ಬಡತನ ನಿರ್ಮೂಲನೆ ಬಿಜೆಪಿ ಗುರಿ
ಪಿರಿಯಾಪಟ್ಟಣ: ಭಯೋತ್ಪಾದನೆ, ಬೆಲೆ ಏರಿಕೆ, ಕಿತ್ತು ತಿನ್ನುವ ಬಡತನ ನಿರ್ಮೂಲನೆ ಬಿಜೆಪಿಯ ಮುಖ್ಯ ಗುರಿ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭಯೋತ್ಪಾದನೆ, ಸೈನಿಕರ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಹತ್ತಿಕ್ಕಲು ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶಕ್ಕೆ ಅಗತ್ಯವಿದೆ ಎಂಬುದನ್ನು ಜನ ಸಾಮಾನ್ಯರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 2 ಸಂಖ್ಯೆ ದಾಟುವುದಿಲ್ಲ. ಕಾಂಗ್ರೆಸ್ ದಿವಾಳಿಯತ್ತ ಸಾಗುತ್ತಿದೆ ಎಂದು ಲೇವಡಿ ಮಾಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಉತ್ಸಾಹಿ ಹಾಗೂ ಯುವಕರಾಗಿದ್ದು, ಬುದ್ದಿವಂತ ಅಭ್ಯರ್ಥಿಯಾಗಿದ್ದಾರೆ. ಮೋದಿ ಅವರು ಮೈಸೂರಿಗೆ ಭೇಟಿ ನೀಡಿದ ನಂತರ ಪಕ್ಷಕ್ಕೆ ಬೀಳುವ ಮತಗಳಲ್ಲಿ ಶೇ. 10 ರಷ್ಟು ಹೆಚ್ಚಿದ್ದು, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕುರ್ಚಿಗಾಗಿ ಕಿತ್ತಾಟ: ಅಶೋಕ್ ಬಿಜೆಪಿ ಕಚೇರಿಗೆ ಆಗಮಿಸುವ ಮುನ್ನ ಪಕ್ಷದ ಕಚೇರಿಯ ವೇದಿಕೆ ಕುರ್ಚಿಗಳಲ್ಲಿ ಕೂರುವ ವಿಚಾರವಾಗಿ ಪಕ್ಷದ ಮುಖಂಡರಾದ ಪ್ರಸನ್ನಕೇಶವ ಹಾಗೂ ಕುಮಾರಸ್ವಾಮಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನು ಗಮನಿಸಿದ ಪಕ್ಷದ ಕಾರ್ಯಕರ್ತರು ನಗುತ್ತಾ ಕುಳಿತರೆ, ವೇದಿಕೆಯಲ್ಲಿದ್ದ ಮುಖಂಡರು ಮೂಕ ಪ್ರೇಕ್ಷಕರಂತೆ ಕುಳಿತ್ತಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ಕುಮಾರ್ಗೌಡ, ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್, ಮುಖಂಡರಾದ ಎಚ್.ಡಿ. ಗಣೇಶ್, ಬಿ.ಎಸ್. ರಾಮಚಂದ್ರು, ಎಂ.ಎಂ. ರಾಜೇಗೌಡ, ಪ್ರಸನ್ನಕೇಶವ, ಲೋಕಪಾಲಯ್ಯ, ಶಶಿ, ಕೃಷ್ಣಪ್ರಸಾದ್, ಕುಮಾರಸ್ವಾಮಿ, ರಾಜೇಂದ್ರಸಿಂಹ ಇದ್ದರು.
ವಾಟಾಳು ಶ್ರೀಗಳ ಭೇಟಿ
ಟಿ. ನರಸೀಪುರ: ಕಾಂಗ್ರೆಸ್ ವಿವಿಧ ಹಂತದಲ್ಲಿ ಶ್ರೇಣಿಕೃತ ಚುನಾಯಿತ ಪ್ರತಿನಿಧಿಗಳು ಇರುವುದರಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಸೂರ್ಯ ಸಿಂಹಾಸನ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಅವರು ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

