ಮೈಸೂರು

ಕುರುಕ್ಷೇತ್ರ, ವಿದ್ಯಾರ್ಥಿಗಳ ಉತ್ಸವ

Published On :

ಮೈಸೂರು: ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಂತರ ಕಾಲೇಜು ಕುರುಕ್ಷೇತ್ರ ಸ್ಪರ್ಧಾ ಉತ್ಸವದ ಸಮಾರೋಪ ಶುಕ್ರವಾರ ನಡೆಯಿತು.
ಜೆಎಸ್ಎಸ್ ಮಹಿಳಾ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಅಧ್ಯಯನ ವಿಭಾಗದ ಆವಿಷ್ಕಾರ ವತಿಯಿಂದ ಸರಸ್ವತಿಪುರಂ ಸಂಸ್ಥೆಯ ನವಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಉತ್ಸವದಲ್ಲಿ ಬಿ.ವಿ. ಪಂಡಿತ್ ಸದ್ವೈದ್ಯಶಾಲಾ ನಿರ್ದೇಶಕ ಎನ್.ಬಿ. ರಾಮಗೋಪಾಲ್ ಬಹುಮಾನ ವಿತರಿಸಿದರು.
ವ್ಯವಹಾರದ ಚಾಕಚಕ್ಯತೆಗೆ ಮಕರವ್ಯೂಹ ಸ್ಪರ್ಧಾ ವಿಭಾಗದಲ್ಲಿ ವಿದ್ಯಾಶ್ರಮ ಕಾಲೇಜು ಪ್ರಥಮ, ವಿದ್ಯಾವಿಕಾಸ ಕಾಲೇಜು ದ್ವಿತೀಯ, ಮಾರುಕಟ್ಟೆಗೆ ಸಂಬಂಧಿಸಿದಂತೆ ವಜ್ರವ್ಯೂಹ ವಿಭಾಗದಲ್ಲಿ ವಿದ್ಯಾಶ್ರಮ ಕಾಲೇಜು ಪ್ರಥಮ ಹಾಗೂ ದ್ವಿತೀಯ, ಖಜಾನೆ ಬೇಟೆಯ ಗುರುಡ ವ್ಯೂಹ ವಿಭಾಗದಲ್ಲಿ ಲಕ್ಷ್ಮೀ ಹಯಗ್ರಿವ ಕಾಲೇಜು ಪ್ರಥಮ, ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ  ಕಾಲೇಜು ದ್ವಿತೀಯ.
ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ ಚಕ್ರವ್ಯೂಹ ವಿಭಾಗದಲ್ಲಿ ವಿದ್ಯಾಶ್ರಮ ಕಾಲೇಜು ಪ್ರಥಮ, ಅವೃತ ವಿದ್ಯಾಲಯ ದ್ವಿತೀಯ, ಮಾನವ ಸಂಪನ್ಮೂಲ ಕುರಿತಾದ ಊರ್ಮಿ ವ್ಯೂಹ ವಿಭಾಗದಲ್ಲಿ ವಿದ್ಯಾಶ್ರಮ ಕಾಲೇಜು ಪ್ರಥಮ, ಅವೃತ ವಿದ್ಯಾಲಯ ದ್ವಿತೀಯ, ಹಾಗೂ ಸಮೂಹ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ದೇವ ವ್ಯೂಹ ಸ್ಪರ್ಧಾ ವಿಭಾಗದಲ್ಲಿ ಜೆಎಸ್ಎಸ್ ಮಹಿಳಾ ಕಾಲೇಜು ಪ್ರಥಮ ಹಾಗೂ ಎಸ್ಡಿಎಂ ಮಹಿಳಾ ಕಾಲೇಜು ದ್ವಿತೀಯ ಬಹುಮಾನ ಪಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.