ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿ
ಮೈಸೂರಿನ ಪ್ರತಿಷ್ಠಿತ ಬಡಾವಣೆಯಾದ ವಿ.ವಿ. ಮೊಹಲ್ಲಾದ 8ನೇ ಕ್ರಾಸ್ನಲ್ಲಿ ಹಲವು ವಾಣಿಜ್ಯ ಮಳಿಗೆಗಳು, ಹೊಟೇಲ್ಗಳು ಹೆಚ್ಚಾಗಿದ್ದು, ಇಲ್ಲಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ಅಕ್ಕಪಕ್ಕದ ಮನೆಗಳ ಮುಂದಿನ ಪಾದಚಾರಿ ಜಾಗದಲ್ಲಿ ಹಾಗೂ ಗೇಟ್ ಮುಂದೆ ಗಂಟೆಗಟ್ಟಲೆ ನಿಲ್ಲಿಸಿ ಹೋಗುತ್ತಾರೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಬಾರಿ ತೊಂದರೆ ಉಂಟಾಗಿದ್ದು, ಕೆಲವೊಮ್ಮೆ ಮನೆಯಿಂದ ಹೊರ ಬರಲು ಆಗುವುದಿಲ್ಲ. ವಿ.ವಿ. ಪುರಂ ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಹೊಟೇಲ್, ವಾಣಿಜ್ಯ ಮಳಿಗೆಗಳ ಸುತ್ತ ಮನೆಗಳ ಮುಂದೆ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿ, ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯ.
8ನೇ ಕ್ರಾಸ್ ನಿವಾಸಿಗಳು, ವಿ.ವಿ. ಮೊಹಲ್ಲಾ.
ರಸ್ತೆ ದುರಸ್ತಿ ಪಡಿಸಿ
ಮೈಸೂರಿನ ಹೈವೇ ವೃತ್ತದಿಂದ ಯಾದವಗಿರಿ ಸಣ್ಣ ಕೈಗಾರಿಕಾ ಪ್ರದೇಶ, ಬೃಂದಾವನ ಬಡಾವಣೆ, ಮೇಟಗಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗುವ ರೇಲ್ವೆ ಹಳಿ ಪಕ್ಕದಲ್ಲಿರುವ ರಸ್ತೆಯು ತೀವ್ರ ಹದಗೆಟ್ಟಿದ್ದು, ಕೂಡಲೇ ಈ ರಸ್ತೆಗೆ ಡಾಂಬರು ಹಾಕಿ, ರಸ್ತೆ ದುರಸ್ತಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವುದು. ಇಲ್ಲಿನ ರೇಲ್ವೆ ಕೆಳ ಸೇತುವೆಯ ರಸ್ತೆಯನ್ನು ಯಾರು ಕೇಳುವವರೇ ಇಲ್ಲದಂತಾಗಿದೆ. ಈ ರಸ್ತೆಯಲ್ಲಿ ದೊಡ್ಡ ಗುಂಡಿಗಳಾಗಿದ್ದು, ಸಂಚರಿಸುವುದೇ ದೊಡ್ಡ ಸಾಹಸವಾಗಿದೆ. ರೇಲ್ವೆ ಇಲಾಖೆಯವರು ಕೆಳ ಸೇತುವೆಯ ರಸ್ತೆಗೆ ಡಾಂಬರು ಹಾಕುವಂತೆ ಮನವಿ.
ಎಲ್.ಜೆ. ಸುಧಾಕರ್, ಬೃಂದಾವನ ಬಡಾವಣೆ.
ಸರಣಿ ಅಪಘಾತ ತಪ್ಪಿಸಿ
ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದ ಸಮೀಪವಿರುವ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯ ಗ್ರಾಮದ ಬಳಿ ಹೊನ್ನಮ್ಮನಕಟ್ಟೆ ಕ್ರಾಸ್ನಲ್ಲಿ ಇತ್ತೀಚೆಗೆ ಉದ್ಬೂರು ಗೇಟ್ನಿಂದ ಹೊನ್ನಮ್ಮನಕಟ್ಟೆ ಕ್ರಾಸ್ವರೆಗೆ ಉತ್ತಮ ರಸ್ತೆ ನಿರ್ಮಾಣವಾಗಿದ್ದು, ಈ ಕ್ರಾಸ್ನಲ್ಲಿ ನಿತ್ಯ ಅಪಘಾತ ಸಂಭವಿಸುತ್ತಿದ್ದು, ಕೂಡಲೇ ಈ ಸ್ಥಳದಲ್ಲಿ ರಸ್ತೆ ಡುಬ್ಬ ನಿರ್ಮಿಸಿ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ.
ಮುನವರ್ಪಾಶ, ಗ್ರಾಪಂ ಸದಸ್ಯ, ಅಂತರಸಂತೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

