ಶ್ರೀಕೋದಂಡರಾಮ ಬ್ರಹ್ಮರಥೋತ್ಸವ
ಬನ್ನೂರು: ವಹ್ನೀಪುರವೆಂದು ಪುರಾಣ ಪ್ರಸಿದ್ಧಿ ಹೊಂದಿರುವ ಬನ್ನೂರು ಶ್ರೀಕೋದಂಡರಾಮ ಬ್ರಹ್ಮ ಮಹಾರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವ ದೇಗುಲ ಮುಂಭಾಗದಿಂದ, ವಾದ್ಯ ನಾದದೊಂದಿಗೆ ಆರಂಭಗೊಂಡು ಗ್ರಾಮದ ತೇರಿನ ಬೀದಿಯ ಮೂಲಕ ಸಾಗಿ ದೊಡ್ಡ ಅಂಗಡಿ ಬೀದಿಯ ಮಾರ್ಗವಾಗಿ ಸಂಚರಿಸಿತು. ರಥೋತ್ಸವದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಭಾವದಿಂದ ದೇವರಿಗೆ ಜೈಕಾರ ಹಾಕುತ್ತಾ ರಥ ಎಳೆದರು.
ನೂತನ ದಂಪತಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಯುವಕರು ರಥೋತ್ಸವಕ್ಕೆ ಹಣ್ಣುಜವನ ಎಸೆದು, ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ರಥೋತ್ಸವಕ್ಕೆ ಬೆಳಗ್ಗೆ ಸ್ವಾತಿ ನಕ್ಷತ್ರದ 7 ರಿಂದ 7.30ರೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಪ್ರಧಾನ ಅರ್ಚಕ ಎನ್.ಎಸ್.ಕೃಷ್ಣಸ್ವಾಮಿಮತ್ತು ಆಗಮಿಕರಾದ ಎಂ. ರಾಜೀವ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಬೆಳಗ್ಗೆ ರಥದ ಮೇಲೆ ಶ್ರೀ ಕೋದಂಡರಾಮ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ, ಭಕ್ತಾದಿಗಳು ರಥವನ್ನು ದೇವಾಲಯದಿಂದ ತೇರಿನ ಬೀದಿಯ ಮೂಲಕ ದೊಡ್ಡಅಂಗಡಿ ಬೀದಿಯ ಮಾರ್ಗವಾಗಿ ಸಾಗಿ ಸ್ವಸ್ಥಾನಕ್ಕೆ 10.30ಕ್ಕೆ ಭಕ್ತಾದಿಗಳು ರಥವನ್ನು ಎಳೆದು ತಲುಪಿಸಿದರು. ದೇವಾಲಯ ವತಿಯಿಂದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಇಂದಿನಿಂದ ಜಾತ್ರೆ
ಭೇರ್ಯ: ಗಂಧನಹಳ್ಳಿ ಗ್ರಾಮದಲ್ಲಿ ಏ.18 ರಿಂದ 20 ರವರೆಗೆ ಮೂರು ದಿನಗಳ ಕಾಲ ಜಾತ್ರೆ ನಡೆಯಲಿದ್ದು, ಗ್ರಾಮದೇವತೆ ಶ್ರೀ ಹುಣಸಮ್ಮತಾಯಿ ರಥೋತ್ಸವ ಜರುಗಲಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಗಂಧನಹಳ್ಳಿ ಹೇಮಂತ್ ಹೇಳಿದ್ದಾರೆ. ಏ.18ರ ಸಂಜೆ 7.30ಕ್ಕೆ ಗ್ರಾಮದೇವತೆ ಹುಣಸಮ್ಮ ತಾಯಿ ವಿಗ್ರಹವನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಏ.19 ಗ್ರಾಮೀಣ ಕ್ರೀಡೆ ನಾಡಕುಸ್ತಿ ಸ್ಪರ್ಧೆ ಏರ್ಪಡಿಸಿದೆ. ಏ.20 ಜಾತ್ರಾ ಮಹೋತ್ಸವ ಜರುಗಲಿದೆ. ಭಕ್ತಾದಿಗಳಿಗೆ ಸಾರಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

