ಮೈಸೂರು

ಮನೆ ಮನೆ ಬಿಜೆಪಿ ಕಾರ್ಯಕ್ರಮ ಇಂದು

Published On :

ಮೈಸೂರು: ಬಿಜೆಪಿ ವತಿಯಿಂದ ಏ.6 ರಂದು ಕೃಷ್ಣರಾಜ ಕ್ಷೇತ್ರದಲ್ಲಿ ಮನೆ ಮನೆ ಬಿಜೆಪಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 6 ರಿಂದ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಶ್ರೀರಾಂಪುರ, ಅರವಿಂದನಗರ, ತರಕಾರಿ ಮಾರುಕಟ್ಟೆ, ಜ್ವಾಲಾಮುಖಿ ವೃತ್ತ, ಸಿದ್ದಾರ್ಥನಗರ, ಗೌರಿಶಂಕರನಗರ, ಚಾಮುಂಡಿಪುರಂ 1 ಮತ್ತು 2ನೇ ಮುಖ್ಯರಸ್ತೆ, ಜಯನಗರ ರಾಮಮಂದಿರ, ಬೇಡರ ಕಣ್ಣಪ್ಪ ದೇವಸ್ಥಾನ, ರಾಮಲಿಂಗೇಶ್ವರಸ್ವಾಮಿ ದೇವಸ್ಥಾನ, ಚಾಮುಂಡಿವನ, ಜೆ.ಪಿ.ನಗರ ಇ ಬ್ಲಾಕ್, ಕುವೆಂಪುನಗರ ಎಂ. ಬ್ಲಾಕ್, ಜ್ಞಾನಗಂಗಾ ಶಾಲೆ, ಹೇಮಾವತಿ ಶಾಲೆ, ಗಣೇಶ್ ಭಂಡಾರ್‌ನಲ್ಲಿ ಪ್ರಚಾರ ನಡೆಸುವರು. ಕಾಂಗ್ರೆಸ್ ಸೇವಾದಳದಿಂದ ಪಾದಯಾತ್ರೆ ನಾಳೆ: ನಗರ ಕಾಂಗ್ರೆಸ್ ಸೇವಾದಳದಿಂದ ಅಭ್ಯರ್ಥಿಯ ಪರವಾಗಿ ಏ.8ರ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಕೃಷ್ಣರಾಜ ಕ್ಷೇತ್ರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜೆಎಸ್‌ಎಸ್ ಮಠದ ಮುಂಭಾಗದಿಂದ ಆರಂಭವಾಗುವ ಪಾದಯಾತ್ರೆಗೆ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡುವರು. ಅಭ್ಯರ್ಥಿ ಎಚ್. ವಿಶ್ವನಾಥ್, ಶಾಸಕ ಎಂ.ಕೆ. ಸೋಮಶೇಖರ್, ಸಿ.ದಾಸೇಗೌಡ, ಶಿವಕುಮಾರ್ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.