ಕ್ರಿಕೆಟ್ ಬೆಟ್ಟಿಂಗ್: ಮೂವರ ಸೆರೆ
ಕ.ಪ್ರ.ವಾರ್ತೆ ಮೈಸೂರು ಏ. 20
ಐಪಿಎಲ್- ಟಿ20 ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎನ್.ಆರ್. ಮೊಹಲ್ಲಾ ಎ.ಜಿ ಬ್ಲಾಕ್ ನಿವಾಸಿ ವೆಂಕಟಸುಬ್ಬಯ್ಯ ಎಂಬವರ ಪುತ್ರ ವೆಂಕಟೇಶ್ (37), ಬನ್ನಿಮಂಟಪದ ಶಿವರಾತ್ರೀಶ್ವರ ನಗರ ನಿವಾಸಿ ವೀರಯ್ಯ ಎಂಬವರ ಪುತ್ರ ಪುರುಷೋತ್ತಮ್ (31) ಹಾಗೂ ಹೂಟಗಳ್ಳಿ ಎಸ್ಆರ್ಎಸ್ ಕಾಲೋನಿ ಲೇ. ಮಹದೇವಪ್ಪ ಎಂಬವರ ಪುತ್ರ ಎಂ.ಕಾಂತರಾಜು ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಹೂಟಗಳ್ಳಿ ಎಸ್ಆರ್ಎಸ್ ಕಾಲೋನಿಯ ಮನೆ ನಂ.267ರ ಮಹಡಿ ಮೇಲೆ ಸಿಸಿಬಿ ಪೊಲೀಸರು ರಾತ್ರಿ ದಾಳಿ ನಡೆಸಿ, ಅಕ್ರಮವಾಗಿ ಆನ್ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳು ಹಾಗೂ ಬೆಟ್ಟಿಂಗ್ನಲ್ಲಿ ತೊಡಗಿಸಿದ್ದ 4580, 12 ಮೊಬೈಲ್, 1 ಲ್ಯಾಪ್ಟಾಪ್, 1 ಸ್ಯಾಮ್ಸಂಗ್ ಗ್ಯಾಲಕ್ಷಿ ಟ್ಯಾಬ್, 1 ಎಲ್ಸಿಡಿ ಟಿವಿ, 1 ಪ್ರಿಂಟರ್, ಬಳಕೆ ಮಾಡದ 9 ಸಿಮ್ ಕಾರ್ಡ್ಗಳು, 1 ಬೈಕ್, 1 ಕಾರು ಸೇರಿದಂತೆ ಒಟ್ಟು 4 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ನಡೆಸಲು ಅನಧಿಕೃತವಾಗಿ ಕೊಠಡಿ ನೀಡಿ, ಬೆಟ್ಟಿಂಗ್ಗೆ ನೆರವು ನೀಡಿದ್ದ ಮನೆಯ ಮಾಲೀಕ ಕಾಂತರಾಜು ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಕೆ.ಎನ್. ಮಾದಯ್ಯ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಕೆ.ಎನ್. ಯಶವಂತಕುಮಾರ್, ಆರ್.ಜಗದೀಶ್, ಎಎಸ್ಐ ಎಂ.ಡಿ. ಶಿವರಾಜು ಮತ್ತು ಸಿಬ್ಬಂದಿ ಬಸವರಾಜು, ಕೆ.ವಿಜಯ್, ಡಿ. ಶ್ರೀನಿವಾಸಪ್ರಸಾದ್, ಮಂಜುನಾಥ, ರಾಮಸ್ವಾಮಿ, ಶಿವರಾಜು, ಸುನಿಲ್, ರಾಮಚಂದ್ರ ಈ ದಾಳಿ ನಡೆಸಿದ್ದಾರೆ.
ಬೆಟ್ಟಿಂಗ್ ವಿರುದ್ಧ ಕ್ರಮ: ಮನೆಯ ಮಾಲೀಕರು ಬಾಡಿಗೆ ನೀಡುವಾಗ ಬಾಡಿಗೆದಾರರ ಪೂರ್ವಪರ ವಿಚಾರಿಸಿ, ಅಧಿಕೃತ ದಾಖಲೆ ಪಡೆದು ಬಾಡಿಗೆ ನೀಡಿದ್ದಲ್ಲಿ ಹಾಗೂ ಬಾಡಿಗೆದಾರರ ಚಟುವಟಿಕೆ ಗಮನಿಸಿದಲ್ಲಿ ಇಂತಹ ಅವಘಡಗಳನ್ನು ತಪ್ಪಿಸಬಹುದಾಗಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವ ಆಸಾಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

