕ್ಕೆ ಆಗಮಿಸಿದೆ. ಸರಗೂರು ಜೈನ ಸಮಾಜದ ಮಾಜಿ ಅಧ್ಯಕ್ಷ ಎಸ್.ಬಿ. ಬ್ರಹ್ಮದೇವಯ್ಯ, ಎಸ್.ಎನ್. ದೇವೇಂದ್ರ, ಎಸ್.ಎಸ್. ಸೋಮಪ್ರಭ, ಕೆ. ಸುರೇಶ್ಣಜೈನ್ ಭಾಗವಹಿಸಿದ್ದರು.
ಟ್ಯಾಂಕ್ ಕೊಡುಗೆ
ಸರಗೂರು: ಸಮೀಪದ ಹೆಡಿಯಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಾಪ್ಕಾಪ್ ಇಂಡಿಯಾ ವತಿಯಿಂದ ಜೈವಿಕ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ವಿತರಿಸಿದರು. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿ ಊಟ ಮತ್ತು ಕುಡಿಯುವ ನೀರಿಗೆ ಅನುಕೂಲ ಆಗಲೆಂದು ಈ ನೀರಿನ ಟ್ಯಾಂಕ್ ನೀಡಲಾಗಿದ್ದು, ಈ ಟ್ಯಾಂಕ್ನಲ್ಲಿ ಜೈವಿಕ ರೀತಿಯಲ್ಲಿ ನೀರು ಶುದ್ಧೀಕರಣ ಆಗುತ್ತದೆ. ಮುಂದಿನ ದಿನದಲ್ಲಿ ತಾಲೂಕಿನ ಎಲ್ಲ ಶಾಲೆಗಳಿಗೆ ಮತ್ತು ಮನೆಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದರು.
ಕಟ್ಟಡ ವಶಕ್ಕೆ
ಕೆ.ಆರ್. ನಗರ: ತಾಲೂಕಿನ ಗುಡಗನಹಳ್ಳಿ ಅಂಗನವಾಡಿ ಕೇಂದ್ರ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಆಗದೆ ಇರುವುದರಿಂದ ಅಂಗನವಾಡಿ ಕಟ್ಟಡವು ತಮ್ಮ ಇಲಾಖೆಗೆ ಹಸ್ತಾಂತರಗೊಂಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 2014ರ ಮಾ.10ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಂಗನವಾಡಿಗಿಲ್ಲ ಉದ್ಘಾಟನಾ ಭಾಗ್ಯ ಸುದ್ದಿಗೆ ಸ್ಪಷ್ಟನೆ ನೀಡಿರುವ ಅವರು, ಗುತ್ತಿಗೆದಾರರಿಗೆ ಹಣ ಪಾವತಿಸಿದ ನಂತರ ಕಟ್ಟಡವನ್ನು ವಶಕ್ಕೆ ಪಡೆಯಲಾಗುವುದು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸವಾರ ಸಾವು
ಕೆ.ಆರ್. ನಗರ: ಲಾರಿಯೊಂದು ಮೊಪೆಡ್ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ. ಬೆಳಗ್ಗೆ 11.30ರ ಸಮಯದಲ್ಲಿ ಇಲ್ಲಿನ ಪುರಸಭಾ ವೃತ್ತದ ಬಳಿ ಪಟ್ಟಣದ ಕನಕನಗರ ನಿವಾಸಿ ಸೋಮಾಚಾರಿ (62) ತಮ್ಮ ಮೊಪೆಡ್ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದು ನಂತರ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತವಾದ ಕೂಡಲೇ ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಎಚ್.ಎನ್. ಸಿದ್ದಯ್ಯ, ಎಸ್ಐ ಷಣ್ಮುಗಂ ಸ್ಥಳಕ್ಕೆ ಆಗಮಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಚಾಲಕನನ್ನು ಪೊಲೀಸರು ಬಂಧಿಸಿ, ಲಾರಿ ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

