ಮೈಸೂರು

ಮತದಾನ ಬಹಿಷ್ಕಾರಕ್ಕೆ ನಿರ್ಧಾರ

Published On :

ಮೈಸೂರು: ಕಲಾವಿದರ ಬಗ್ಗೆ ನಿರ್ಲಕ್ಷ್ಯ ಮತ್ತು ಪ್ರೋತ್ಸಾಹ ನೀಡದಿರುವುದನ್ನು ಖಂಡಿಸಿ ಮೈಸೂರು ಜಿಲ್ಲಾ ಕನ್ನಡ ರಂಗಭೂಮಿ ವೃತ್ತಿ ಕಲಾವಿದೆಯರ ಸಂಘ ಈ ಬಾರಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರು ಸುಮಾರು ಮೂರು ಸಾವಿರ ಮಂದಿ ಇದ್ದಾರೆ. ನಮಗೆ ಯಾವುದೇ ಸಹಾಯ, ಸಹಕಾರ, ನೀಡದೆ ಇರುವುದರಿಂದ ಮತ್ತು ನಾಡಹಬ್ಬ ದಸರಾ ಮಹೋತ್ಸವ ಸಾಂಸ್ಕೃತಿಕ ಸಮಿತಿಯಲ್ಲಿ ಕಲಾವಿದರಿಗೆ ಸರಿಯಾದ ಸ್ಥಾನ ನೀಡುವುದಿಲ್ಲ. ಅಲ್ಲದೆ ವೃತ್ತಿ ರಂಗಭೂಮಿಯ ಜೀವನಾಡಿ ಆಗಿದ್ದ ಪುರಭವನ ಕಾಮಗಾರಿ ಪೂರ್ಣಗೊಳ್ಳದೆ ಈಗ ಕಲಾವಿದರು ಒಂದೊತ್ತಿನ ಊಟಕ್ಕೂ ತೊಂದರೆ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘದ ಕಾರ್ಯದರ್ಶಿ ಎಸ್.ಎಸ್. ಗಾಯತ್ರಿ ಅಲವತ್ತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲಾ ಮತದಾನ ಬಹಿಷ್ಕರಿಸಲು ನಾವು ಮುಂದಾಗಿದ್ದು, ಒಂದು ವೇಳೆ ನಾವು ಮತ ಹಾಕಬೇಕಿದ್ದರೆ ಬೇಡಿಕೆ ಈಡೇರಿಸುವ ಭರವಸೆನೀಡಿದಲ್ಲಿ ಮಾತ್ರ ಮತ ಚಲಾಯಿಸುವುದಾಗಿ ಹೇಳಿದ್ದಾರೆ.

ಪ್ರತಾಪ್‌ಸಿಂಹ ಬೆಂಬಲಿಸಲು ಪೌರ ಕಾರ್ಮಿಕರಿಗೆ ಮನವಿ
ಮೈಸೂರು: ಪೌರಕಾರ್ಮಿಕ ಸಮುದಾಯವರು ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಅವರನ್ನು ಬೆಂಬಲಿಸುವಂತೆ ಮೈಸೂರು ನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್‌ರಾಜ್ ಮನವಿ ಮಾಡಿದರು. ಮೈಸೂರು, ಕೊಡಗು ಜಿಲ್ಲೆಯಲ್ಲಿ 81 ಸ್ಲಂಗಳಲ್ಲಿ 75 ಸಾವಿರ ಪೌರಕಾರ್ಮಿಕರಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರವು ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಅವರನ್ನು ಬೆಂಬಲಿಸುವಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಮಾಜಿ ಮೇಯರ್ ನಾರಾಯಣ್ ಹೈಕೋರ್ಟ್ ಆದೇಶವನ್ನು ತಿರುಚಿ ಹೇಳಿಕೆ ನೀಡುತ್ತಿದ್ದಾರೆ. ಅವರು ಪೌರಕಾರ್ಮಿಕರನ್ನು ದಿಕ್ಕು ತಪ್ಪಿಸಿ ಮತಗಳನ್ನು ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವಡಿವೇಲು, ಕಾರ್ಯದರ್ಶಿ ಮುರುಗ, ಮುಖಂಡರಾದ ಎಂ. ಚಂದ್ರಶೇಖರ್, ಎಂ. ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.