ಮೈಸೂರು

ದೊಡ್ಡಿಗೆ ಬಂತು ಮತ್ತೊಂದು ಕಾಡಾನೆ

Published On :

ಪಿರಿಯಾಪಟ್ಟಣ: ಹಾಸನದ ತೋಟವೊಂದರಲ್ಲಿ ಸೆರೆ ಹಿಡಿಯಲಾಗಿದ್ದ ಮತ್ತೊಂದು ಕಾಡಾನೆಯನ್ನು ತಾಲೂಕಿನ ದೊಡ್ಡಹರವೆ ಅರಣ್ಯ ಪ್ರದೇಶದ ಆನೆದೊಡ್ಡಿಗೆ ಬಿಡಲಾಗಿದೆ. ಸಕಲೇಶಪುರದಿಂದ ಲಾರಿಯಲ್ಲಿ ತಂದ 20 ವರ್ಷ ಪ್ರಾಯದ ಈ ಹೆಣ್ಣಾನೆಯನ್ನು ದೊಡ್ಡಿಗೆ ಬಿಡಲು ಸಾಕಾನೆಗಳಾದ ಅಭಿಮನ್ಯು ಹಾಗೂ ಶ್ರೀರಾಮರ ನೆರವು ಬಳಸಿಕೊಳ್ಳಲಾಯಿತು. ಹೈಕೋರ್ಟ್ ಆದೇಶದಂತೆ 25 ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿ ಈವರೆಗೆ 13 ಕಾಡಾನೆಗಳನ್ನು ಸೆರೆಹಿಡಿದಿದ್ದು, ಅದರಲ್ಲಿ ಒಟ್ಟು 4 ಕಾಡಾನೆಗಳನ್ನು ದೊಡ್ಡಹರವೆ ಆನೆದೊಡ್ಡಿಗೆ ಬಿಡಲಾಗಿದೆ. ದೊಡ್ಡಹರವೆ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿರುವ ಆನೆದೊಡ್ಡಿ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಬಗ್ಗೆ ಮತ್ತು ಆನೆಗಳ ಕುರಿತು ಅಧ್ಯಯನ ನಡೆಸುವ ಆಸಕ್ತರಿಗೆ ಅನುಕೂಲವಾಗುವಂತೆ ಸಂಶೋಧನಾ ಕೇಂದ್ರ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮೈಸೂರು ವಿಭಾಗದ ಡಿಎಫ್‌ಒ ಬಾಲಚಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.